Showing posts with label ಪುಸ್ತಕಲೋಕ. Show all posts
Showing posts with label ಪುಸ್ತಕಲೋಕ. Show all posts

ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು

ಕೋಟ ನೀಲಿಮಾರ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಇತ್ತೀಚಿನ ಪುಸ್ತಕ ಈಚೆಗೆ ಬರುತ್ತಿರುವ ಭಾರತೀಯರು ಬರೆಯುತ್ತಿರುವ ಇಂಗ್ಲೀಷ್ ಸಾಹಿತ್ಯದ ಸಂದರ್ಭದಲ್ಲಿ, ಒಂದು ಭಿನ್ನ ಲಹರಿಯನ್ನು ತರುತ್ತದೆ. ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಬರಹಗಾರರು ಪಶ್ಚಿಮಾಭಿಮುಖವಾಗಿ ಯಾರನ್ನೋ ಮೆಚ್ಚಿಸಲು ಮಾತ್ರ ಬರೆಯುತ್ತಿದ್ದಾರೆ ಎನ್ನುವ ಆರೋಪ ಹೊರಿಸುವುದು ಅಸಮಂಜನವೇ ಸರಿ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಭಾರತ ಕೇಂದ್ರಿತವಾಗಿ ಬರುತ್ತಿರುವ ಬರವಣಿಗೆಯಲ್ಲಿ ನಮಗೆ ಐದು ಭಿನ್ನ ಎಳೆಗಳು ಕಾಣಿಸುತ್ತಿವೆ.

  • ಮೊದಲ ಎಳೆ ಭಾರತದ ಮೇಲ್ವರ್ಗವನ್ನು ಪ್ರತಿನಿಧಿಸುವ [ಆದರೆ ಸಾಹಿತ್ಯವನ್ನು ಪ್ರತಿನಿಧಿಸಲಾರದ] ಶೋಭಾ ಡೇ, ಚೇತನ್ ಭಗತ್ ಗಳು ಹರಿಯಬಿಡುತ್ತಿರುವ ಸಾಹಿತ್ಯ.
  • ಎರಡನೆಯ ಎಳೆ ಅರವಿಂದ ಅಡಿಗ, ಅರುಂಧತಿ ರಾಯ್ ಪ್ರತಿನಿಧಿಸುವ ಸಾಹಿತ್ಯ. ಇದರಲ್ಲಿ ಭಾರತದ ಮೂಲ ಎಳೆಗಳಿದ್ದರೂ, ಅವರುಗಳ ಮನಸ್ಸಿನಲ್ಲಿರು ಓದಗ ವೃಂದ ವಿಶ್ವವ್ಯಾಪಿಯಾದ್ದರಿಂದ ಅವರ ಬರವಣಿಗೆಯೂ ಸಾಕಷ್ಟು ಗ್ಲೋಬಲೈಸ್ಡ್ ಬರವಣಿಗೆಯಾಗಿರುತ್ತದೆ.
  • ನಿಜಕ್ಕೂ ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ಬರೆಯುತ್ತಾ ಭಾರತವನ್ನು ಆಗಾಗ ಸಂದರ್ಭ ಮಾಡಿಕೊಂಡು ಬರೆವ ಲೇಖಕರಾದ ವಿಕ್ರಂ ಸೇಠ್ ಮತ್ತು ಅಮಿತಾವ್ ಘೋಷ್ ಮೂರನೆಯ ಎಳೆಗೆ ಸೇರುತ್ತಾರೆ.
  • ನಾಲ್ಕನೆಯ ಎಳೆಯಲ್ಲಿ ಭಾರತೀಯ ಸಂಜಾತರಾಗಿ, ಇತರೆ ದೇಶದ ಪಾಸ್ ಪೋರ್ಟ್ ಹೊಂದಿರುವ, ಆಗಾಗ ಇಲ್ಲಿಗೆ ವಾಪಸ್ಸಾಗುವ, ತಮ್ಮ ನೆನಪಿನ ಗಣಿಯಿಂದ - ಅಥವಾ ಪ್ರವಾಸೀ ಬೆರಗಿನಿಂದ ಭಾರತವನ್ನು ನೋಡುವ ಆದರೂ ಸಮರ್ಥವಾಗಿ ಬರೆಯಬಲ್ಲ ಸಲ್ಮಾನ್ ರಶ್ದೀ, ಝುಂಪಾ ಲಹಿರಿಗಳದ್ದು.
  • ಐದನೆಯ ಎಳೆಯಲ್ಲಿ ರಾಜಾರಾವ್ ಶಶಿ ದೇಶಪಾಂಡೆ, ಕೆ.ಆರ್. ಉಷಾರಂತೆ ಸ್ಥಳೀಯ ಸಂವೇದನೆಯನ್ನು ಇಂಗ್ಲೀಷಿನಲ್ಲಿ ಸಮರ್ಥವಾಗಿ ಬಿಂಬಿಸುವ, ಸಾಧ್ಯವಾಗಿದ್ದರೆ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಹಿತ್ಯ ರಚಿಸಬಹುದಾಗಿದ್ದ ಪರಂಪರೆಯ ಬರಹಗಾರರು. ಈ ಪರಂಪರೆಗೆ ಈಚಿನ ಸೇರ್ಪಡೆ ಕೋಟ ನೀಲಿಮಾ ಎನ್ನುವ ಲೇಖಕಿಯದ್ದು ಅನ್ನಿಸುತ್ತದೆ.


