ವಿಕೇಂದ್ರೀಕರಣದ ವಿಚಾರಗಳು



ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ಹೂಡಿಕೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಬೇರೆ ರೀತಿಯ ಸ್ಥಳೀಯ ಪ್ರಯೋಗಗಳು ಹೇಗೆ ನಡೆದಿವೆ ಎನ್ನುವುದನ್ನು ಅವಲೋಕಿಸಿವುದು ಉಚಿತವಿರಬಹುದು. ವಿದೇಶೀ ಹೂಡಿಕೆ ಬಂದಾಕ್ಷಣಕ್ಕೆ ಜಾದೂವಿನ ಛಡಿಯಂತೆ ನಮ್ಮ ಗ್ರಾಮಾಂತರ ಪ್ರದೇಶದ ರೈತರ ಕಿಸ್ಮತ್ತು ಸರಿಹೋಗುವುದು ಎನ್ನುವ ಕಥೆಗಳನ್ನು ಕೇಳುತ್ತಿದ್ದೇವೆ. ನಮ್ಮ ಎಲ್ಲ ಸಮಸ್ಯೆಗಳಿಗೂ ವಿದೇಶದಲ್ಲಿಯೇ ಉತ್ತರವನ್ನು ಹುಡುಕುವ ಅಭ್ಯಾಸ ತುಸು ಸಮಯದವರೆಗೆ ಬಿಟ್ಟರೆ ನಮ್ಮದೇ ಅದ್ಭುತ ಪ್ರಯೋಗಗಳು ನಮಗೆ ಕಾಣಿಸುತ್ತವೆ.

ಚಿಲ್ಲರೆ ವ್ಯಾಪಾರದಲ್ಲಿ ಹೂಡಿಗೆ ಬರುವುದರಿಂದ ನಮಗೆ ದಾಸ್ತಾನು ಮಾಡಲು ಸದುಪಾಯ, ರೈತರಿಗೆ ಒಳ್ಳೆಯ ಬೆಲೆ ಇತ್ಯಾದಿಗಳ ಕಥೆಗಳನ್ನು ಬಿಟ್ಟು ನಮ್ಮ ಕೋಳಿ ಸಾಕಣೆಯ ಕ್ಷೇತ್ರದತ್ತ ಗಮನ ಹರಿಸೋಣ.
ಕೃಷಿಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸಂಶೋಧನೆಯ ಫಲ ಎಲ್ಲಾದರೂ ನಮಗೆ ಕಾಣಸಿಗುವುದಾದರೆ ಅದು ಹೈನುಗಾರಿಕೆ ಮತ್ತು ಕೋಳಿ ಸಾಕಣೆಯ ಕ್ಷೇತ್ರದಲ್ಲಿಯೇ.




No comments: