ಎಂ.ಸಿ.ಎಷರ್, ಹಾರ್ಹೆ ಲೂಯಿ ಬೊರೇಸ್: ನಿರಂತರತೆಯ ಚಕ್ರವ್ಯೂಹಗಳು

ಡಚ್ ಸಂಜಾತ ಎಂ.ಸಿ.ಎಷರ್ ಹುಟ್ಟಿದ್ದು ೧೯೦೨ರಲ್ಲಿ. ೭೦ ವರ್ಷಗಳ ಜೀವನಕಾಲದಲ್ಲಿ ಎಷರ್ ಅಸಂಖ್ಯಾತ ಚಿತ್ರಗಳನ್ನು ಅನೇಕ ಮಾಧ್ಯಮಗಳಲ್ಲಿ ಬಿಡಿಸಿದರು. ಚಿತ್ರ ನೋಡಿದ ಕೂಡಲೇ 'ಎಷರ್' ಎಂದು ಗುರುತಿಸಬಹುದಾದಂತಹ ಪ್ರತ್ಯೇಕತೆ ಇವರ ಶೈಲಿಯಲ್ಲಿದೆ. ಎಲ್ಲ ಚಿತ್ರಗಳಲ್ಲೂ ಇರುವ ಸಾಮಾನ್ಯ ಅಂಶವೆಂದರೆ ಅವುಗಳಲ್ಲಿನ ಚಾಮತ್ಕಾರಿಕ ಗುಣ. ಈ ಚಿತ್ರಗಳು ನಮ್ಮ ಹೃದಯವನ್ನು ಕಲಕುವುದಿಲ್ಲ. ಅವುಗಳ ಕಲಾತ್ಮಕ ಅಂಶದ ಬಗ್ಗೆ ಟಿಪ್ಪಣಿ ಮಾಡುವುದೂ ಕಷ್ಟ. ಜೊತೆಗೆ ಕಲೆ, ಕಲಾವಿಮರ್ಶೆಯಲ್ಲಿ ಯಾವ ಅನುಭವವೂ ಇಲ್ಲದ ನನಗೆ ಇದು ಕೈಗೆಟುಕುವ ವಿಷಯವೂ ಅಲ್ಲ. ಆದರೆ ಒಂದಂಶ ನಿಜ: ಎಷರ್ ಚಿತ್ರಗಳು ಬೌದ್ಧಿಕವಾಗಿ ಸಾಕಷ್ಟು ಕಸರತ್ತು ಮಾಡಿಸುತ್ತವೆ. ಸತ್ಯ-ಮಿಥ್ಯೆಯ ನಡುವಿನ ಗೆರೆಯನ್ನು ಅವು ಪ್ರಶ್ನಿಸುತ್ತವೆ.



7 comments:

Vinayaka Pandit said...

ಶ್ರೀರಾಮ್, ನಿಮ್ಮ ಬ್ಲಾಗ್-ಗಳು ಚೆನ್ನಾಗಿರುತ್ತವೆ. ಒಮ್ಮೆಯೂ ಬೋರಾಗುವುದಿಲ್ಲ! ಹಾಫ಼್ಸ್ಟಾಡರ್-ಅವರ ಪುಸ್ತಕಕ್ಕೆ ನಾಲ್ಕನೇ ಕೊಂಡಿ ಸೇರಿಸಬಹುದಾದ ಬಗೆಗೆ ಸೂಚಿಸಿರುವದು ಕುತೂಹಲಕಾರಿಯಾಗಿದೆ. ಇವತ್ತೂ ಹಾಗೇ ಅನಿಸುತ್ತದೆಯೆ? ಸಂಗೀತ, ಗಣಿತ, ಮತ್ತು ಚಿತ್ರಕಲೆಗಳ ಮೇದಾವಿಗಳಾ ಪಟ್ಟಿಗೆ ಸಾಹಿತ್ಯದ ಪ್ರತಿನಿಧಿ ಸೇರಬೇಕಾಗಿದ್ದರೆ, ಕಾಫ಼್ಕಾ ಹೇಗೆ? ಹಾಫ಼್ಸ್ಟಾಡರ್-ಅವರ ಅವರ ಪುಸ್ತಕ ಓದಲು ಹಿಡಿದಾಗಲೆಲ್ಲ ಮಧ್ಯದಲ್ಲೇ ಬಿಟ್ಟು ಹೋಗುತ್ತಿದೆ. ಮತ್ತೆ ಎತ್ತಿಕೊಂಡಾಗ ಶುರುವಿನಿಂದ ಓದುವದು ಅವಶ್ಯ ಅನಿಸುತ್ತದೆ. ಒಟ್ಟಿನಲ್ಲಿ, ನನ್ನ ಮಟ್ಟಿಗೆ ಕಬ್ಬಿಣದ ಕಡಲೆ. ನಿಮ್ಮ ಅನುಭವ ಹೇಗಿತ್ತು? ಒಂದೇ ಏಟಿನಲ್ಲಿ ಓದಿದಿರಾ? ಶುಭಾಶಯಗಳು - ವಿನಾಯಕ.