ಗುರುಪ್ರಸಾದ್ ಕಾಗಿನೆಲೆ - ಈ ವರೆಗೆ

ಈಚೆಗಷ್ಟೇ ನಾನು ಗುರುವಿನ ಶಕುಂತಳಾ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹಾಕಿಕೊಂಡಿದ್ದ ಟಿಪ್ಪಣಿಗಳಾಧಾರದ ಮೇಲೆ ಅವರ ಬಗೆಗೆ ಬರೆದಿದ್ದೆ. ಆ ಬರಹದ ಕಡೆಯ ಸಾಲುಗಳಿಂದ ಅವರ ಈ ವರೆಗಿನ ಬರವಣಿಗೆಯ ಅವಲೋಕನ ಮಾಡುತ್ತೇನೆ. 

"ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ."

ಹೀಗೆ ಬರೆಯುತ್ತಿದ್ದಾಗ ನನಗೆ ಗುರುವಿನ ಮಿಕ್ಕ ಕೃತಿಗಳ ಪರಿಚಯವಿರಲಿಲ್ಲ. ಅವರ ಕಾದಂಬರಿ ಬಿಳಿಯ ಚಾದರ ಬಿಡುಗಡೆಯಾಗಿರಲಿಲ್ಲ ಹಾಗೂ ಅವರ ಎರಡೂ ಪುಸ್ತಕಗಳಾದ ನಿರ್ಗುಣ ಮತ್ತು ಪ್ರಬಂಧಗಳ ಸಂಕಲನವಾದ ವೈದ್ಯ-ಮತ್ತೊಬ್ಬ ನಾನು ಓದಿರಲಿಲ್ಲ. ಈಗ ನಾನು ಅವುಗಳೆಲ್ಲವನ್ನೂ ಓದಿದ್ದೇನೆ. ಓದಿದ ನಂತರವೂ ನನ್ನ ಮೇಲಿನ ಅಭಿಪ್ರಾಯದಲ್ಲಿ ಮೂಲಭೂತ ಬದಲಾವಣೆಯೇನೂ ಆಗಿಲ್ಲ. ಆದರೂ ಒಬ್ಬ ಲೇಖಕನ ಕಾಳಜಿಗಳು ಹಾಗೂ ಬರಹಗಾರ ತೆರೆದುಕೊಳ್ಳುವ ರೀತಿಯಬಗ್ಗೆ ಕೆಲ ಒಳನೋಟಗಳನ್ನು ನಾನು ಈ ಹೊಸ ಓದಿನ ಮೂಲಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ. 
ಸ್ಲಂಡಾಗ್/ವೈಟ್ ಟೈಗರ್: ಸಂಭ್ರಮದ ನಡುವೆ ನೈತಿಕ ನಿಲುವಿನ ಕೆಲವು ಪ್ರಶ್ನೆಗಳು.

ಸ್ಲಂಡಾಗ್ ಮಿಲಿಯನೇರ್ ಮತ್ತು ಅರವಿಂದ ಅಡಿಗರ ಪುಸ್ತಕಗಳಿಗೆ ಅನಿರೀಕ್ಷಿತವಾದ ಪ್ರಚಾರ ಸಿಕ್ಕು ಎಲ್ಲೆಡೆ ಅದರ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಕೇತವೇ. ಈ ಎರಡೂ ಕೃತಿಗಳು ಜಗತ್ತಿನ ಸದಭಿರುಚಿಯ ಸಂಕೇತವೇ ಅನ್ನುವ ಪ್ರಶ್ನೆಗಳನ್ನು ಎಬ್ಬಿಸಿವೆ. ನಾನು ಈವರೆಗೂ ಮಾತನಾಡಿರುವ ಅನೇಕ ಜನರು ಇಲ್ಲವೇ ಈ ಎರಡೂ ಕೃತಿಗಳನ್ನು ಮೆಚ್ಚಿದ್ದಾರೆ, ಇಲ್ಲವೇ ಎರಡನ್ನೂ ಸಹಿಸಿಲ್ಲ. ಎರಡೂ ಕೃತಿಗಳ ಬಗ್ಗೆ ನನ್ನ ತಕರಾರನ್ನು ಚರ್ಚೆಗೆ ಹಚ್ಚಬೇಕಾದ್ದು ಮುಖ್ಯ. ಯಾಕೆಂದರೆ ಈ ಎರಡೂ ಕೃತಿಗಳು ಹಾಗೂ ಅವುಗಳಿಗೆ ದೊರಕಿರುವ ಮನ್ನಣೆ ನಾವು ಈ ವರ್ಷದಲ್ಲಿ ಸೃಜನಶೀಲತೆಯನ್ನು ಯಾವ ಮಾಪನದಲ್ಲಿ ನೋಡುತ್ತಿದ್ದೇವೆ ಅನ್ನುವ ಪ್ರಶ್ನೆಯನ್ನು ಎಬ್ಬಿಸುತ್ತವೆ.

ರಾಮ್ ಗುಹಾ ಬರೆದ ಕ್ರಿಕೆಟ್ ರಾಜ್ಯ

ಈ ಬಾರಿ ರಾಮ್ ಗುಹಾ ಜೊತೆಗೆ ಮತಷ್ಟು ಸಮಯ ಕಳೆಯಲಿದ್ದೇನೆ; ನನ್ನ ಬಾಲ್ಯದ ಕ್ರಿಕೆಟ್ಟಿಗೆ ಪಯಣ ಮಾಡಲಿದ್ದೇನೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ರಾಮ್ ಗುಹಾರ ಕ್ರಿಕೆಟ್ಟಿನ ಬಗೆಗಿನ ಪುಸ್ತಕವೂ ಒಂದು. ರಾಮ್ ಗುಹಾರ ಅನೇಕ ಬರವಣಿಗೆಗಳನ್ನು ನಾನು ಓದಿದ್ದೇನೆ, ಹಾಗೂ ಅವುಗಳನ್ನು ಇಷ್ಟಪಟ್ಟಿದ್ದೇನೆ. ವರಿಯರ್ ಎಲ್ವಿನ್ ಅವರ ಜೀವನ ಚರಿತ್ರೆ ರಾಮ್ ಅವರ ಅದ್ಭುತವಾದ ಸಂಶೋಧನಾ ಪ್ರತಿಭೆಯನ್ನು ತೋರುವ ಪುಸ್ತಕ. ರಾಮ್ ಒಳ್ಳೆಯ ಲೇಖಕರಷ್ಟೇ ಅಲ್ಲ, ಬರೇ ಬರವಣಿಗೆಯ ಆಧಾರದ ಮೇಲೆಯೇ ಜೀವನವನ್ನು ನಡೆಸುತ್ತಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ರಾಮ್ ಅವರ ಬರವಣಿಗೆಯನ್ನು ಶ್ರೇಣೀಕರಿಸುವುದು ಕಷ್ಟದ ಮಾತು.ಅರವಿಂದ ಅಡಿಗರ ಬಿಳಿಹುಲಿ

