ಜಂಗಮನಾಗಬಯಸಿದ ರಂಗಸ್ಥಾವರ - ಸಿಜಿಕೆ

ಸಿಜಿಕೆಯವರ ಸಂಪರ್ಕ ಕಡಿದು ವರ್ಷಗಳೇ ಆದ ನಂತರ ಅವರ ನೆನಪು ಇದ್ದಕ್ಕಿದ್ದ ಹಾಗೆ ಯಾಕೆ ಬಂತು ಅನ್ನುವುದು ನನಗೆ ಗೊತ್ತಿಲ್ಲ, ಆದರೆ ನಾಟಕದ ಸಂಧರ್ಭದಲ್ಲಿ ಸಿಜಿಕೆಯವರನ್ನು ನೆನಪು ಮಾಡಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲವೇನೋ. ಹಾಗೆ ನೋಡಿದರೆ ನನಗೆ ಸಿಜಿಕೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಅವರೊಡನೆಯ ಒಡನಾಟ ಕೇವಲ ಒಂದು ವರ್ಷದ ಅವಧಿಗೆ ಸೀಮಿತವಾಗಿತ್ತು. ಪಾಲ್ ಸುದರ್ಶನನ ಒಡನಾಟದಲ್ಲಿ ರವೀಂದ್ರ ಕಲಾಕ್ಷೇತ್ರದ ಕಟ್ಟೆಯಲ್ಲಿ ಅನೇಕ ಸಂಜೆಗಳನ್ನು ನಾವುಗಳು ಕಳೆದದ್ದುಂಟು. ಎಪ್ಪತ್ತು-ಎಂಬತ್ತರ ದಶಕದ ರಂಗಭೂಮಿಯ ಉತ್ತುಂಗದ ನಂತರ ಕಲಾಕ್ಷೇತ್ರದ ಕಟ್ಟೆ ಹೆಚ್ಚು ಕಮ್ಮಿ ಖಾಲಿಯಾಗಿತ್ತು. ಕಾರ್ನಾಡರು ಸಿನೆಮಾದತ್ತ ಒಲವು ತೋರಿ ಆ ಕ್ಷೇತ್ರದಲ್ಲಿ ಕೆಲವು ಪ್ರಯೋಗಗಳನ್ನು ನಡೆಸುತ್ತಿದ್ದರು. ಬಿ.ವಿ.ಕಾರಂತರು ಸ್ವಲ್ಪದಿನ ಕಾರ್ನಾಡರ ಜೊತೆ ಸಿನೇಮಾ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ರಂಗಭೂಮಿಯ ಕೆಲಸದಲ್ಲಿ ನಿರತರಾಗಿ ಭೋಪಾಲದ ಭಾರತ ಭವನ, ಎನ್.ಎಸ್.ಡಿಗಳತ್ತ ಒಲವು ತೋರಿದ್ದರು. 
3 comments:

ಹೆಚ್ ಪಿ said...

ಮಾನ್ಯ ಶ್ರೀರಾಮ್‌ರವರೆ,

ಸಿ ಜಿ ಕೆ ಯವರ ಬಗ್ಗೆ ವಿಕಿಪೀಡಿಯದಲ್ಲಿ ಮಾಹಿತಿ ಸೇರಿಸಲು ಸಾಧ್ಯವಾಗುವುದೆ?

ಮುಂದಿನ ಪೀಳಿಗೆಗೆ ಇಂಥವರನ್ನು ಪರಿಚಯಮಾಡಿಕೊಡುವ ಲೇಖನ ವಿಕಿಪೀಡಿಯದಂತ ಜಾಗದಲ್ಲಿ ದೊರೆತರೆ ಇವರಿಗೆ ಸಾಕಷ್ಟು ಗೌರವ ಸಂದಂತೆ. ಏನಂತೀರಿ?

Anonymous said...

Shriram,
aMtarjAladalli kannaDa kRutigaLu heccu heccu saMKyeyalli prakaTavAguttiruva I saMdarBadalli exclusive rights bagge KaMDita carceyAgabEku. I viShayada kuritu nimma anisikegaLannu nimma blaaginalle baredu carceyannu shuru maaDabEkeMdu nimmannu kOruttEne.

-- rAGavEMdra

Anonymous said...

sri shriram

it was a great article on CGK, and as sri HP's request we should add about him in Wikipedia and other encyclopedia. he was amezing personality. i was working very closely with him, i had herd about your name from him (i think now you are in washington??). about 9 yrs back i had published a book on him during that time we wanted to meet all his friends. but we were unable to. .
(other than `Kalagnani Kanaka' Ranganiranthara has published few more books)
till his last day in bangalore i had good contact with him.
the day before he left us he had given me a work to get him a book published by prism books on Mr. Murthy. which is still pending. . . . .

thanking you
kiran vati