ಶಕುಂತಳಾ ತಂದ ಹೊಸ ಹುರುಪು

ಈಚೆಗೆ ಬಿಡುಗಡೆಯಾದ ಶಕುಂತಳಾ ಪುಸ್ತಕಬಿಡುಗಡೆಯ ಸಂದರ್ಭದಲ್ಲಿ ಮಾತಾಡುತ್ತಾ "ಅಶೋಕ ಹೆಗಡೆ, ವಿವೇಕ, ನಾಗರಾಜ್ ವಸ್ತಾರೆ, ಶ್ರೀರಾಮ್ ಮತ್ತು ನಾನು - ಎಲ್ಲರೂ ಸಾಹಿತ್ಯೇತರ ವಲಯದಲ್ಲಿ ಕೆಲಸ ಮಾಡುತ್ತಾ, ಕನ್ನಡದಲ್ಲಿ ಕಥೆಗಳನ್ನು ಬರೆಯುತ್ತಿರುವುದು ಅದ್ಭುತವಲ್ಲವೇ?" ಎಂದು ವಸುಧೇಂದ್ರ ಹೇಳಿದರು. "ಇರಬಹುದು, ಸೋ ವಾಟ್?" ಅಂತ ನಾಗರಾಜ ವಸ್ತಾರೆ ಅವರನ್ನು ಪ್ರಶ್ನಿಸಿದರಂತೆ. ಆದರೆ ಆಲೋಚಿಸಿ ನೋಡಿದರೆ ಎರಡೂ ಮುಖ್ಯ ಮಾತುಗಳು ಅನ್ನಿಸುತ್ತದೆ. ಭಿನ್ನ ವೃತ್ತಿಯಲ್ಲಿದ್ದವರು ಭಿನ್ನ ರೀತಿಯ ಅನುಭವವನ್ನು ಕನ್ನಡದ ಬರವಣಿಗೆಗೆ ಅಳವಡಿಸುತ್ತಾರೆ ಅನ್ನುವುದು ಒಂದು ವಾದ. ಆದರೆ ಆ ಭಿನ್ನತೆ ಹೇಗೆ ಸಾಹಿತ್ಯವನ್ನು ಪೋಷಿಸುತ್ತದೆ, ಬೆಳೆಸುತ್ತದೆ ಅನ್ನುವುದನ್ನು ನಾವು ನೋಡಬೇಕಾಗಿದೆ. ಭಿನ್ನವಾದ್ದೆಲ್ಲವೂ ಉತ್ತಮವಾಗಿರಬೇಕಿಲ್ಲ ಅನ್ನುವ ದೃಷ್ಟಿಯಿಂದ ವಸ್ತಾರೆಯವರ "ಸೋ ವಾಟ್?" ಪ್ರಶ್ನೆಯನ್ನು ನಾವು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಹೊಸ ಬರವಣಿಗೆಯನ್ನು ನಾವು ಅದರ ಭಿನ್ನತೆಯ ಕಾರಣಕ್ಕಾಗಿಯೇ ಅದು ಮುಖ್ಯ ಅಂತ ಪರಿಗಣಿಸಬೇಕಾಗಿಲ್ಲ ಅನ್ನುವ ಮಾತನ್ನು ಒಪ್ಪಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಗುರುಪ್ರಸಾದ್ ಕಾಗಿನೆಲೆಯವರ ಕಥಾಸಂಕಲನ ಶಕುಂತಳಾ ಬಗ್ಗೆ ಕೆಲವು ಮಾತುಗಳನ್ನು ಬರೆಯಹೊರಟಿದ್ದೇನೆ.


ಮುಂದೆ...



7 comments:

Anonymous said...

nice one.

Anonymous said...

I think Kaginele's stories have a unique sense of dark humor and furthermore he gives his world and his experiences at a very personal level.

Summane and dejavu are some of the stories that can stay long...

Out critics should take a look at these recent works rather just reminiscing the past. Kannada short stories have come long ways and Kaginele's stories are perfect examples of where they are heading.

Keep up the good work.

Anonymous said...

Shakuntala putsforth an uncommon urban sensibility of our times and it is profusely commendable. BEEJA tops my list of likings...

Also like to make an off-beat deliberation here as your writing has my reference. I intensely feel that for me- literature happens to be just one of the expressions in a spectrum of urban imagery we always encounter. In this context, I always voice that- `It is not a big deal that we (from non-(pure)literary background) write.' This `SO WHAT?' phrase is to be read as a lateral to it.

Thanks Sriram, for having meant it beyond. I liked this piece as much.

Regards.

Nagaraj Vastarey

Keshav.Kulkarni said...

Dear Sriram,

Thanks for writing some of the outstanding articles recently I read in Kannada. I regularly read Sudha and Mayura e-zines, but none of them have the quality of your blog. You are single handedly doing better job than two magazines. Thanks for that.

Sitting far in London, I wonder how can I get access to the KATHASANKALANA you have reviewed. If you give link to the publishers, it will be useful for the people like us to order the book.

Anonymous said...

ಶಕುಂತಲಾ -ವರ್ಷದ ಯಶಸ್ವೀ ಲೇಖನ. ಇದಕ್ಕೀಗಾಗಲೇ ಒಂದು ತಿಂಗಳು. ಕನ್ನಡವೇ ನಿತ್ಯ ಹೌದೋ ಅಲ್ಲವೋ, ಶಕುಂತಲಾ- ಅಂತೂ ನಿತ್ಯ.

ಬಾನಾಡಿ said...