ಸಾಮಾನ್ಯವಾಗಿ ಹೊಸ ಲೇಖಕನ ಪ್ರಥಮ ಪುಸ್ತಕಕ್ಕೆ ದೊರೆಯುವುದಕ್ಕಿಂತ ಹೆಚ್ಚಿನ ಪ್ರಚಾರ ಈ ಪುಸ್ತಕಕ್ಕೆ ದೊರೆತಿರಬಹುದೇನೋ. ಈ ಪುಸ್ತಕ ಬಿಡುಗಡೆಯಾದ ಕೆಲದಿನಗಳಲ್ಲೇ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿತ್ತು. ಅನೇಕ ಟಿವಿ ವಾಹಿನಿಗಳಲ್ಲಿ ಈ ಪುಸ್ತಕದ ಜಾಹಿರಾತೂ ಕಂಡಿತ್ತು. ನನ್ನ ಅರಿವಿನಲ್ಲಿ ಸಣ್ಣ ಪರದೆಯ ಮೇಲೆ ಮೊದಲಬಾರಿಗೆ ಕಾರ್ಯಕ್ರಮಗಳನ್ನು ಒಂದು ಸಾಹಿತ್ಯ ಕೃತಿ ಪ್ರಾಯೋಜಿಸುತ್ತಿತ್ತು. ಇದೆಲ್ಲವೂ ಒಂದು ಹೊಸತನದಿಂದ ಕೂಡಿದ್ದು. ಸಾಹಿತ್ಯದ ಒಂದು ಕೊನೆಯಲ್ಲಿ ಚೇತನ್ ಭಗತ್‍ರ ಪುಸ್ತಕಗಳು ವಿಚಿತ್ರ ದಾಖಲೆಗಳನ್ನು ಸ್ಥಾಪಿಸುತ್ತಾ, ಬೆಳೆಯುತ್ತಾ ಹೋದಂತೆಯೇ ಈಗ ಜಾಹೀರಾತಿನ ಬಲವನ್ನೂ ಉಪಯೋಗಿಸಿ ಮಾರಾಟಮಾಡುತ್ತಿರುವ ’ಸಾಹಿತ್ಯ ಕೃತಿ’ಯಿಂದಾಗಿ ಭಾರತೀಯ ಆಂಗ್ಲ ಬರವಣಿಗೆಯ ಮಾರುಕಟ್ಟೆ ಮತ್ತೊಂದು ಘಟ್ಟವನ್ನೇ ತಲುಪಿದೆ ಅನ್ನಿಸುತ್ತದೆ. ಭಾರತೀಯ ಸಂಜಾತ ಹಿಂದಿನ ವಿಜೇತರನ್ನು ನೋಡಿದರೆ ಯಾರಿಗೂ ಈ ರೀತಿಯ ಓಪನಿಂಗ್ ದೊರೆತಿರಲಿಲ್ಲವೇನೋ. ಅರುಂಧತಿ ರಾಯ್‍ ಅವರ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಲು ನಿರಾಕರಿಸಿತ್ತು. ಅದರಲ್ಲಿನ ತಿರುಳನ್ನು ನೋಡಿದ ತರುಣ್ ತೇಜ್‍ಪಾಲ್ ಆ ಸಂಸ್ಥೆಯಿಂದ ಹೊರಬಿದ್ದು ಇಂಡಿಯಾ ಇಂಕ್ ಅನ್ನುವ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಆಕೆಯ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಪ್ರಕಟಿಸಿದ್ದರು. ಕಿರಣ್ ದೇಸಾಯಿ ಅವರ ಪುಸ್ತಕವನ್ನು ಪ್ರಕಟಿಸಲು [ಅದು ಅವರ ಎರಡನೆಯ ಪುಸ್ತಕವಾಗಿದ್ದು, ಆಕೆ ಅನಿತಾ ದೇಸಾಯಿಯವರ ಮಗಳಾಗಿದ್ದರೂ ಸಹ] ಅವರಿಗೆ ಪೀಕಲಾಟವಾಗಿತ್ತು ಅನ್ನುವ ಮಾತನ್ನು ಆಕೆಗೆ ಬುಕರ್ ಬಂದಾಗ ಕೇಳಿದ್ದೆವು. ಅರವಿಂದ ಅಡಿಗರ ಪುಸ್ತಕಕ್ಕೆ ಇಂಥಹ ತೊಂದರೆ ಉಂಟಾಗಲಿಲ್ಲ. ಅರುಂಧತಿಯನ್ನು ಇಲ್ಲವೆಂದ ಹಾರ್ಪರ್ ಕಾಲಿನ್ಸ್ ಸಂಸ್ಥೆ ಅಡಿಗರನ್ನು ಪ್ರಕಟಿಸಿದ್ದಲ್ಲದೇ ಸಾಕಷ್ಟು ಪ್ರಚಾರವನ್ನೂ ನೀಡಿತು.
ಇಕೊಳ್ಳಿ ಉಂಬರ್ಟೋ!


ನಾನು ಓದಿರುವ ಲೇಖಕರಲ್ಲಿ ಅತ್ಯಂತ ಪ್ರಭಾವಶಾಲಿಯಾದ ಅದ್ಭುತ ಲೇಖಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಉಂಬರ್ಟೋ ಇಕೊ. ಆತ ಪತ್ರಿಕೆಗಳಲ್ಲಿ ಬರೆಯುವ ಲೇಖನಗಳು ಸಮಕಾಲೀನ ಆಗುಹೋಗುಗಳಿಗೆ ಬುದ್ಧಿಜೀವಿಯೊಬ್ಬನ ಸರಳ ಹಾಸ್ಯಭರಿತ ಭಾಷೆಯ ಪ್ರತಿಕ್ರಿಯೆಯಾದರೆ, ಭಾಷಾಶಾಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ಗಹನ ಲೇಖನಗಳು ಆ ಕ್ಷೇತ್ರದಲ್ಲಿ ಎದ್ದು ನಿಲ್ಲುತ್ತವೆ. ಕೆಲವರ್ಷಗಳ ಹಿಂದೆ deconstruction [ನಿರಚನೆ]ಯ ಬಗ್ಗೆ ಬರೆದಿದ್ದ ಪಾಂಡಿತ್ಯ ಪೂರ್ಣ ಲೇಖನವನ್ನು ನಾನು ಓದಿದ್ದ ನೆನಪು. ಕಳೆದ ವರ್ಷ ಇಕೊ ಭಾರತದಲ್ಲಿ ಹಲವುದಿನಗಳು ಇದ್ದು ಹೋದರು. ಕಾದಂಬರಿಕಾರರಾಗಿ ಇಕೋ ತಮ್ಮ ಬರವಣಿಗೆಯಲ್ಲಿ ಇತರ ಅನೇಕರು ತರಲು ಸಾಧ್ಯವಾಗದ ಅನೇಕ ಆಯಾಮಗಳನ್ನು ತರಲು ಪ್ರಯತ್ನಿಸುತ್ತಾರೆ. ಹಾಗೆ ಇತರೆ ಆಯಾಮಗಳನ್ನು ತರುವಾಗ ಅದನ್ನು ಕೇವಲ ಉತ್ಪ್ರೇಕ್ಶೆ ಅಥವಾ ಅತಿರಂಜಕತೆಗಾಗಿ ತರದಿರುವ ಎಚ್ಚರವನ್ನು ಅವರು ವಹಿಸುತ್ತಲೇ ತಾವು ಬರೆದದ್ದನ್ನು ಆಸಕ್ತಿಕರವಾಗಿ ಇರುವಂತೆ ಮಾಡುತ್ತಾರೆ. ಅದಕ್ಕೇ ನೇಮ್ ಆಫ್ ದ ರೋಸ್ ಕಾದಂಬರಿಯಲ್ಲಿ [ಮತ್ತು ಅದನ್ನು ಬರೆದ ಪ್ರಕ್ರಿಯೆಯ ಬಗ್ಗೆ ಬರೆದ ರಿಫ್ಲೆಕ್ಷನ್ಸ್ ಆನ್ ದ ನೇಮ್ ಆಫ್ ದ ರೋಸ್] ಅವರ ಬರವಣಿಗೆ ಡಾವಿಂಚಿ ಕೋಡ್‌ನಂತಹ ಕಾದಂಬರಿಗಿಂತ ಎಷ್ಟು ಭಿನ್ನವಾಗಿದೆ ಎನ್ನುವುದನ್ನು ನಾವು ಕಾಣಬಹುದು. ಎರಡೂ ಕಾದಂಬರಿಗಳು ಚರಿತ್ರೆಯ ಕೆಲ ಘಟನೆಗಳ ಸಂಶೋಧನೆಯ ಆಧಾರದ ಮೇಲೆ ಬರೆದವುಗಳಾದದ್ದರಿಂದ ನಾವು ಈ ವ್ಯತ್ಯಾಸವನ್ನು ಸುಲಭವಾಗಿ ನೋಡಬಹುದು. ಇದಲ್ಲದೇ ಇಕೋ ಅವರ ಕಾದಂಬರಿಗಳನ್ನು ಸುಮ್ಮನೆ ತಿರುವಿಹಾಕುತ್ತಲೂ ಇರಬಹುದು. ಅವರ ಬರವಣೆಗೆಯ ಬಿಡಿಭಾಗಗಳೇ ಮನಸ್ಸಿಗೆ ಸಾಕಷ್ಟು ಗ್ರಾಸವನ್ನು ಒದಗಿಸುತ್ತವೆ.