ಎಂ.ಎಸ್.ಶ್ರೀರಾಮ್ said...

ನಾಲ್ಕನೆಯ ಕೊಂಡಿಯ ಬಗೆಗೆ ನನ್ನ ಅಭಿಪ್ರಾಯ ಬದಲಾಗಿಲ್ಲ. ಆ ಕೊಂಡಿ ಕಾಫ್ಕಾ ಆಗಬಹುದೇ? ಬಹುಶಃ ಇಲ್ಲ. ಕಾಫ್ಕಾ ಬರವಣಿಗೆಯಲ್ಲಿ ವಾಸ್ತವದಲ್ಲಿರುತ್ತಲೇ ಮಿಥ್ಯೆಯತ್ತ ಹೋಗುವ ಗುಣ ಅಷ್ಟಾಗಿ ಕಾಣುವುದಿಲ್ಲ.. ಕಾಫ್ಕಾರ ಜಗತ್ತು ಅತಿವಾಸ್ತವದ್ದು. ಆದ್ದರಿಂದ ಅವರ ಸಾಹಿತ್ಯವನ್ನು ಸಾಲ್ವಡಾರ್ ಡಾಲಿಯ ಚಿತ್ರಗಳೊಂದಿಗೆ ಚರ್ಚಿಸಬಹುದೆನ್ನಿಸುತ್ತದೆ. ಈ ಸಂಧರ್ಭದಲ್ಲಿ ಒಗ್ಗುವವರು ಹೆಚ್ಚಿನಂಶ ಲ್ಯಾಟಿನ್ ಅಮೆರಿಕನ್ ಲೇಖಕರು. ಇದು ನನ್ನ ಮೊದಲ ಪ್ರತಿಕ್ರಿಯೆ.. ಹಾಗಂತ ಕಾಫ್ಕಾ ಸಾಹಿತ್ಯದ ಸಾಧ್ಯತೆಯನ್ನು ನಾನು ತಳ್ಳಿಹಾಕುತ್ತಿಲ್ಲ, ನನಗೆ ಈಗಲೂ ಬೊರ್ಹೆಸ್ ಸಾಹಿತ್ಯ ಇದಕ್ಕೆ ಅರಿ ಸಮರ್ಪಕ ಅನ್ನಿಸುತ್ತದೆ.

ಹಾಫ್ ಸ್ಟಡರ್ ಪುಸ್ತಕವನ್ನು ನಾನು ಪೂರ್ತಿಯಾಗಿ ಓದಿಲ್ಲ. ಆಗಾಗ ಕೆಲ ಭಾಗಗಳನ್ನು ಓದುತ್ತೇನೆ. ಅದು ನನಗೆ ರೆಫರೆನ್ಸ್ ಪುಸ್ತಕವಿದ್ದಂತೆ. ಬಹುಶಃ ಅದರ ಉದ್ದೇಶವೂ ಅದೇ ಇದ್ದೀತು.