ಶ್ರೀ ರಾಂ ಅವರೇ,
ಕಾಗಿನೆಲೆಯವರ ಈ ಸಂಕಲನವನ್ನು ಪರಿಚಯಿಸಿ ವಿಮರ್ಶಿಸಿದಂತೆ ನೀವು ಕನ್ನಡದಲ್ಲಿ ಇತ್ತೀಚೆಗೆ ಬಂದ ಉತ್ತಮ ಕೃತಿಗಳನ್ನು ಪರಿಚಯಿಸುವಿರಿ ಎಂದು ಆಶಿಸುವೆ. ಅಶೋಕ ಹೆಗಡೆ ಅವರ "ಅಶ್ವಮೇಧ", ಕಂಬಾರರ "ಶಿಖರ್ ಸೂರ್ಯ", ಮೊಗಳ್ಳಿಯವರ "ಕಿರೀಟ" ಇತ್ಯಾದಿ ನೆನಪಿಗೆ ಬರುತ್ತಿದೆ. ಕನ್ನಡ ಪತ್ರಿಕೆಗಳು ಸಾಹಿತ್ಯವನ್ನು ಹಿಂದೆ ತೆಗೆದುಕೊಂಡು ಹೋಗುತ್ತಿವೆ. ಪ್ರಜಾವಾಣಿ, ವಿಜಯಕರ್ನಾಟಕ, ಸುಧಾ ಮತ್ತು ಮಯೂರ ಬಿಟ್ಟರೆ ಬೇರೆಲ್ಲೂ ಸಾಹಿತ್ಯದ ಬಗ್ಗೆ ತುಂಬಾ ಗಂಭೀರ ಚಿಂತನೆ ನಡೆಯುತ್ತಿಲ್ಲ. ಈ ಕಗ್ಗತ್ತಲ್ಲಲ್ಲಿ ಹೊಸ ಕಿರಣ ಮೂಡಿದುದೆಂದರೆ "ದೇಶ ಕಾಲ" ತ್ರೈಮಾಸಿಕ. ಜತೆಗೆ ಜಿ. ಪಿ. ಬಸವರಾಜು ಅವರ ಸಂಪಾದಕತ್ವದಲ್ಲಿ ಮಯೂರ ಹೆಚ್ಚು ಸಾಹಿತ್ಯಿಕ ಚಿಂತನೆ ಮಾಡುತ್ತಿದೆ. ನಾನು ನಿಮ್ಮ ಜವಾಬ್ದಾರಿ ಹೆಚ್ಚಿಸುತ್ತೇನೆ ಏನೆಂದರೆ ನೀವು ಹೆಚ್ಚು ಕನ್ನಡ ಪುಸ್ತಕಗಳನ್ನು ಓದಿ ನಮಗೆ ಪರಿಚಯಿಸಿರಿ. ಅಂತೆಯೆ ಜಗದಾದ್ಯಂತ ಕನ್ನಡ ಪುಸ್ತಕಗಳು (ಯಾವುದೇ ಬೆಲೆಗೆ) ದೊರೆಯುವಂತೆ ಲೇಖಕ, ಪ್ರಕಾಶಕ, ಪುಸ್ತಕ ಮಾರಾಟಗಾರರು ಏನಾದರೂ ಕೆಲಸ ಅಗತ್ಯವಾಗಿ ಮಾಡಬೇಕು. ಕಳೆದ ಎರಡು ಮೂರು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಉತ್ತಮ ದಿಶೆಗೆ ಹೋಗುತ್ತಿದೆ ಎಂದು ನನ್ನ ಅಂಬೋಣ. ಇದನ್ನು ಉತ್ತಮ ಮಾರುಕಟ್ಟೆ ಯನ್ನಾಗಿ ಉಪಯೋಗಿಸಿದಲ್ಲಿ ಕನ್ನಡ ಸಾಯುವ ಭಾಷೆಯಾಗದೇ ಇನ್ನೂ ಅದ್ಬುತವಾಗಿ, ಸೃಜನಾತ್ಮಕವಾಗಿ ಬೆಳೆಯಬಹುದು.
ವಂದನೆಗಳು.

Keshav.Kulkarni said...

ಪ್ರೀತಿಯ ಶ್ರೀರಾಮ್,
ತಮಗೆ, ತಮ್ಮ ಬ್ಲಾಗಿಗೆ ತುಂಬ ಧನ್ಯವಾದಗಳು. ನೀವು ಬರೆದ ವಿಮರ್ಶೆ ಓದಿ, ಕಥಾಸಂಕಲನಕ್ಕೆ ಅಪೇಕ್ಷೆ ವ್ಯಕ್ತಪಡಿಸಿದ್ದೆ. ನನ್ನ ಅನಿಸಿಕೆ ಓದಿ, ವಸುಧೇಂದ್ರ ಎಂಬವರು ಬೆಂಗಳೂರಿನಿಂದ ತಮ್ಮ ಮಿತ್ರನೊಡನೆ (ಅನಾಮಧೇಯ ಮಿತ್ರ) ಇಂಗ್ಲಂಡಿಗೆ ಕಳಿಸಿ, ಆ ಅನ್ನಮಧೇಯರು ನನಗೆ ಪೋಸ್ಟ್ ಮಾಡಿದ್ದಾರೆ.
ತಮಗೆ, ಈ ಬ್ಲಾಗಿಗೆ, ವಸುಧೇಂದ್ರ ಅವರಿಗೆ ಮತ್ತು ಪೋಸ್ಟ್ ಮಾಡಿದ ಅನಾಮಧೇಯರಿಗೆ ನಾನು ಚಿರಋಣಿ.
'ಶಾಕುಂತಲಾ' ಓದಲು ಶುರು ಮಾಡಿದ್ದೇನೆ.
ಧನ್ಯವಾದಗಳು...
ಕೇಶವ (www.kannada-nudi.blogspot.com)