ಮುಂದೆ...ಹೈದರಾಬಾದ್: ಮೂರು ಕಾದಂಬರಿಗಳು

ನನ್ನ ಹೈದರಾಬಾದಿನ ಆಸಕ್ತಿ ಮುಂದುವರೆಯುತ್ತದೆ. ಹೀಗಾಗಿಯೇ ಅಷ್ಟೇನೂ ಒಳ್ಳೆಯದು ಅನ್ನಿಸದಿದ್ದರೂ ಆ ಬಗ್ಗೆ ಬಂದ ಪುಸ್ತಕಗಳನ್ನೆಲ್ಲಾ ಕೊಳ್ಳುತ್ತೇನೆ. ಇದು ಒಂದು ಥರದ ಕುತೂಹಲ, ಬೇಕೆಂದರೆ ಸ್ವಲ್ಪ ಚಟವೆನ್ನಿ. ಹೈದರಾಬಾದಿಗೆ ಸಾಧ್ಯವಾದಾಗಲೆಲ್ಲ ಹೋಗುವುದು ಆ ನಗರದ ಬಗ್ಗೆ ಓದುವುದು, ಬರೆಯುವುದು ನನಗೆ ಪ್ರಿಯ ಕಾಯಕ. ಆ ನಗರಕ್ಕೆ ಇರುವ ವಿಚಿತ್ರ ಚರಿತ್ರೆ ಯಾವಾಗಲೂ ನನ್ನ ಗಮನವನ್ನು ಸೆಳೆಯುತ್ತಲೇ ಇರುತ್ತದೆ. ಕಳೆದ ಹದಿನೈದು ವರ್ಷಗಳಲ್ಲಿ ನಾನು ಆ ಪ್ರಾಂತದ ಬಗ್ಗೆ ಸಿಕ್ಕಿದ್ದನ್ನೆಲ್ಲಾ ಓದಿದ್ದೇನೆ. ಹೀಗಾಗಿ ಅಲ್ಲಿಂದ ಬಂದ ಕಾದಂಬರಿಗಳನ್ನು ಓದದೇ ಇರಲಾಗಲಿಲ್ಲ. ಕಳೆದ ಕೆಲವು ದಿನಗಳಲ್ಲಿ ನಾನು ಮೂರು ಭಿನ್ನ ಕಾದಂಬರಿಗಳನ್ನು ಓದಿದೆ. ಮೂರೂ ಬೇರೆಯದಾಗಿಯೇ ಇವೆ. ಕಥಾನಕದಲ್ಲಿ ಮತ್ತು ನಿರೂಪಣೆಯಲ್ಲಿ ಸುಮಾರಾದ ವೈವಿಧ್ಯತೆ ಇದೆ - ಎಲ್ಲಕ್ಕೂ ಸಮಾನವಾದ ಕೊಂಡಿಯೆಂದರೆ ಅವು ಹೈದರಾಬಾದಿನಲ್ಲಿ ನಡೆವ ಕಥೆಗಳು ಅನ್ನುವುದಷ್ಟೇ. ಆ ಕಥೆಗಳು ನಡೆದ ಕಾಲಕ್ರಮಾನುಸಾರವಾಗಿ ಅವುಗಳ ಬಗ್ಗೆ ನಾನು ಇಲ್ಲಿ ಚರ್ಚಿಸುತ್ತೇನೆ... ನಾನು ಈ ಪುಸ್ತಕಗಳನ್ನು ಓದಿದ ಕ್ರಮವೂ ನಾನು ಅವುಗಳನ್ನು ಕಾಲಕ್ರಮಾನುಸಾರವಾಗಿಯೇ ಅನ್ನುವುದರಲ್ಲಿ ಯಾವ ಕಾಕತಾಳೀಯವೂ ಇಲ್ಲ.
ಮುಂದೆ...