ಶ್ರೀರಾಮ್

Vinayaka Pandit said...

ಕಾಫ಼್ಕಾ ಅವರ ಬರೆವಣಿಗೆ ಅತಿವಾಸ್ತವದಲ್ಲಿರುತ್ತದೆ ಎಂಬುದು ಅವರ ಬರವಣಿಗೆಯನ್ನು ತೀರ ಸರಳೀಕರಿಸಿದಂತೆ ಎಂದು ನನಗನಿಸುತ್ತದೆ. ಇಂಗ್ಲೀಷಿನಲ್ಲಿ consciousness (ಪೃಜ್ನೆ) ಎನ್ನುವ ಕಲ್ಪನೆಯನ್ನು ಅರಿಯಲು ಹೊರಟಿದೆ GEB. ಹಾಫ಼್ಸ್ಟಾಡರ್ ಹೇಳುವಂತೆ GEB ಉತ್ತರಿಸಲು ಪ್ರಯತ್ನಿಸುತ್ತಿರುವ ಪ್ರಶ್ನೆ do words and thoughts follow formal rules, or do they not? {ಅಂತರ್ಜಾಲದಲ್ಲಿರುವ ಮಡಿವಂತ ಕನ್ನಡಿಗರಿಗೆ - ಶಬ್ದಗಳು ಮತ್ತು ಯೋಚನೆಗಳು ಶಿಷ್ಟವಾದ ಕಾಯಿದೆಗಳನ್ನು ಅನುಸರಿಸುತ್ತವೆಯೆ? :-)}ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಕಾಫ಼್ಕಾ ಅವರ the castle ಆಗಲೀ ಅಥವಾ amerika ಆಗಲಿ ಅಥವಾ ಒಂದು ಬಕೆಟ್ಟು ಕೆಂಡ ಹುಡುಕುತ್ತಿರುವ ಚಳಿಗಾಲದಲ್ಲಿ ನಡುಗುತ್ತಿರುವ ವ್ಯಕ್ತಿ ಬಕೆಟ್ಟಿನ ಮೇಲೇ ಕುಳಿತು ಹಾರಿ ಹೋದ ಕಥೆಯಾಗಲಿ, ಅತಿಸೂಕ್ಷ್ಮವಾದ consciousnessನಿಂದ ಉಧ್ಭವಿಸಿದ್ದು ಎನ್ನಬಹುದಲ್ಲವೇ? ನಾನು ಈ ದೄಷ್ಟಿಯಿಂದ ಯೋಚಿಸುತ್ತಿದ್ದೆ. ಕಾಫ಼್ಕಾ ಅವರ ಬರವಣಿಗೆಯನ್ನು ಕೇವಲ ಪ್ರತಿಮೆಗಳಲ್ಲಿ ಅಥವಾ ಅವರ ವೈಯಕ್ತಿಕ ಜೀವನದ ಹಿನ್ನೆಲೆಯಲ್ಲಿ ನೋಡುವದರಿಂದ ಅವರ ಪುಸ್ತಕಗಳಲ್ಲಿರುವ ವಿಶೆಷ ಜಗತ್ತಿನಿಂದ ವಂಚಿತರಾಗುತ್ತೇವೆ. ಇದರ ಬಗ್ಗೆ ಕುಂದೇರಾ ಸೊಗಸಾಗಿ ಬರೆದಿದ್ದಾರೆ.

