ರಾಶೊಮೊನ್: ಭೂತ, ವರ್ತಮಾನ


ಅಗಸೆಯ ಅಂಗಳದಲ್ಲಿ ವಿನಾಯಕ ಪಂಡಿತರು ಕುರಸೊವಾನ ಚಿತ್ರಗಳ ಬಗ್ಗೆ ಒಂದು ಒಳ್ಳೆಯ ಪ್ರಬಂಧವನ್ನು ಬರೆದಿದ್ದಾರೆ. ನನಗೆ ಕುರಾಸೊವಾನ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ರಾಶೊಮೊನ್ ಚಿತ್ರದ ಡಿ.ವಿ.ಡಿ ದೊರೆತಾಗ ಅದನ್ನು ಹಲವು ಬಾರಿ ನೋಡಿದೆ. ಈ ಚಿತ್ರಕ್ಕೆ ಮೂಲ ಆಧಾರ
ರೈನೊಸುಕೆ ಅಕುಟಗವಾರ ಎರಡು ಕಥೆಗಳು.

ರಾಶೋಮನ್ ಕಥೆ ನನ್ನ ಕೈಗೆ ಸಿಕ್ಕಿಲ್ಲ ಆದರೆ ಅದರ ಸಾರ ಇಲ್ಲಿದೆ. ಕ್ಯೋಟೋ ನಗರದ ಅಂಚಿನಲ್ಲಿರುವ ರಾಶೊಮನ್ ಗೇಟಿನಲ್ಲಿ ಆ ಕಥೆ ಘಟಿಸುತ್ತದೆ. ಆಗಷ್ಟೇ ಕೆಲಸ ಕಳೆದುಕೊಂಡ ಬಡಪಾಯಿಯೊಬ್ಬ ಅಲ್ಲಿಗೆ ಬರುತ್ತಾನೆ. ಬೆಂಕಿ, ಭೂಕಂಪ, ಅಕಾಲಕ್ಕೆ ಈಡಾಗಿರುವ ಕ್ಯೋಟೊ ದುಃಖದಾಯೀ ಸ್ಥಿತಿಯಲ್ಲಿದೆ. ಅಲ್ಲಿ ಕುಳಿತು ಸತ್ತವರ ಜುಟ್ಟನ್ನು ಕತ್ತರಿಸಿ ವಿಗ್ ಮಾಡಿ ಮಾರುತ್ತಿರುವ ಮುದುಕಿ ತನ್ನ ಜೀವನೋಪಾಯಕ್ಕೆ ಇದನ್ನು ಮಾಡುವುದರಲ್ಲಿ ತಪ್ಪೇನೂ ಇಲ್ಲವೆಂದು ಸಮರ್ಥಿಸಿಕೊಳ್ಳುತ್ತಾಳೆ. ಇಂಥ ಕ್ರೂರ ಜಗತ್ತಿನಲ್ಲಿ ಜೀವಿಸಲು ಏನು ಮಾಡಿದರೂ ತಪ್ಪಿಲ್ಲವೆಂದು ಅವಳಿಂದ ಬೊಧನೆ ಪಡೆದ ಆತ ಅವಳ ಬಟ್ಟೆಗಳನ್ನೇ ಕದ್ದು ಓಡಿಹೋಗುತ್ತಾನೆ.


8 comments:

ಶ್ರೀಕಾಂತ್ said...

ಲೇಖನ ಚೆನ್ನಾಗಿ ಬರೆದ್ದಿದೀರಿ. ಗೊರೂರರ “ಭೂತಯ್ಯನ ಮಗ ಅಯ್ಯು” ಕಥೆಯನ್ನು ಓದಿದಾಗ , ಚಿತ್ರಕ್ಕೂ ಕಥೆಗೂ ಇರುವ ವ್ಯತ್ಯಾಸಗಳು ಎದ್ದು ಕಾಣುತ್ತಿದ್ದವು. ಕಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿ ಚಿತ್ರಸುವುದು ಅಭಿವ್ಯಕ್ತಿಯ ಸ್ವಾತಂತ್ರ್ಯವೆನ್ನಬಹುದೋ ಅಥವ ಆ ಕಥೆಯನ್ನು ಹೆಚ್ಚು ಪರಿಣಾಮಕಾರಿ (contextually effective) ಮಾಡುವ ಪ್ರಯತ್ನವೋ ಅಥವ ಕೃತಿಚೌರ್ಯವೋ ? ನಿಮ್ಮ ಅಭಿಪ್ರಾಯ ತಿಳಿಸಿ.

