skip to main |
skip to sidebar
ಕನ್ನಡದಲ್ಲಿ ಅತ್ಯುತ್ತಮ ಸಣ್ಣ ಪತ್ರಿಕೆಗಳು ಬಂದಿವೆ, ಮತ್ತು ನಿಂತುಹೋಗಿವೆ ಸಹ. ಕೆಲವು ಸಣ್ಣ ಪತ್ರಿಕೆಗಳು ಆಯಾಕಾಲದ ಸಾಹಿತ್ಯದ, ಸಾಹಿತ್ಯ ಶೈಲಿಯನ್ನು ಪ್ರತಿನಿಧಿಸಿ ನಿಂತಿವೆ. ಹೀಗಾಗಿಯೇ ಅವು ಆಯಾ ಸಾಹಿತ್ಯಕಾಲದ ಉತ್ತಮ ಲೇಖಕರ ಹೆಸರಿನ ಜೊತೆ ಅವಿನಾಭಾವವಾಗಿ ಅಂಟಿನಿಂತಿದೆ. ಸಾಕ್ಷಿಯ ಜೊತೆ ಅಡಿಗರ ಹೆಸರು, ರುಜುವಾತುವಿನ ಜೊತೆ ಅನಂತಮೂರ್ತಿಯವರ ಹೆಸರು, ಅದಕ್ಕೂ ಹಿಂದೆ ಜೀವನದ ಜೊತೆ ಮಾಸ್ತಿಯವರ ಹೆಸರು ಇದಕ್ಕೆ ಉದಾಹರಣೆಗಳು. ಒಂದು ಥರದಲ್ಲಿ ಈ ಲೇಖಕರು ಆಯಾ ಸಮಯಘಟ್ಟಕ್ಕೆ ಪ್ರಯೋಗಗೊಂಡ ಹೊಸ ಬರವಣಿಗೆಯ ಶೈಲಿಯನ್ನು ಪ್ರತಿನಿಧಿಸುತ್ತದ್ದರಿಂದ ಆ ಶೈಲಿಯ ಸಮರ್ಥ ಅನುಯಾಯಿಗಳನ್ನು ಹುಟ್ಟುಹಾಕುವುದರಲ್ಲಿ ಈ ಪತ್ರಿಕೆಗಳು ಪ್ರೇರಕವಾಗುವಂತಹ ಕೆಲಸ ಮಾಡಿದವು. ಅಂಕಣದಂತಹ ಪತ್ರಿಕೆಯನ್ನು ಹುಟ್ಟುಹಾಕಿದ್ದು ಪಿಪಿ ಗೆಳೆಯರ ಬಳಗದ ತ್ರಿಮೂರ್ತಿಗಳು [ಪಿಪಿ= ಪೋಲಿ ಪಟಾಲಂ]. ಅವರಲ್ಲಿ ಎಚ್ ಎಸ್ ಆರ್ ಮತ್ತು ಕೆ ವಿ ನಾರಾಯಣ ವಿಮರ್ಶಕರೆಂದು ಪ್ರಸಿದ್ಧರು. ಚಿ.ಶ್ರೀನಿವಾಸರಾಜು ಸಾಹಿತ್ಯಪ್ರೇಮಿ, ಸಾಹಿತ್ಯ ಪರಿಚಾರಕರು, ಮತ್ತು ಲೇಖಕರು [ಆದರೆ ಹೆಚ್ಚು ಬರೆದವರಲ್ಲ]. ಬಹುಶಃ ಕನ್ನಡದ ಸಣ್ಣಪತ್ರಿಕೆಯಲ್ಲಿ ಒಂದು ಗುಂಪಿನ ಪ್ರಯತ್ನ ಇದೇ ಮೊದಲನೆಯದಿರಬಹುದು....
1 comment:
ಶ್ರೀ,
ಸಣ್ನಪತ್ರಿಕೆಗಳ ಬಗೆಗೆ ನಿಮ್ಮ ಈ ತುಣುಕನ್ನು ಓದಿದೆ. ಖುಷಿಯಾಯಿತು. ಹಾಗೆಯೆ ನಿಮ್ಮ 'ಪಪ್ಪು ಪಾಸ್ ಹೋಗಯ' ಎನುವ ತುಣುಕು ಬಹಳ ಖುಷಿ ನೀಡಿದೆ. ಕನ್ನಡದ ಸಂದರ್ಭದಲ್ಲಿ, ಇಂಟರ್‌ನೆಟ್‌ನಲ್ಲಿ ನೀವು ಮಾಡುತ್ತಿರುವುದನ್ನು ಮತ್ತಷ್ಟು ಮಂದಿ ಮಾಡಲಾರಂಭಿಸಿದರೆ, "ಈ ದರಿದ್ರ ಕಂಪ್ಯೂಟರ್, ದರಿದ್ರ ಐಟಿ" ಎಂದು ಒಮ್ಮೊಮ್ಮೆ ಪ್ರೀತಿಯಿಂದ ಗೊಣಗಿಕೊಂಡು, ಮತ್ತೊಮ್ಮೆ ಸಿಟ್ಟಿನಿಂದ ಕಿಡಿಕಾರಲೇ ಬೇಕಾದ ಅನಿಶ್ಚಿತತೆಗಳ ನಡುವೆ, ಅತ್ಯಗತ್ಯವಾದ ಧೋರಣೆ, ನಿಲುವುಗಳು, ಸಂವೇದನೆ ತನ್ನಂತೆ ತಾನೆ ಸ್ವರೂಪ ಪಡೆದುಕೊಳ್ಳುತ್ತದೆ.
-ಶೇಖರ್‌ಪೂರ್ಣ
Post a Comment