ಕುರಿಯನ್: ಒಂದು ಖಾಸಗೀ ಪ್ರಬಂಧ

ಕಾಲೇಜು ತಪ್ಪಿಸಿ ಮೈಸೂರಿನ ಒಲಿಂಪಿಯಾ ಟಾಕೀಸಿನಲ್ಲಿ 'ಮಂಥನ್' ಚಿತ್ರ ನೋಡಿದಾಗ ನಾನು ಪಿ.ಯು.ಸಿ.ಯಲ್ಲಿದ್ದೆ. ಆಗ್ಗೆ ನನಗೆ ಇದು ನಾನು ನೊಡುತ್ತಿದ್ದ ಚಿತ್ರಗಳಲ್ಲಿ ಮತ್ತೊಂದಾಗಿತ್ತು - ಶ್ಯಾಂ ಬೆನೆಗಲ್ ನಿರ್ದೇಶಿಸಿದ ಒಪ್ಪ ಕಥೆಯ ಒಳ್ಳೆಯ ಸಿನೇಮಾ. ಆಗ್ಗೆ ನಾನು ಶ್ಯಾಂ ಬೆನೆಗಲ್‍ರ ಚಿತ್ರಗಳನ್ನು ಮೆಚ್ಚಲು ಆರಂಭಿಸಿದ್ದೆ. ನಿಶಾಂತ್, ಅಂಕುರ್ ಥರದ ಚಿತ್ರಗಳನ್ನು ಮಾಡಿದ್ದ ಶ್ಯಾಂ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವಂಥಹ ಚಿತ್ರ ಮಾಡಿದ್ದು ನನಗೆ ತುಸು ಆಶ್ಚರ್ಯವನ್ನೇ ಉಂಟುಮಾಡಿತ್ತು. ಈ ಚಿತ್ರ ನನ್ನ ಜೀವನದಲ್ಲಿ ದೊಡ್ಡ ಪ್ರಭಾವವಾಗಬಹುದು, ನನ್ನ ವೃತ್ತಿ ಜೀವನವನ್ನು ರೂಪಿಸಬಹುದೆಂದು ಆಗ ನಾನು ಊಹಿಸಿರಲಿಲ್ಲ.

ಮುಂದೆ....


2 comments:

Vishwanath said...

ಮೂರು ದಶಕಕ್ಕೂ ಹೆಚ್ಚು ಕಾಲ ಆನಂದದಲ್ಲಿ ಹಾಲಿನ ಹೊಳೆ ಹರಿಸಿದ 'ಬಿಳಿ ಕ್ರಾಂತಿಕಾರಿ' ಕುರಿಯನ್ ಕುರಿತ ಪೋಸ್ಟ್ ಮಾಹಿತಿಪೂರ್ಣ.

ಒಂದು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಕೇವಲ ಬುದ್ಧಿವಂತಿಕೆಯಿದ್ದರೆ ಮಾತ್ರ ಸಾಲದು ಅದಕ್ಕೆ ಅನೇಕ ಬಾರಿ ಧಾರ್ಷ್ಟ್ಯ ಕೂಡ ಅನಿವಾರ್ಯವಾಗಿರುತ್ತದೇನೋ. ಅಂಥ ಗುಣ ಕುರಿಯನ್ನರಲ್ಲಿ ಇದ್ದಿದ್ದರಲ್ಲಿ ತಪ್ಪೇನೂ ಅಲ್ಲ ಎಂಬುದು ನನ್ನ ಭಾವನೆ.

ಎಲ್ಲದಕ್ಕೂ ನಮ್ಮ ಸರಕಾರಗಳನ್ನೇ ನಂಬಿ ಕೂತರೆ ನಾವ್ಯಾವ್ಯಾಗ ಉದ್ಧಾರವಾಗೋದು? ಗ್ರಾಮೀಣ ಪ್ರದೇಶದ ಉದ್ಧಾರದ ಬಗ್ಗೆ ಕುರಿಯನ್ ಆಸಕ್ತಿ ತೋರದಿದ್ದರೆ, ಆನಂದ್ ಇಂದು ಜಗತ್ತಿನ ನಕ್ಷೆಯಲ್ಲಿ ಸ್ಥಾನವನ್ನೇ ಪಡೆಯುತ್ತಿರಲಿಲ್ಲ. ಕುರಿಯನ್ ಒಬ್ಬ ವ್ಯಕ್ತಿಯಲ್ಲ ಶಕ್ತಿ.

ಗ್ರಾಮೀಣ ಪ್ರದೇಶದ ಕಾಳಜಿ ಬಗ್ಗೆ ಅವರು ಹೇಳುವ-
ದೆಹಲಿಯಲ್ಲಿ ಫೌಂಟೇನ್‌ಗಳನ್ನು ನಿರ್ಮಿಸುವುದು ತಪ್ಪೇನಲ್ಲ, ಆದರೆ ನಮ್ಮ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿರುವಾಗ ಇದೆಷ್ಟು ಸಮರ್ಪಕ ಎನ್ನುವುದು ತುಂಬಾ ಮೆಚ್ಚುಗೆಯಾಯಿತು. ನಮ್ಮನ್ನಾಳುವವರಿಗೆ ಈ ಬುದ್ಧಿ ಬರುವುದು ಯಾವಾಗ?

ಆದರೆ ನಿಷ್ಠುರ ನಡತೆಯ, ಆನಂದ ಕಂದ ಕುರಿಯನ್ ಅವರನ್ನು ಅಮುಲ್ ಸಂಸ್ಥೆಯ ಉನ್ನತ ಹುದ್ದೆಯಿಂದ ಇಳಿಸಿದ ರೀತಿ ಮಾತ್ರ ನೋವು ತಂದಿತು.

ಕುರಿಯನ್ ಅಂಥವರ ಸಂತತಿ ಬೆಳೆಯಲಿ.

Sarathy said...

ಕುರಿಯನ್ ಅವರ ಎರಡು ಹಂತಗಳನ್ನು ಖಡಕ್ಕಾಗಿ ಚಿತ್ರಿಸಿದ್ದೀರಿ: The birth of a Hero and the death of the Hero. ಮೂರು ದಶಕಗಳಷ್ಟು ಸುದೀರ್ಘ ಕಾಲ ಸಿದ್ಧಾಂತಗಳನ್ನು ಏಕರೀತಿಯಲ್ಲಿ ಕಾಪಾಡಿಕೊಳ್ಳುವುದು ಅಸಾಧ್ಯದ ಮಾತು. ರಾಮಮನೋಹರ ಲೋಹಿಯಾ ಅವರಿಂದ ಪ್ರೇರಿತರಾಗಿ ಸಮಾಜವಾದ ಆಂದೋಲನದ ನೊಗ ಹಿಡಿದ ಅನೇಕ ನೇತಾರರು ಕಾಲಾಂತರದಲ್ಲಿ ರಾಜಕೀಯ ಮತ್ತು ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಬಲಿಕೊಟ್ಟರು. ಇವರ ಮುಂದೆ ಕುರಿಯನ್ ಅವರ ಸೈದ್ಧಾಂತಿಕ ಸಾವು ಅಷ್ಟು ಭೀಕರವೆನಿಸುವುದಿಲ್ಲ.