ಮತ್ತೊಂದು ಸೋಜಿಗದ ವಿಷಯ. GEBಯ ಹೊಸ ಪ್ರತಿಯ ಮುಖಪುಟದ ಚಿತ್ರ ನೋಡಿದ್ದೀರಾ? ಬಹಳ ಮಜವಾಗಿದೆ. ಎರಡು ವಿಶೇಷ ಘನಾಕೄತಿಗಳು ಸಾಲಿನಲ್ಲಿವೆ. ಅವನ್ನು ಪಕ್ಕದಿಂದ ಮತ್ತು ಮುಂದಿನಿಂದ ನೋಡಿದರೆ EG ಮತ್ತು GE ಕಾಣುತ್ತವೆ. ಮೇಲಿನಿಂದ ನೋಡಿದರೆ ಮಾತ್ರ B ಕಾಣುತ್ತದೆ! ಮೂರು ಕೊಂಡಿಗಳನ್ನು ಚಿತ್ರಿಸಲು ಇದು ಸೂಕ್ತವಾಗಿದೆ. ನಾಲ್ಕನೆ ಕೊಂಡಿಯಿದ್ದಿದ್ದರೆ ಆ ಚಿತ್ರವನ್ನು ಹೇಗೆ ಬಿಡಿಸಬೇಕು ಎಂದು ಯೋಚಿಸಿದರೆ, ಎಷರ್ ಅವರ ಚಿತ್ರದ ಮೆಟ್ಟಿಲುಗಳನ್ನು ಅನುಸರಿಸಿದಂತೆ ತಲೆ ತಿರುಗುತ್ತದೆ! ಅದಕ್ಕಾದರೂ ನಾಲ್ಕನೇ ಕೊಂಡಿಯನ್ನು ಬಿಟ್ಟಾರು, ಹಾಫ಼್ಸ್ಟಾಡರ್! ವಿಕಿಪೀಡಿಯಾದಲ್ಲಿ GEB ಬಗ್ಗೆ ಇರುವ ಉಲ್ಲೇಖದಲ್ಲಿ ಈ ಚಿತ್ರವನ್ನು ನೋಡಬಹುದು. ಅಂದ ಹಾಗೆ ಈ ಚರ್ಚೆಯಲ್ಲಿ ಇದು ಮೂರನೆಯ ಕೊಂಡಿ!

ಎಂ.ಎಸ್.ಶ್ರೀರಾಮ್ said...

