ನಾಪತ್ತೆಯಾದ ಗ್ರಾಮಾಫೋನು, ಪತ್ತೆಯಾದ ದಿವಾಕರ್

ಎಸ್.ದಿವಾಕರ್ ಅವರನ್ನು ಭೇಟಿಯಾದಾಗಲೆಲ್ಲ ನನಗೆ ಒಂದು ಥರದ ಕೀಳರಿಮೆ ಉಂಟಾಗುತ್ತದೆ. ಅವರ ಜೊತೆಗಿನ ಮಾತುಕತೆ ಎಷ್ಟು ಆಸಕ್ತಿಕರವಾಗಿರುತ್ತದೋ, ಅಷ್ಟೇ ಜಟಿಲವಾಗಿಯೂ ಇರುತ್ತದೆ. ಇದಕ್ಕೆ ಕಾರಣಗಳಿವೆ. ದಿವಾಕರ್ ಏನು ಹೇಳಬೇಕೋ ನೇರವಾಗಿ ಯಾವ ಸಂಕೋಚವೋ ಇಲ್ಲದೇ ಮುಖದ ಮೇಲೆ ಹೇಳಿಬಿಡುತ್ತಾರೆ. ಎಷ್ಟೇ ಮುಜುಗರದ ವಿಷಯವಾದರೂ ಪ್ರಾಮಾಣಿಕತೆಯಿಂದ ಅವರು ಹೇಳುತ್ತಾರಾದ್ದರಿಂದ ಅದನ್ನು ಜೀರ್ಣಿಸಿಕೊಂಡು ಅವರ ಗೆಳೆತನ ನಿಭಾಯಿಸುವುದು ತುಸು ಕಷ್ಟದ ಮಾತು. ಒಮ್ಮೊಮ್ಮೆ ಅವರು ಅಪ್ರಿಯವಾದ ಸತ್ಯವನ್ನು ಮಾತ್ರ ಹೇಳಿ, ಪ್ರಿಯ ಸತ್ಯವನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೋ ಎನ್ನಿಸುವುದುಂಟು. ನಮ್ಮ ಬಗೆಗಿನ ಅಪ್ರಿಯವಾದ ಸತ್ಯವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾದರೆ ಅವರ ಗೆಳೆತನದಿಂದ ಗಳಿಸಿಕೊಳ್ಳಬೇಕಾದದ್ದು ಇದ್ದೇ ಇದೆ. ಅವರ ಓದು, ಸಂವೇದನೆಗಳಿಗೆ ಪ್ರತಿಸ್ಪಂದಿಸಿದರೂ ಸಾಕು - ಸಾಹಿತಿಗಳಾಗಿ ಬೆಳೆಯಲು ನಮಗೆ ಸಾಕಷ್ಟು ಅವಕಾಶ ದೊರೆಯುತ್ತದೆ.  

ಮುಂದೆ....


8 comments:

Anonymous said...

The write up is fine....I like Diwakar's articles very much. You are right, being with him is like reading some books...and reading his articles ...rewarding. He is known to us by his Shatamanada Kannada Kathegalu, Jagattina Atisanna kathegalu....and here and there some rare stories....You introduced him in an afectionate way...thank you...

Why you are not writing stories now? It is very difficult to find your books in book stalls and libraries....

Keep writing stories...your stories are very good...
Narendra

Anonymous said...

ಬಹಳ ಸ್ವಾರಸ್ಯಕರವಾಗಿದೆ ನಿಮ್ಮ ಈ ಲೇಖನ, ಓದಿ ಆನಂದವಾಯಿತು. ಚಪ್ಪಲಿ ಸಂಗ್ರಹಿಸುವವನ ಕತೆಯನ್ನು ನೀವೆ ಬರೆಯಿರಲ್ಲ.

Anonymous said...

dear sriram,
thanks for this brilliant write up on dear diwakar who is a unique mind and great talent.nobody in kannada has that multidimensional, passionate taste and antenae for any thing that can evolve man.and his entire persuit always looks like a biproduct , life being the main product!and and his passion is always driven by a sense of wonder and deep humanity which has a strength to transcendf all barriers. if there is any body who can really respond well to multilayered textures of his evocative writings that is he himself! so empoverished is the so called kannada critical melieu today. i am so happy you have ventured in to it and done it so well. thanks again.
jayant

Anonymous said...

ದಿವಾಕರ್ ಅವರ ಬಗೆಗಿನ ನಿಮ್ಮ ಈ ಲೇಖನ ಚೆನ್ನಾಗಿ ಮೂಡಿ ಬಂದಿದೆ. ದಿವಾಕರ್ ಬಗ್ಗೆ ಹೇಳಲು ಹೊರಟು, ಬೇರೆಲ್ಲೋ ಹೋಗಿ, ಏನು ಹೇಳಲು ಹೊರಟರೂ ಅವರ ಬಗ್ಗೆಯೇ ಹೇಳಿದಂತಾಗುವ ಅವರ ಪ್ರತಿಭೆಯನ್ನು ಲೇಖನ ಸರಿಯಾಗಿ ಧ್ವನಿಸಿದೆ. ಧನ್ಯವಾದಗಳು.

v.v. said...

I stumbled upon your blog while searching for Kannada blogs. I am not much of a reader of literature especially Kannada literature - got turned off by the intellectual snobbery, prentension and self congratulatory writings.

Your post about Diwakar has rekindled my interests again.

Thanks for a very well written article.

..
V.V.

Unknown said...

ನಿಮ್ಮ ಬ್ಲಾಗಿಗೆ indianbloggies.org ನ 'ಕನ್ನಡದ ಅತ್ಯುತ್ತಮ ಬ್ಲಾಗ್' ಬಿರುದು ಲಭಿಸಿದೆ. ಇದರ ಕೊಂಡಿ ಇಲ್ಲಿದೆ: http://indibloggies.org/results-2005

ಅಭಿನಂದನೆಗಳು!

Anonymous said...

ಮಾನ್ಯ ಶ್ರೀರಾಮ,
ದಿವಾಕರ ಎಂಬ ಬಹುಮುಖಿ ಪ್ರತಿಭೆಯ ಕುರಿತಾದ ನಿಮ್ಮ ಲೇಖನ ಚೆನ್ನಾಗಿದೆ. ಆದರೆ, ಅವರ ನಾಪತ್ತೆಯಾದ ಗ್ರಾಮಾಫೋನು ಓದಿದಾಗ ನನಗನಿಸಿದ್ದೇನೆಂದರೆ, ತುಂಬಾ nostalgic ಆಗಿಬಿಡುತ್ತದೆ ಎಂದು. ಅಂದರೆ, ಕಳೆದ ಕಾಲ ಕಳೆದ ಕುರಿತಾಗಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಹಂಬಲಿಕೆ ತೋರಿಸುತ್ತಾರೇನೋ ಅನಿಸಿತು. ಈಗಿರುವುದರ ಕುರಿತು ಹಾಗಾಗಿಯೇ ಕೆಲವೊಮ್ಮೆ ಅವರು ಖಾರವಾಗಿ ಮಾತಾಡುತ್ತಾರೆಯೇ?
ಶೈಲಿ, ಮಾಹಿತಿ, ಸೂಕ್ಷ್ಮಜ್ನತೆಗಳಿಗಾಗಿ ಅವರ ಲೇಖನಗಳನ್ನು ತುಂಬಾ ಮೆಚ್ಚಿಕೊಂಡಿದ್ದೇನೆ. ಅವರು ದೇಶಕಾಲದಲ್ಲಿ ಫೋಟೋ ಕುರಿತಾದ ಕಥೆ ಕೂಡ ಚೆನ್ನಾಗಿತ್ತು.
ಕಮಲಾಕರ

Unknown said...

dear Sri
glanced all the writings and read few .one of them is Napatteyad....
though I read the book once but your writings changed and enriched my ideas about the book Thanks for your wonderful creation.