Showing posts with label ಕಥೆಗಳು. Show all posts
Showing posts with label ಕಥೆಗಳು. Show all posts

ದಗಡೂ ಪರಬನ ತೂಫಾನ್ ಮೇಲ್


ಅಸಾವರಿ ಲೋಖಂಡೆ
, ರೂಪಕ್ ರಾಠೋಡ್, ಪರೇಶ್ ಶಹಾ, ಸತ್ಯಜಿತ್ ದತ್ತಾ, ಬಲದೇವ, ಮಧುಬನಿ, ಮಧುವಂತಿ, ಇಂದ್ರನೀಲ – ಈ ಇಂಥ ಹೆಸರಿನ ಪಾತ್ರಗಳಿರುವ ಕಥೆಗಳು ಯಾವ ಭಾಷೆಯಲ್ಲಿ ಬಂದಿರಬಹುದು? ಯಾವ ಊರಿನದ್ದಗಿರಬಹುದು? ಯಾವ ಬರಹಗಾರನದ್ದಾಗಿರಬಹುದು? ಜಯಂತ ಕಾಯ್ಕಿಣಿಯ ಬರಹಗಳನ್ನು ಹತ್ತಿರದಿಂದ ಬಲ್ಲವರಿಗೆ ಈ ಕ್ವಿಜ್ ಗೆ ಉತ್ತರ ಹೇಳುವುದು ಕಷ್ಟಾವಾಗಲಾರದು. ಮುಂಬಯಿಯನ್ನು ಒಂದು ವಿಭಿನ್ನ ರೀತಿಯಲ್ಲಿ ಜಯಂತ ಅಂತರ್ಗತ ಮಾಡಿಕೊಂಡಿದ್ದಾನೆ. ಜಯಂತನ ರೀತಿ ಇತರ ನಮ್ಮೆಲ್ಲರಿಗಿಂತ ಬಹಳವೇ ಭಿನ್ನವಾದದ್ದು. ಮುಂಬಯಿನ ಮಹಾಸಾಗರಕ್ಕೆ ಬಂದು ಸೇರುವ ನದಿಗಳ ಮೂಲ ಹುಡುಕಹೊರಟರೆ ಎತ್ತೆತ್ತಲೋ ಹೋಗಿ ದಾರಿತಪ್ಪಬಹುದು. ಆದರೂ ಬರಹಗಾರರು ಸಾಮಾನ್ಯವಾಗಿ ನದಿ ಮೂಲ ಹುಡುಕಿ ಹೊರಡುವವರೇ.