ಕನ್ನಡದಲ್ಲಿ ಸಣ್ಣ ಪತ್ರಿಕೆಗಳು, ದೇಶಕಾಲದ ನಾಲ್ಕು ಸಂಚಿಕೆಗಳು

ಕನ್ನಡದಲ್ಲಿ ಅತ್ಯುತ್ತಮ ಸಣ್ಣ ಪತ್ರಿಕೆಗಳು ಬಂದಿವೆ, ಮತ್ತು ನಿಂತುಹೋಗಿವೆ ಸಹ. ಕೆಲವು ಸಣ್ಣ ಪತ್ರಿಕೆಗಳು ಆಯಾಕಾಲದ ಸಾಹಿತ್ಯದ, ಸಾಹಿತ್ಯ ಶೈಲಿಯನ್ನು ಪ್ರತಿನಿಧಿಸಿ ನಿಂತಿವೆ. ಹೀಗಾಗಿಯೇ ಅವು ಆಯಾ ಸಾಹಿತ್ಯಕಾಲದ ಉತ್ತಮ ಲೇಖಕರ ಹೆಸರಿನ ಜೊತೆ ಅವಿನಾಭಾವವಾಗಿ ಅಂಟಿನಿಂತಿದೆ. ಸಾಕ್ಷಿಯ ಜೊತೆ ಅಡಿಗರ ಹೆಸರು, ರುಜುವಾತುವಿನ ಜೊತೆ ಅನಂತಮೂರ್ತಿಯವರ ಹೆಸರು, ಅದಕ್ಕೂ ಹಿಂದೆ ಜೀವನದ ಜೊತೆ ಮಾಸ್ತಿಯವರ ಹೆಸರು ಇದಕ್ಕೆ ಉದಾಹರಣೆಗಳು. ಒಂದು ಥರದಲ್ಲಿ ಈ ಲೇಖಕರು ಆಯಾ ಸಮಯಘಟ್ಟಕ್ಕೆ ಪ್ರಯೋಗಗೊಂಡ ಹೊಸ ಬರವಣಿಗೆಯ ಶೈಲಿಯನ್ನು ಪ್ರತಿನಿಧಿಸುತ್ತದ್ದರಿಂದ ಆ ಶೈಲಿಯ ಸಮರ್ಥ ಅನುಯಾಯಿಗಳನ್ನು ಹುಟ್ಟುಹಾಕುವುದರಲ್ಲಿ ಈ ಪತ್ರಿಕೆಗಳು ಪ್ರೇರಕವಾಗುವಂತಹ ಕೆಲಸ ಮಾಡಿದವು. ಅಂಕಣದಂತಹ ಪತ್ರಿಕೆಯನ್ನು ಹುಟ್ಟುಹಾಕಿದ್ದು ಪಿಪಿ ಗೆಳೆಯರ ಬಳಗದ ತ್ರಿಮೂರ್ತಿಗಳು [ಪಿಪಿ= ಪೋಲಿ ಪಟಾಲಂ]. ಅವರಲ್ಲಿ ಎಚ್ ಎಸ್ ಆರ್ ಮತ್ತು ಕೆ ವಿ ನಾರಾಯಣ ವಿಮರ್ಶಕರೆಂದು ಪ್ರಸಿದ್ಧರು. ಚಿ.ಶ್ರೀನಿವಾಸರಾಜು ಸಾಹಿತ್ಯಪ್ರೇಮಿ, ಸಾಹಿತ್ಯ ಪರಿಚಾರಕರು, ಮತ್ತು ಲೇಖಕರು [ಆದರೆ ಹೆಚ್ಚು ಬರೆದವರಲ್ಲ]. ಬಹುಶಃ ಕನ್ನಡದ ಸಣ್ಣಪತ್ರಿಕೆಯಲ್ಲಿ ಒಂದು ಗುಂಪಿನ ಪ್ರಯತ್ನ ಇದೇ ಮೊದಲನೆಯದಿರಬಹುದು....

