ಬೆಂಗಳೂರಿಗನಾಗಿರುವ ಭರಿಸಲಾಗದ ಹಗುರ ಭಾವ

ಜಾನಕೀ ನಾಯರ್ ಅವರ ಪುಸ್ತಕ ""The Promise of a Metropolis - Bangalore's Twentieth Century" ಸುಮಾರು ದಿನಗಳ ಹಿಂದೆಯೇ ನಾನು ಖರೀದಿಸಿದ್ದೆ. ನಗರಗಳ ಬಗ್ಗೆ ಬರುತ್ತಿರುವ ಅನೇಕ ಪುಸ್ತಕಗಳ ಮಾಲಿಕೆಯಲ್ಲಿ ಇದೂ ಸೇರಿದೆಯಾದರೂ, ಈ ಪುಸ್ತಕಕ್ಕಾಗಿ ಜಾನಕೀ ಮಾಡಿರುವ ಸಂಶೋಧನೆಯಿಂದಾಗಿ, ಹಾಗೂ ಅದನ್ನು ಪ್ರಸ್ತುತ ಪಡಿಸಿರುವ ರೀತಿಯಿಂದಾಗಿ ಈ ಪುಸ್ತಕ ಮುಖ್ಯವಾಗುತ್ತದೆ. ನನಗೆ ಒಂದೇ ನಗರದೊಂದಿಗೆ ಗಟ್ಟಿಯಾದ ಸಂಬಂಧವನ್ನು ಕಾಯ್ದಿಡಲು ಸ್ವಲ್ಪ ಕಷ್ಟ. ನಾನು ನನ್ನ ಅರ್ಧಾಯುವನ್ನು ಬೆಂಗಳೂರಿನಲ್ಲಿ ಕಳೆದಿದ್ದೇನೆ, ಮಿಕ್ಕ ಭಾಗ ಉಡುಪಿ, ಮೈಸೂರು, ಹೈದರಾಬಾದು ಮತ್ತು ಗುಜರಾತಿನ ಆನಂದ್ ಮತ್ತು ಅಹಮದಾಬಾದುಗಳ ನಡುವೆ ಹಂಚಿಹೋಗಿದೆ.








4 comments:

Anonymous said...

``ಭರಿಸಲಾಗದ ಹಗುರ ಭಾವ", ಈ ಉಕ್ತಿಯನ್ನು ಕಂಡಾಗ Milan Kunderaನ unbearable lightness of being ಕಾದಂಬರಿ ನೆನಪಿಗೆ ಬರುತ್ತದೆ. ನಿಮ್ಮೀ ಪದ ಬಳಕೆ ಈ ಕಾದಂಬರಿಯ ಹೆಸರಿನಂದ ಪ್ರೇರಿತವಾದುದೆ?

ಬೆಂಗಳೂರಿನ ಜೊತೆಗಿರುವ ಮತ್ತು ನನ್ನ ನಂಟು ತುಂಬಾ ಹಳೆಯದೇನಲ್ಲ; ಐದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸುಮಾರು ೧೦ ತಿಂಗಳ ವಾಸ್ತವ್ಯ ಹೂಡಿದ್ದೆ. ಅದರ ಮೊದಲು ಆಗೊಮ್ಮೆ ಈಗೊಮ್ಮೆ ಬೆಂಗಳೂರಿಗೆ ಭೇಟಿ ನೀಡಿದ್ದರಿಂದ, ಆ ಊರಿನ ಬೆಳವಣಿಗೆಯನ್ನು ಹಂತ ಹಂತದಲ್ಲಿ ಕಂಡಿದ್ದೇನೆ; ಆಗಿನ ಹವೆ, ಖಾಲೀ ರಸ್ತೆಗಳು ಮತ್ತು ಈಗಿನ ನಿಬಿಡ ಸಂಚಾರಗಳು--ಎಲ್ಲವನ್ನೂ ನೋಡಿ ತಿಳಿದಿದ್ದೇನೆ. ಬೆಂಗಳೂರಿನ ಬಗ್ಗೆ ನನಗೆ ಭರಿಸಲಾಗದ ಹಗುರ ಭಾವವಿದೆಯೊ ಇಲ್ಲವೊ ಎಂಬುದನ್ನು ನಾ ತಿಳಿಯೆ. ಆದರೆ, ಆ ಊರಿನ ಬಗ್ಗೆ ಕಾಳಜಿಯಂತೂ ಇದೆ!

ಪ್ರದೀಪ್ ಭಟ್

ಎಂ.ಎಸ್.ಶ್ರೀರಾಮ್ said...

ಹೌದು, ಈ "ಭಾವ" ಕುಂದೆರಾನಿಂದ ಎರವಲು ಪಡೆದದ್ದು. ನಿಮ್ಮ ಟಿಪ್ಪಣಿಗೆ ಧನ್ಯವಾದಗಳು.

ಶ್ರೀರಾಮ್.

ಎಂ.ಎಸ್.ಶ್ರೀರಾಮ್ said...

ಯಶಸ್ವಿನಿ:

ಕಷ್ಟದ ಪ್ರಶ್ನೆ. ಅಪ್ಪಟ ಮುಂಬಯಿಕರ, ಅಪ್ಪಟ ನ್ಯೂಯಾರ್ಕಿಗ ಅನ್ನುವ ಅರ್ಥದಲ್ಲಿ ಇವರನ್ನು ಅಪ್ಪಟ ಬೆಂಗಳೂರಿಗ ಅಂತ ಕರೆಯಬಹುದು. ಅಂದರೆ ಇದು ನಗರದ ಲಕ್ಷಣಗಳನ್ನು ಗುರುತಿಸಿ ಆ ನಗರಕ್ಕೆ ಸೇರಿದವರು ಅನ್ನುವ ಅರ್ಥದಲ್ಲಿ ಬಳಸಿದ್ದಲ್ಲ. ಬದಲಿಗೆ ಯಾವುದೇ ಪರಿಸ್ಥಿತಿಯಲ್ಲೂ ನಾನು ಬೆಂಗಳೂರಿನಲ್ಲೇ ಉಳಿಯುತ್ತೇನೆ, ಈ ನಗರವೇ ನನ್ನ ಬೀಡು ಅನ್ನುವ ಭಾವನೆಯನ್ನು ಹೊತ್ತ ವ್ಯಕ್ತಿಗಳನ್ನು ಉದಾಹರಿಸಲು ಉಪಯೋಗಿಸಿದ್ದು. ಹೀಗಾಗಿಯೇ ನಾನು ಸ್ವತಃ ಮೂಲತಃ ಬೆಂಗಳೂರಿಗೆ ಸಂದವನಾದರೂ ಅಪ್ಪಟ ಬೆಂಗಳೂರಿಗ ಅನ್ನುವ ಪಟ್ಟ ಬಹುಶಃ ನನಗೇ ವರ್ತಿಸದು....

ಶ್ರೀರಾಮ್

Anonymous said...

ಯಶಸ್ವಿನಿಯವರ ಪ್ರಶ್ನೆಗೆ ನಿಮ್ಮ ಉತ್ತರವನ್ನು ಓದಿದಾಗ ಬಹಳ ಹಿಂದೆ ಪಟ್ಟಾಭಿರಾಮರೆಡ್ಡಿ ