ಮೋಟರ್‍ಸೈಕಲ್ ಡೈರೀಸ್: ಪುಸ್ತಕ ಮತ್ತು ಚಲನಚಿತ್ರ

ಎರ್ನೆಸ್ಟೋ 'ಚೆ' ಗುವೇರಾ ಇಪ್ಪತ್ತನೆಯ ಶತಮಾನದ ಅತ್ಯಂತ ಕುತೂಹಲಕಾರೀ ವ್ಯಕ್ತಿತ್ವಗಳಲ್ಲಿ ಒಬ್ಬನಾಗಿದ್ದಾನೆ. ಅವನ ಬಗ್ಗೆ ಎಷ್ಟೊಂದು ಕಥೆ, ದಂತಕಥೆಗಳಿವೆ ಎಂಬುದು ಲೆಕ್ಕಕ್ಕೆ ಸಿಗಲಾರದು. ಒಂದು ಕಡೆ ಕ್ರಾಂತಿಕಾರಿಗಳಿಗೆ ಸ್ಫೂರ್ತಿನೀಡುವ ಪ್ರತೀಕವಾಗಿದ್ದರೆ, ಮತ್ತೊಂದೆಡೆ ಗಂಡಸರ ಮತ್ತು ಅದಕ್ಕಿಂತ ಮುಖ್ಯವಾಗಿ ಹುಡಿಗಿಯರ ಅರಿವೆಯಮೇಲೆ ಅವನ ಚಿತ್ರಗಳನ್ನು ಹಚ್ಚಿ ವಿಶಿಷ್ಟ ಟೀ-ಶರ್ಟುಗಳ್ಳನ್ನು ತಯಾರಿಸಿ ಅವನನ್ನು ಶೋಕಿಯ ಪ್ರತೀಕವನ್ನಾಗಿಯೂ ನಮ್ಮ ಡಿಸೈನರ್‍ಗಳು ಮಾಡಿಬಿಟ್ಟಿದ್ದಾರೆ. ಅವನು ಸುಂದರ ಪುರುಷನಾಗಿದ್ದ. ಅಲ್ಲದೇ ಅವನು ತೊಡುತ್ತಿದ್ದ ಪುಟ್ಟ ನಕ್ಷತ್ರವಿದ್ದ ಟೋಪಿಯೂ ಅವನನ್ನು ಸಂಕೇತಿಸುವ ಒಂದು ಚಿನ್ಹೆಯಾಗಿ ಸ್ಥಾಯಿಯಾಗಿ ಉಳಿದುಬಿಟ್ಟಿದೆ. 'ಚೆ' ನ ಪರಿಚಯ ನನಗಾಗಿದ್ದು ತಿರುಮಲೇಶರ ನೀಳ್ಗವಿತೆ ಬೊಲೀವಿಯಾದಲ್ಲಿ ಚೆ ಓದಿದಾಗ. [ಪಾಪಿಯೂ ಸಂಕಲನ, ಅಕ್ಷರ ಪ್ರಕಾಶನ]



5 comments:

Anonymous said...

ಚೆ ಯ ಮೋಟಾರ್ ಸೈಕಲ್ ಡೈರೀಸ್ ಪುಸ್ತಕವನ್ನು ನೀವು ಖರೀದಿಸಿದ ದಿನಗಳಲ್ಲೇ ನಾನು ಎರವಲು ಪಡೆದು ಓದಿದ್ದೆ. ಈ ವರ್ಷ ನಾನೂ ಸಿನಿಮಾ ನೋಡಿದೆ. ನ್ಯಾಷನಲ್ ಮಾರ್ಕೆಟ್ ನಲ್ಲಿ ಡಿವಿಡಿ ಖರೀದಿಸಿದ ಹೊತ್ತಿನಲ್ಲಿ ನನಗೂ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ಆದರೆ ಸಿನಿಮಾ ನೋಡಿದ ನಂತರ ಚೆನ್ನಾಗಿದೆಯೆಲ್ಲಾ ಅನ್ನಿಸಿತ್ತು. ನಿಮ್ಮ ಲೇಖನ ಓದಿದಾಗ ನಾನು ಬರೆಯಬೇಕು ಎಂದುಕೊಂಡದ್ದು ಇಲ್ಲೇ ಇದೆಯಲ್ಲಾ ಅನ್ನಿಸಿ ಸಂತೋಷವಾಯಿತು.