ಎಂ.ಸಿ.ಎಷರ್, ಹಾರ್ಹೆ ಲೂಯಿ ಬೊರೇಸ್: ನಿರಂತರತೆಯ ಚಕ್ರವ್ಯೂಹಗಳು

ಡಚ್ ಸಂಜಾತ ಎಂ.ಸಿ.ಎಷರ್ ಹುಟ್ಟಿದ್ದು ೧೯೦೨ರಲ್ಲಿ. ೭೦ ವರ್ಷಗಳ ಜೀವನಕಾಲದಲ್ಲಿ ಎಷರ್ ಅಸಂಖ್ಯಾತ ಚಿತ್ರಗಳನ್ನು ಅನೇಕ ಮಾಧ್ಯಮಗಳಲ್ಲಿ ಬಿಡಿಸಿದರು. ಚಿತ್ರ ನೋಡಿದ ಕೂಡಲೇ 'ಎಷರ್' ಎಂದು ಗುರುತಿಸಬಹುದಾದಂತಹ ಪ್ರತ್ಯೇಕತೆ ಇವರ ಶೈಲಿಯಲ್ಲಿದೆ. ಎಲ್ಲ ಚಿತ್ರಗಳಲ್ಲೂ ಇರುವ ಸಾಮಾನ್ಯ ಅಂಶವೆಂದರೆ ಅವುಗಳಲ್ಲಿನ ಚಾಮತ್ಕಾರಿಕ ಗುಣ. ಈ ಚಿತ್ರಗಳು ನಮ್ಮ ಹೃದಯವನ್ನು ಕಲಕುವುದಿಲ್ಲ. ಅವುಗಳ ಕಲಾತ್ಮಕ ಅಂಶದ ಬಗ್ಗೆ ಟಿಪ್ಪಣಿ ಮಾಡುವುದೂ ಕಷ್ಟ. ಜೊತೆಗೆ ಕಲೆ, ಕಲಾವಿಮರ್ಶೆಯಲ್ಲಿ ಯಾವ ಅನುಭವವೂ ಇಲ್ಲದ ನನಗೆ ಇದು ಕೈಗೆಟುಕುವ ವಿಷಯವೂ ಅಲ್ಲ. ಆದರೆ ಒಂದಂಶ ನಿಜ: ಎಷರ್ ಚಿತ್ರಗಳು ಬೌದ್ಧಿಕವಾಗಿ ಸಾಕಷ್ಟು ಕಸರತ್ತು ಮಾಡಿಸುತ್ತವೆ. ಸತ್ಯ-ಮಿಥ್ಯೆಯ ನಡುವಿನ ಗೆರೆಯನ್ನು ಅವು ಪ್ರಶ್ನಿಸುತ್ತವೆ.ನಾಪತ್ತೆಯಾದ ಗ್ರಾಮಾಫೋನು, ಪತ್ತೆಯಾದ ದಿವಾಕರ್

ಎಸ್.ದಿವಾಕರ್ ಅವರನ್ನು ಭೇಟಿಯಾದಾಗಲೆಲ್ಲ ನನಗೆ ಒಂದು ಥರದ ಕೀಳರಿಮೆ ಉಂಟಾಗುತ್ತದೆ. ಅವರ ಜೊತೆಗಿನ ಮಾತುಕತೆ ಎಷ್ಟು ಆಸಕ್ತಿಕರವಾಗಿರುತ್ತದೋ, ಅಷ್ಟೇ ಜಟಿಲವಾಗಿಯೂ ಇರುತ್ತದೆ. ಇದಕ್ಕೆ ಕಾರಣಗಳಿವೆ. ದಿವಾಕರ್ ಏನು ಹೇಳಬೇಕೋ ನೇರವಾಗಿ ಯಾವ ಸಂಕೋಚವೋ ಇಲ್ಲದೇ ಮುಖದ ಮೇಲೆ ಹೇಳಿಬಿಡುತ್ತಾರೆ. ಎಷ್ಟೇ ಮುಜುಗರದ ವಿಷಯವಾದರೂ ಪ್ರಾಮಾಣಿಕತೆಯಿಂದ ಅವರು ಹೇಳುತ್ತಾರಾದ್ದರಿಂದ ಅದನ್ನು ಜೀರ್ಣಿಸಿಕೊಂಡು ಅವರ ಗೆಳೆತನ ನಿಭಾಯಿಸುವುದು ತುಸು ಕಷ್ಟದ ಮಾತು. ಒಮ್ಮೊಮ್ಮೆ ಅವರು ಅಪ್ರಿಯವಾದ ಸತ್ಯವನ್ನು ಮಾತ್ರ ಹೇಳಿ, ಪ್ರಿಯ ಸತ್ಯವನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೋ ಎನ್ನಿಸುವುದುಂಟು. ನಮ್ಮ ಬಗೆಗಿನ ಅಪ್ರಿಯವಾದ ಸತ್ಯವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾದರೆ ಅವರ ಗೆಳೆತನದಿಂದ ಗಳಿಸಿಕೊಳ್ಳಬೇಕಾದದ್ದು ಇದ್ದೇ ಇದೆ. ಅವರ ಓದು, ಸಂವೇದನೆಗಳಿಗೆ ಪ್ರತಿಸ್ಪಂದಿಸಿದರೂ ಸಾಕು - ಸಾಹಿತಿಗಳಾಗಿ ಬೆಳೆಯಲು ನಮಗೆ ಸಾಕಷ್ಟು ಅವಕಾಶ ದೊರೆಯುತ್ತದೆ.  