ಸಂಜಯ್ ಲೀಲಾ ಭಂಸಾಲಿಯವರು “ದೇವದಾಸ್” ಚಿತ್ರದಲ್ಲಿ ಅಳವಡಿಸಿರುವ ಬದಲಾವಣೆಗಳನ್ನು ಸಮರ್ಥಿಸುತ್ತಾ ಹೇಳಿದ ಮಾತು ನೆನಪಿಗೆ ಬರುತ್ತದೆ :
ಕಥೆಯ ಮೂಲ ಸ್ವರೂಪಕ್ಕೆ ಚ್ಯುತಿತರದೇ ತಯಾರಿಸುವ ಬದಲು ಕೃತಿಯ ಪ್ರತಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಹೊಂಚಬಹುದಲ್ಲವೇ ? ಎಂದಿದ್ದರು.

(ರಾಹುಲ್ ಮಹಾಜನ್ ಪ್ರಕರಣಕ್ಕೆ ರಾಶೋಮೋನ್ ಕಥೆಯ ಹೋಲಿಕೆ ಚೆನ್ನಾಗಿದೆ :-) )

Krishnaraj P M said...

ರಾಹುಲ್ ಮಹಾಜನ್ ನ ಕೆತೆಯಲ್ಲಿ ಟಿ.ವಿ ಚಾನಲ್ ನವರೇ ಮುಖ್ಯ ಪಾತ್ರಧಾರಿಗಳು. ರಾಶೊಮೂನ್ ಕತೆಯ ೭ ಪಾತ್ರಗಳಲ್ಲಿ ಬಹಳಷ್ಟನ್ನು ಅವರೇ ನಿರ್ವಹಿಸಿದ್ದಾರೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಸತ್ಯವನ್ನು(!!) ಹೊರಗೆಡವಿದ್ದಾರೆ. ಆದರೆ ಇಲ್ಲಿ ಸತ್ತ ಮೊಯಿತ್ರಾನ ಆತ್ಮ ಮತ್ತೆ ಎದ್ದು ಕತೆ ಹೇಳುವ ಲಕ್ಷಣವಂತೂ ಇಲ್ಲ!.ಒಂದು ಸಂಶಯವೆಂದರೆ ನಾವು ಕೇಳಿದ್ದು/ನೋಡಿದ್ದು new improved truth ಅನ್ನುವುದಕ್ಕಿಂತ alternate truth ಅಂದರೇ ಸರಿಯೇನೋ?

Anonymous said...

I was searching RASHOMON DVD..where i will get it in bangalore?..ur article is worth..

Sriram said...

ಅನಾಮಿಕರೇ
ನಾನು ರಾಶೊಮನ್ ಡಿವಿಡಿಯನ್ನು ಕಲಕತ್ತಾದ ಗೆಳೆಯರೊಬ್ಬರಿಂದ ಪಡೆದೆ. ಬೆಂಗಳೂರಿನಲ್ಲಿ ಇದು ಸಿಗಬಹುದೇನೋ ಗೊತ್ತಿಲ್ಲ. ಆದರೆ ಅಂತರ್ಜಾಲದಲ್ಲಿ - ಅಮೆಜಾನ್ ನಲ್ಲಿ ಸಿಗುತ್ತದೆ.

ಶ್ರೀರಾಮ್

Vinayaka Pandit said...

ಶ್ರೀರಾಮರಿಗೆ,
ನಮಸ್ಕಾರಗಳು. ಬೆಂಗಳೂರಿನ ಜೀವನಕ್ಕೆ ಒಗ್ಗಿಕೊಂಡಿರುವಿರೆಂದು ಆಶಿಸುತ್ತೇನೆ. ಕುಂದೇರಾರ unberable lightness of being ಕಾದಂಬರಿಯನ್ನು ಸಿನೇಮಾಕ್ಕೆ ಇಳಿಸುವದು ಕಷ್ಟದ ಕೆಲಸ ಸೂಚಿಸಿದ್ದೀರಿ. ಒಪ್ಪುತ್ತೇನೆ. ಹಾಲಿವುಡ್-ನ ಫಿಲಿಪ್ ಕೌಫ್-ಮನ್ ಇದನ್ನು ಆಧರಿಸಿ ಚಿತ್ರ ಮಾಡಿದ್ದಾರೆ. ನಿಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ. ಅದಕ್ಕೇ ಅದರ ಬಗ್ಗೆ ಬರೆಯುತ್ತಿದ್ದೇನೆ. ನಾನು ಪುಸ್ತಕವನ್ನು ಓದಿದ್ದು, ಚಿತ್ರವನ್ನೂ ನೋಡಿದ್ದೇನೆ. ಡೇನಿಯಲ್ ಡೇಲೆವಿಸ್, ಜುಲಿಯಾ ಬಿನೋಶೆ, ಲೇನಾ ಓಲಿನ್ ಇಂತಹ ಪ್ರತಿಭಾನ್ವಿತ ತಂಡವನ್ನು ಕಟ್ಟಿ, ತಮ್ಮದೇ ಆದ ರೀತಿಯಲ್ಲಿ ಸಮರ್ಥವಾಗಿ ಚಿತ್ರಕ್ಕಿಳಿಸಿದ್ದಾರೆ. ತುಮಾಸ್, ಸಬಿನ, ತೆರೆಜಾ ಇವರ ವ್ಯಕ್ತ್ತಿತ್ವ ಕಾದಂಬರಿಯಷ್ಟೇ ಚೆನ್ನಾಗಿ ಮೂಡಿಸಿದ್ದಾರೆ. ಕುಂದೇರ ಬಳಸುವ ಪ್ರಬಂಧಗಳ (ಕಥೆಗೆ ಹೊಂದಿದ್ದೂ, ಸ್ವಂತವಾಗಿ ನಿಲ್ಲುವ, ಅದರಲ್ಲೂ ಬ್ಯೂಟಿ ಬಗೆಗಿನ ಪ್ರಬಂಧ)ಮೋಜೇ ಬೇರೆ. ಆ ಅಂಶವನ್ನು ಸಿನೇಮಾಕ್ಕೆ ತರುವ ದುಸ್ಸಾಹಸವನ್ನು ಕೌಫ್-ಮನ್ ಮಾಡಿಲ್ಲ. ಅದನ್ನು ಬಿಟ್ಟರೆ ಒಳ್ಳೆಯ ಅಳವಡಿಕೆ.

ಎಂದಿನಂತೆ,
ವಿನಾಯಕ.

Sriram said...

ವಿನಾಯಕ

ಕುಂದೆರಾನ ಕಾದಂಬರಿಯನ್ನು ಚಿತ್ರವಾಗಿಸಿರುವುದು ಗೊತ್ತು. ಹಾಗೆಯೇ ಮೆಟಮಾರ್ಫಸಿಸ್ ಕೂಡಾ ಚಿತ್ರವಾಗಿದೆ. ನಾನು ನೋಡಿಲ್ಲ. ದೃಶ್ಯಮಾಧ್ಯಮಕ್ಕೂ ಬರವಣಿಗೆಗೂ ಈ ಪೈಪೋಟಿ ಆಸಕ್ತಿಕರವಾದದ್ದು ಹಾಗೂ ನಿರಂತರವಾದದ್ದು. ಸಿಕ್ಕರೆ ಖಂಡಿತ ನೋಡುತ್ತೇನೆ. ಅದಕ್ಕಾಗಿ ಹುಡುಕುತ್ತೇನೆ.

ಶ್ರೀರಾಮ್

yashaswini said...

rashOman DVD mattu ellaa art movie dvdgaLu kOramaMgalada dvd shop oMdaralli siguttade. sucitrakke member aadarU nODabahudu.

www.cinemaparadisoshop.com/bang_routemap.html

http://www.cinemaparadisoshop.com/pagex.php?page=6&category=Classics

regards
yashaswini.

KK said...

ಶ್ರಿರಾಮ್ ರವರೇ,
ರೊಶೊಮಾನ್ ಮತ್ತೆ ನೆನಪಾಗುವಂತೆ ಮಾಡಿದ್ದೀರಿ, thanks. ನಾನು ರೊಶೊಮಾನ್ ಚಲನಚಿತ್ರವನ್ನು ನೋಡಿಲ್ಲ, ಆದರೆ ಸುಮಾರು ನಾಕಾರು ವರ್ಷಗಳ ಹಿಂದೆ, ಮೈಸೂರಲ್ಲಿ 'ರಂಗಾಯಣ'ದವರು, ಈ ನಾಟಕವನ್ನು ಚಲನಚಿತ್ರದಿಂದ ಅಳವಡಿಸಿಕೊಂಡು ಆಡಿದ್ದರು. ನಾಟಕ ನನ್ನನ್ನು ಇನ್ನೂ ಕಾಡುತ್ತದೆ. ಕತೆಗಾರನಿಗೆ, ಕುರೊಸೋವಾನಿಗೆ, ರಂಗಾಯಣಕ್ಕೆ ಮತ್ತು ನೆಮಗೆ thanks.

Keshav (www.kannada-nudi.blogspot.com)