Saamaanya Jeevi said...

ಶ್ರೀರಾಮರೆ,

ನಾನು ಪುಸ್ತಕವನ್ನು ಓದಿಲ್ಲ. ಆದರೆ, ಚಿತ್ರ ಅಷ್ಟಾಗಿ ನನಗೆ ಹಿಡಿಸಲಿಲ್ಲ.

ಚಿತ್ರ ರಂಜನೆಯಲ್ಲಿ ತನ್ಮಯವಾಗುವಷ್ಟು ಮಿಕ್ಕದ್ದನ್ನು ಹಿಡಿದಿಡುವುದಿಲ್ಲವೆಂದೆನ್ನಿಸಿತು. ನಮಗೀಗ (ಓದಿನ ಮೂಲಕ) ಗೊತ್ತಿರುವ ಚೆ ರೂಪುಗೊಂಡ ರೀತಿ ಚಿತ್ರದಲ್ಲಿ (ಮಾಹಿತಿ ಸ್ವರೂಪದಲ್ಲಿ) ಬರುತ್ತದೆಯಾದರೂ ಆಳವಾದ ಅನುಭವ ನೀಡುವುದಿಲ್ಲ.

ಆದರೆ, ನಿಮ್ಮ ಲೇಖನ ಓದಿದ ಮೇಲೆ ನಾನು ಪೂರ್ವಾಗ್ರಹಪೀಡಿತನಾಗಿ ಗಮನಿಸುತ್ತಿರುವೆನೇನೋ ಎಂದೆನ್ನಿಸುತ್ತಿದೆ.

ಅಲ್ಲದೆ, ನೀವಿ ಮತ್ತು ಟಿಪ್ಪಣಿ ಬರೆದಿರುವ ಇಸ್ಮಾಯಿಲೌ - ಇಬ್ಬರೂ ಪುಸ್ತಕವನ್ನೋದಿ ನಂತರ ಸಿನೆಮಾ ನೋಡಿದ್ದೀರಿ. ನಾನು ಕೇವಲ ಸಿನೆಮಾ ನೋಡಿದ ಅನುಭವವನ್ನು ನಿಮ್ಮ ಮುಂದಿಟ್ಟಿದ್ದೇನೆ.

ಚಿತ್ರದಲ್ಲಿ ಒಂದು ಹಂತದಲ್ಲಿ ಚೆ ಪಾತ್ರಧಾರಿ 'So much injustice....' ಎನ್ನುತ್ತಾನೆ. ನನಗೆ ಆಘಾತವಾದಂತಾಯ್ತು. ಸಿನೆಮಾ ಆವರೆಗೆ ಅದನ್ನು ಎಲ್ಲೂ ಆಳವಾಗಿ ಅನುಭವಕ್ಕೆ ಸಿಗುವಂತೆ ಕಟ್ಟಿಕೊಡಲೇ ಇಲ್ಲ ಎಂದೆನ್ನಿಸಿತ್ತು.

ಇಂತಿ
ಶಿವು

Anonymous said...

I HAVE READ SOME OF YOUR ARTICALS IN NEWSPAPER ITS VERY GOOD .AND SOME OF YOUR STORIES IN BLOG.KEEP WRITING.

ಎಂ.ಎಸ್.ಶ್ರೀರಾಮ್ said...

ಸುಕೇಶ್
ನಿಮ್ಮ ಮಾತುಗಳಿಗೆ ಕೃತಜ್ಞ.
ಶ್ರೀರಾಮ್

ಕನ್ನಡದ ಕಂದ said...

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ನನ್ನ ಬ್ಲಾಗ್ pusthakapreethi.wordpress.com ನಲ್ಲಿ ಪುಸ್ತಕದ ಬಗ್ಗೆ ಮಾತ್ರ ಎಡಿಟ್ ಮಾಡಿ ಹಾಕುತ್ತೇನೆ.