ಮುಂದೆ....


ದಗಡೂ ಪರಬನ ತೂಫಾನ್ ಮೇಲ್


ಅಸಾವರಿ ಲೋಖಂಡೆ
, ರೂಪಕ್ ರಾಠೋಡ್, ಪರೇಶ್ ಶಹಾ, ಸತ್ಯಜಿತ್ ದತ್ತಾ, ಬಲದೇವ, ಮಧುಬನಿ, ಮಧುವಂತಿ, ಇಂದ್ರನೀಲ – ಈ ಇಂಥ ಹೆಸರಿನ ಪಾತ್ರಗಳಿರುವ ಕಥೆಗಳು ಯಾವ ಭಾಷೆಯಲ್ಲಿ ಬಂದಿರಬಹುದು? ಯಾವ ಊರಿನದ್ದಗಿರಬಹುದು? ಯಾವ ಬರಹಗಾರನದ್ದಾಗಿರಬಹುದು? ಜಯಂತ ಕಾಯ್ಕಿಣಿಯ ಬರಹಗಳನ್ನು ಹತ್ತಿರದಿಂದ ಬಲ್ಲವರಿಗೆ ಈ ಕ್ವಿಜ್ ಗೆ ಉತ್ತರ ಹೇಳುವುದು ಕಷ್ಟಾವಾಗಲಾರದು. ಮುಂಬಯಿಯನ್ನು ಒಂದು ವಿಭಿನ್ನ ರೀತಿಯಲ್ಲಿ ಜಯಂತ ಅಂತರ್ಗತ ಮಾಡಿಕೊಂಡಿದ್ದಾನೆ. ಜಯಂತನ ರೀತಿ ಇತರ ನಮ್ಮೆಲ್ಲರಿಗಿಂತ ಬಹಳವೇ ಭಿನ್ನವಾದದ್ದು. ಮುಂಬಯಿನ ಮಹಾಸಾಗರಕ್ಕೆ ಬಂದು ಸೇರುವ ನದಿಗಳ ಮೂಲ ಹುಡುಕಹೊರಟರೆ ಎತ್ತೆತ್ತಲೋ ಹೋಗಿ ದಾರಿತಪ್ಪಬಹುದು. ಆದರೂ ಬರಹಗಾರರು ಸಾಮಾನ್ಯವಾಗಿ ನದಿ ಮೂಲ ಹುಡುಕಿ ಹೊರಡುವವರೇ 

ಸುಬ್ಬಣ್ಣ

ಕೆಲವು ವಾರಗಳ ಹಿಂದೆ ಶೇಖರ್ ಪೂರ್ಣ ನನ್ನನ್ನು ಸಂಪರ್ಕಿಸಿ ಕೆ.ವಿ.ಸುಬ್ಬಣ್ಣನವರ ಬಗ್ಗೆ ಕನ್ನಡ ಸಾಹಿತ್ಯ.ಕಾಂ ಗಾಗ ಿಒಂದು ಲೇಖನವನ್ನು ಬರೆದುಕೊಡಲು ಹೇಳಿದರು. ಆದರೆ ಇದ್ದಕ್ಕಿದ್ದ ಹಾಗೆ ಸುಬ್ಬಣ್ಣನವರ ಬಗ್ಗೆ ನನ್ನನ್ನು ಯಾಕೆ ಬರಯಲು ಕೇಳಿದರೆಂದು ಆಗ ನನಗೆ ಅರ್ಥವಾಗಲಿಲ್ಲ. ಅಹಮದಾಬಾದಿನಲ್ಲಿ ಕೂತಿದ್ದ ನನಗೆ ಸುಬ್ಬಣ್ಣನವರು ತೀರಿಕೊಂಡದ್ದು ತಿಳಿದೇ ಇರಲಿಲ್ಲ. ಹಿಂದಿನ ನನ್ನ ಬರಹದಲ್ಲಿ ನಾನು ಹೇಳಿದ್ದಂತೆ, ಕರ್ನಾಟಕದಿಂದ ದೂರವಾಗಿ ಒಂಟಿಯಾಗಿ ಇರುವುದರ ಫಲಿತವೆಂದರ ಇಂಥಹ ಸುದ್ದಿಗಳು ನಮಗೆ ಒಮ್ಮೊಮ್ಮೆ ತಡವಾಗಿ ತಲುಪುತ್ತದೆ.