ಭ್ರಷ್ಟಾಚಾರ ಎಂಬುದು ಸದಾಬಹಾರ್ ಸೂಪರ್ ಸ್ಟಾರ್. ಒಂದು ಕಡೆ ಕಾನೂನು ವ್ಯವಸ್ಥೆಯನ್ನು ಬಿಗಿ ಮಾಡಬಹುದಾದರೂ, ಭ್ರಷ್ಟಾಚಾರ ಒಂದು ಹೆಜ್ಜೆ ಮುಂದಿದ್ದು ಹೊಸ ರೂಪದಲ್ಲಿ, ಹೊಸ ಪ್ರಯೋಗದೊಂದಿಗೆ ಮುಂದುವರೆಯುತ್ತದೆ. ಭ್ರಷ್ಟಾಚಾರದ ಪರಿಭಾಷೆಯೂ ಬದಲಾಗುತ್ತದೆ. ಕೆಲ ವ್ಯವಹಾರಗಳನ್ನು ಭ್ರಷ್ಟಾಚಾರವೆಂದು ವರ್ಗೀಕರಿಸುವದೂ ಕಷ್ಟಕರ. ನನ್ನ ಗೆಳೆಯರೊಬ್ಬರು ಭ್ರಷ್ಟಾಚಾರವನ್ನು ಮೂರು ಮಜಲುಗಳಲ್ಲಿ ವಿವರಿಸಿದ್ದರು ಅರ್ಥೈಸಿದ್ದರು.
ಭ್ರಷ್ಟಾಚಾರದ ನೇರ ವಿಧಾನವನ್ನು ‘ಜಬರಾನಾ‘ ಎಂದರು. ಅದರ ಹೊರರೂಪ ನಮಗೆ ದಿನನಿತ್ಯ ಕಾಣಿಸುತ್ತದೆ. ಮೀಟರಿಗಿಂತ ‘ಮೇಲೆ‘ ಕೇಳುವ ಆಟೋ, ಸಂದರ್ಶನಾ ವೇಳೆಗೆ ಮೀರಿ ರೋಗಿಗಳನ್ನು ನೋಡಗೊಡುವ ಆಸ್ಪತ್ರೆಯ ಸೆಕ್ಯೂರಿಟಿ, ಹೀಗೆ ಖಾಸಗೀ ಬದುಕು, ಸರಕಾರೀ ಕಾರ್ಯಾಲಯ, ಎಲ್ಲೆಲ್ಲೂ ನಾವು ಜಬರಾನಾ ಕಾಣಬಹುದು. ಇದು ಕಿರಿಕಿರಿಯುಂಟುಮಾಡುವ ತೆರೆದ ಭ್ರಷ್ಟಾಚಾರ. ಜಬರ್ದಸ್ತಿಯಾಗಿ ಇಂತಿಷ್ಟು ಕೊಡದಿದ್ದರೆ ಕೆಲಸವಾಗುವುದಿಲ್ಲ ಎನ್ನುವ ಖುಲ್ಲಂಖುಲ್ಲಾ ಲೇನ್ ದೇನ್ ನ ವಿಚಾರ
ಮುಂದೆ.....
No comments:
Post a Comment