ಹೌದು, ನಾನು ತುಂಬವೇ ಸರಳೀಕರಿಸಿ ಹೇಳಿದೆ.ನಾಲ್ಕನೆಯ ಕೊಂಡಿಯನ್ನು ಅನೇಕ ಮಜಲುಗಳಿಂದ ಕಾಣಬಹುದು. ಅತಿವಾಸ್ತವವೆನ್ನುವುದು ನಾವು ಎಳೆದಿರುವ ಗೆರೆಯಷ್ಟೆ? ನಾನು ಆ ಲೇಖನವನ್ನು ಬರೆದ ಸಂಧರ್ಭದಲ್ಲಿ ನನಗೆ ಮನಸ್ಸಿಗೆ ತಕ್ಷಣ ಹೊಳೆದದ್ದು ಬೊರ್ಹೇಸ್..ನಾನು ಬೊರ್ಹೆಸ್ ಯಾಕೆ ಎನ್ನುವುದನ್ನು ಸಮರ್ಥಿಸುವುದರ ಬದಲಾಗಿ ಕಾಫ್ಕಾ ಯಾಕಲ್ಲ ಎಂಬ ರಸ್ತೆ ಹಿಡಿದದ್ದು ಅಸಮಂಜಸ. ಕಾಫ್ಕಾ ಕೂಡಾ ಆಗಬಹುದೇನೋ.. ಆದರ ಅಂತರ್ಗತ ವಿರೋಧಭಾಸ, ವಾಸ್ತವದಿಂದ ಭ್ರಾಮಕಲೋಕಕ್ಕೆ ಪಯಣ, ವಾಸ್ತವವೊ ಭ್ರಮೆಯೋ ಎಂಬ ದ್ವಂದ್ವ ಫ್ಯಾಂಟಸಿಯತ್ತ ಪಯಣ - ಎಲ್ಲವನ್ನೂ ನೋಡಿದಾಗ ಒಟ್ಟಾರೆಯಲ್ಲಿ ನನ್ನ ಮನಸ್ಸಿಗೆ ಬೊರ್ಹೆಸ್ ಸಮರ್ಪಕವೆನ್ನಿಸಿತು.. ಆದರೆ ನೀವು ಹೇಳಿದಂತೆ ಬೇರೆ ಲೇಖಕರ ಕ್ರಿತಿಗಳನ್ನೂ ಚರ್ಚಿಸಬಹುದು.. ಇದನ್ನು ಸಮರ್ಥಿಸಲು ನನಗೆ ಆಪ್ತ ಶಬ್ದಗಳು ಸಿಗಿತ್ತಿಲ್ಲ. ನೀವು ಕುಂದೆರಾನ ಮಾತು ತೆಗೆದಿರುವುದರಿಂದ ಅಲ್ಲಿಂದ ಒಂದು ಉದಾಹರಣೆ ಕೊಡುತ್ತೇನೆ. (ಇದು, ಕಫ್ಕಾನನ್ನು ತಳ್ಳಿಹಾಕುವುದಕ್ಕಲ್ಲ, ಬದಲಿಗೆ ಬೊರ್ಹೆಸ್ ಸಮರ್ಥಿಸುವುದಕ್ಕೆ). ಕುಂದೆರಾನ ಹಿಚಹೈಕಿಂಗ ಗೇಮ್ ಕತೆ ಯನ್ನೂ ಬೊರೆಸ್ ಅಂಡ್ ಐ ಕತೆಯನ್ನೂ ಪಕ್ಕದಲ್ಲಿಟ್ಟು ನೋಡಿದರೆ, ಮೂಲತಃ ಎರಡೂ ಒಂದು ತರದ ಅಸ್ತಿತ್ವ ಮತ್ತು ಸತ್ಯಾನ್ವೇಷಣೆಯನ್ನ ಅರಸಿ ಹೊರಟವು. ಆದರ ಕುಂದೆರಾ ಕತೆ ವಾಸ್ತವದ ನೆಲೆಯಲ್ಲಿ ಭಾವನೆಗಳ ಆಧಾರದ ಮೇಲೆ ಆ ವಸ್ತುವನ್ನ ಚರ್ಚಿಸಿದರೆ, ಬೊರೆಸನ ಕತೆಯಲ್ಲಿ ಇಂತಹದ್ದು ವಾಸ್ತವದಲ್ಲಿ ಆಗುವುದಿಲ್ಲ (ಎಷರನ ಜಲಪಾತದಂತೆ) ಅಂತ ನಮಗೆ ತಿಳಿದಿದ್ದೂ ನಾವು ಅದರಲ್ಲಿ ತೊಡಗಿಸಿಕೊಳ್ಳುತ್ತೇವೆ. ಇಂಥ ಗುಣ ಬೊರೆಸ್ ಕತೆಗಳಲ್ಲಿ ಮತ್ತೆ ಮತ್ತೆ ಕಾಣುತ್ತವೆ. ಹಾಗೆ ನೋಡಿದರೆ ನಾನು ಮಿಕ್ಕ ಲ್ಯಾಟಿನ್ ಅಮೆರಿಕನ್ ಲೇಖಕರನ್ನು ನನ್ನ ಹಿಂದಿನ ಅಬಿಪ್ರಾಯದಲ್ಲಿ ಸಮರ್ಥನೆ ಮಡಿ ಬರೆದದ್ದೂ ಅಷ್ಟು ಸಮರ್ಪಕವಾಗಿರಲ್ಲಿ ಎಂದು ಒಪ್ಪಿಕೊಳ್ಳುತ್ತೇನೆ. ನನ್ನ ವಾದ ಕನ್ವಿಂಸಿಂಗ್ ಆಗಿ ಇಲ್ಲ ಅಂತ ನನಗೆ ಗೊತ್ತು.. but I hope you know what I mean.

ಹೊಸ ಮುಖಪುಟ(ಗಳನ್ನು) ನೊಡಿದ್ದೇನೆ. ನಾಲ್ಕನೆಯ ಕೊಂಡಿಯನ್ನು ಸೇರಿಸುವುದು ಕಷ್ಟವೇ.. ಆದರ ನನ್ನ ವಾದ ಒಪ್ಪಿದರೆ bach ಮೇಲೆ borges ನನ್ನು ಹೇರಿ ತಪ್ಪಿಸಿಕೊಳ್ಳಬಹುದು!! ನಿಮ್ಮ ವಾದ ಒಪ್ಪಿದರ ಕಾಫ್ಕಾನನ್ನು ಎಲ್ಲಿ ತೂರಿಸುತ್ತೀರ? ಈ ದೃಷ್ಟಿಯಿಂದಲೂ ಬೊರೇಸನೇ ಸರಿ!! (ಇದಕ್ಕಿಂತ ಸುಲಭದ ಪಲಾಯನ ದಾರಿ ನನಗೆ ಸಿಗುತ್ತಿಲ್ಲ)..

ಶ್ರೀರಾಮ್

Vinayaka Pandit said...

ಲ್ಯಾಟಿನ್ ಅಮೇರಿಕದ ಲೇಖಕರಲ್ಲಿ ನೀವು ಹುಡುಕುತ್ತಿರುವ ಅಂಶಗಳು ಇವೆ ಎಂದು ಒಪ್ಪಿಕೊಳ್ಳುತ್ತೇನೆ. ಕುಂದೇರರ ಕಥೆ ಓದಿದ್ದೇನೆ. laughable lovesನ ಎಲ್ಲ ಕಥೆಗಳನ್ನೂ ಓದಿದ್ದೇನೆ. ಅವರ novel ಅಂದರೆ ಏನು ಎಂಬ ಲೇಖನಗಳು ನನಗೆ ಬಹಳ ಮೆಚ್ಚುಗೆಯಾಗಿದ್ದವು. ಅವರ ಇತ್ತೀಚಿನ ಕಾದಂಬರಿಗಳನ್ನು ಓದಿದೀರಾ? ನನಗಂತೂ ಹತಾಶೆಯಾಯಿತು.

ಎಂ.ಎಸ್.ಶ್ರೀರಾಮ್ said...

ಕುಂದೆರಾ ಚೆಕ್ ಬಿಟ್ಟು ಫ್ರೆಂಚ್ ನಲ್ಲಿ ಬರೆಯಲು ಪ್ರಾರಂಭ ಮಾಡಿದಾಗಿನಿಂದ "Let the Old Dead make Way for the Young Dead" ಕತೆಯ ವಿವಿಧ ವಿಸ್ತೃತ ರೂಪಗಳನ್ನು ಕೊಡುತ್ತಿದ್ದಾರೆ... ನನಗೆ ಆ ಕಥೆಗೂ Ignorance, Slowness, Identity ಕಾದಂಬರಿಗಳಿಗೂ ವ್ಯತ್ಯಾಸವೇ ಕಾಣುತ್ತಿಲ್ಲ!! ಬಹುಶಃ ಭಾಷೆಯ ಬದಲಾವಣೆ ಅದಕ್ಕೆ ಕಾರಣವಿರಲಾರದು.. ಆದರೆ ಕಾರಣವಿಲ್ಲದೆಡೆ ಕಾರಣವನ್ನು ಹುಡುಕದಿದ್ದರೆ ನಮ್ಮ ವಾದ ಘನವಾಗುವುದು ಹೇಗೆ?!!

Vinayaka Pandit said...

ಶ್ರೀರಾಮರು ಹೇಳಿಕೊಟ್ಟಿರುವ ಪಲಾಯನ ತಂತ್ರವನ್ನು ಹೂಡಿ ಹೀಗೆ ಹೇಳಬಹುದು: ನಮಗೆ ನಿಮಗೆ ಚಮತ್ಕಾರೀ ಅನುಭವವನ್ನು ಕೊಡುವ ಸಂಗೀತದಲ್ಲಿ ಕುಶಲ ಗಣಿತಜ್ಞ ಕಸರತ್ತು ಮಾಡಿ self-referentialityಯನ್ನು ಗುರುತಿಸಬಹುದು :-) - ವಿನಾಯಕ.