ದುಡ್ಡೇ, ದೊಡ್ಡಪ್ಪ?


ಆಧಾರ್ ಯೋಜನೆಯ ಲಾಭಗಳನ್ನು ವಿವರಿಸುತ್ತಾ ನಂದನ್ ನಿಲೇಕಣಿ ಅದು ಒಂದು ದೊಡ್ಡ ಕ್ರಾಂತಿಯ ಮೊದಲ ಅಡಿಗಲ್ಲು ಎನ್ನುವ ಅರ್ಥ ಬರುವ ಹಾಗೆ ಮಾತನಾಡಿದ್ದಾರೆ. ಮುಖ್ಯವಾಗಿ ಆಧಾರ್ ಬಂದಕೂಡಲೇ ಬದಿಬದಿಯಲ್ಲಿಯೇ ಎಲ್ಲರಿಗೂ ಬ್ಯಾಂಕಿನ ಖಾತೆ ಬರಬಹುದು ಎನ್ನುವುದನ್ನು ಅವರು ಹೇಳುತ್ತಾರೆ. ಬ್ಯಾಂಕಿನ ಖಾತೆಗೆ ಅನೇಕ ಸವಲತ್ತುಗಳನ್ನು ವಿತ್ತೀಯರೂಪದಲ್ಲಿ ಕೊಡಬಹುದು ಅನ್ನುವುದನ್ನೂ ಹೇಳುತ್ತಾರೆ. ಮೊದಲ ಹಂತದಲ್ಲಿ ಈಗ ಹಣದ ರೂಪದಲ್ಲಿಯೇ ಸಂದಾಯವಾಗುತ್ತಿರುವ ಪಿಂಚನಿ, ನರೇಗಾದ ಕೂಲಿಗಳು ಖಾತೆಗೆ ನೇರವಾಗಿ ಹೋಗುತ್ತವೆ. ಎರಡನೆಯ ಹಂತದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಸಿಗುವ ದಿನಸಿ, ಸೀಮೆಎಣ್ಣೆ, ಇತ್ಯಾದಿಗಳ ಸರಕಾರಿ ಧರಕ್ಕೂ ಮಾರುಕಟ್ಟೆಯ ಧರಕ್ಕೂ ಇರುವ ವ್ಯತ್ಯಾಸವನ್ನು ವಿತ್ತೀಯ ರೂಪದಲ್ಲಿ ಕೊಡುವ ಮಾತು ಕೇಳಿಬರುತ್ತಿದೆ. ಹೀಗಾದಾಗ ಮಧ್ಯವರ್ತಿಯ ಚಿಲ್ಲರೆ ಭ್ರಷ್ಟಾಚಾರವಿಲ್ಲದೇ, ನೇರವಾಗಿ ಬಡವರ ಖಾತೆಗೆ ಸವಲತ್ತುಗಳು ತಲುಪುವ ಸುವರ್ಣಯುಗದ ಮಾತನ್ನು ನಂದನ್ ಆಡುತ್ತಾರೆ. 




No comments: