ಯೂನಸ್‌ಗೆ ನೊಬೆಲ್ ಪ್ರಶಸ್ತಿ ಬಂದಾಗಿನಿಂದಲೂ ಅವರ ಗ್ರಾಮೀಣ್ ವಿತ್ತಪದ್ಧತಿಯ ಬಗ್ಗೆ ಜಗದಾದ್ಯಂತ ಆಸಕ್ತಿ ಬೆಳೆದಿರುವುದಲ್ಲದೇ ಅವರ ಸಂಸ್ಥೆಯ ಕಾರ್ಯವೈಖರಿ ಗ್ರಾಮೀಣವಿಕಾಸದಲ್ಲಿ ಹಾಗೂ ಬ್ಯಾಂಕಿಂಗ್‌ನಲ್ಲಿ ಒಲವಿರುವ ಎಲ್ಲರ ಕುತೂಹಲವನ್ನೂ ಕೆರಳಿಸಿದೆ. ಇದು ಸಾಲದ್ದಕ್ಕೆ ಆ ಪದ್ಧತಿಯನ್ನು ಅನುಸರಿಸಿ ಧಂಧೆ ನಡೆಸುವ ಬಂಡವಾಳಹೂಡಿಕೆದಾರರ ಗಮನವನ್ನೂ "ಗ್ರಾಮೀಣ್" ತನ್ನೆಡೆಗೆ ಸೆಳೆದುಕೊಂಡಿದೆ. ಗ್ರಾಮೀಣ್ ಬಗ್ಗೆ ಅನೇಕ ವಿದ್ವಾಂಸರು, ಪತ್ರಕರ್ತರು ಬರೆದಿದ್ದಾರಾದರೂ, ಆ ಸಂಸ್ಥೆಯ ಬಗ್ಗೆ ಈಚೆಗೆ ಬಂದಿರುವ ಹೊಸ ಪುಸ್ತಕ ಆತ್ಮಚರಿತ್ರೆಯ ಮಾದರಿಯದ್ದು. ಅದರ ಲೇಖಕರಾದ ದೀಪಲ್ ಬರೂವ ಗ್ರಾಮೀಣ್ ಸಂಸ್ಥೆಯ ಉಪ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಆಸಿಫ್ ದೌಲಾ ಗ್ರಾಮೀಣ್ ಸ್ಥಾಪಿಸಿದ ಮೂಲ ತಂಡದಲ್ಲಿ ಕೆಲಸ ಮಾಡಿದ್ದ ಯೂನಸ್ ವಿದ್ಯಾರ್ಥಿ.
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
-
ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ
ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು
ಗಮನಿಸುವುದು ...
6 years ago
No comments:
Post a Comment