ಹೈದರಾಬಾದ್: ಏಕೀಕರಣ?

ಏಳನೆಯ ನಿಜಾಮನ ಇಷ್ಟಕ್ಕೆ ವಿರುದ್ಧವಾಗಿ, ಜನರ ಅಭಿಪ್ರಾಯಗಳನ್ನು ಸಂಗ್ರಹಿಸದೇ ಹೈದರಾಬಾದ್ ಪ್ರಾಂತವನ್ನು ಭಾರತದ ಸಂವಿಧಾನದಡಿ ತಂದುದರ ಬಗ್ಗೆ ಸಾಕಷ್ಟು ಬರೆಯಲ್ಪಟ್ಟಿದೆ. ಈ ಬಗ್ಗೆ ಇರುವ ರಾಷ್ಟ್ರವಾದೀ ಅಭಿಪ್ರಾಯವೂ ಎಲ್ಲರಿಗೂ ವಿದಿತವಾದದ್ದೇ - ನಿಜಾಮ ಮೀರ್ ಉಸ್ಮಾನ್ ಅಲಿಯ ನಿಲುವಿನಲ್ಲಿ ಹುರುಳಿರಲಿಲ್ಲ; ಭಾರತದ ನಡುಮಧ್ಯದಲ್ಲಿದ್ದ ಹೈದರಾಬಾದಿಗಿದ್ದ ಭೌಗೋಳಿಕ ಮಹತ್ವವನ್ನು ಗಮನಿಸಿದಾಗ ಆ ಪ್ರಾಂತವನ್ನು ಪಾಕಿಸ್ತಾನದ ಅಂಗವನ್ನಾಗಿ ಮಾಡುವ ಯೋಚನೆಯನ್ನು ಮಾಡುವುದಾಗಲೀ, ಹೈದರಾಬಾದನ್ನು ಸ್ವತಂತ್ರ ರಾಜ್ಯವಾಗಿ ಬಿಟ್ಟುಕೊಡುವುದಾಗಲೀ ಅಸಾಧ್ಯದ ಮಾತೇ ಆಗಿತ್ತು. ಹೀಗಾಗಿ ಪೋಲೀಸ್ ಕಾರ್ಯಾಚರಣೆ ಹಾಗೂ ಹೈದರಾಬಾದನ್ನು ಭಾರತದ ಸೇರಿಸುವ ಪ್ರಕ್ರಿಯೆಯಲ್ಲಿ ಉಕ್ಕಿನ ಮಾನವ ಸರದಾರ್ ಪಟೇಲರ ಸಾಧನೆಗಳಲ್ಲಿ ಮಹತ್ವದ್ದೆಂದು ಗುರುತಿಸುವುದು ಸಹಜವೂ ಆಗಿದೆ.

ಮುಂದೆ...



1 comment:

Manjunath Kulkarni said...

ಶ್ರೀರಾಮ್,
ನಾನು ಹೈದರಾಬಾದ್ ಒಡೆದು, 3 ಭಾಗಮಾಡಿ ಹಂಚಿದ್ದರಿಂದ ಆಯಾ ರಾಜ್ಯಕ್ಕೆ ಸೆರಿದ ಭಾಗಗಳು ಹಿಂದುಳಿದವು ಎಂಬ ಈ ವಾದವನ್ನು ಒಪ್ಪುತ್ತೆನೆ. ಹೈದರಾಬಾದ್ ಬಿಟ್ಟು ಕರ್ನಾಟಕಕ್ಕೆ ಬಂದದ್ದರಿಂದ ನಮಗೆ ಹಾನಿಯೆ ಹೆಚ್ಚಾಯಿತು.ಇಲ್ಲದಿದ್ದರೆ ರಾಜಧಾನಿಗೆ ಹತ್ತಿರವಾಗಿ ಇರುತ್ತಿದ್ದೆವು. ಮೈಸೂರು ಮತ್ತ ಮುಂಬೈ ಕರ್ನಾಟಕದವರಿಂದ ತಿರಸ್ಕಾರಕ್ಕೆ ಒಳಗಾಗಿ ಒಂದು ರೀತಿ ಬಹಿಷ್ಕೃತರಂತೆ ಇರುತ್ತಿರಲಿಲ್ಲ.
ತಮಗೆ ಹೈದರಾಬಾದಿನ ಇತಿಹಾಸ(1800-1956) ಬಗ್ಗೆ ಯಾವುದಾದರು ಉತ್ತಮ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.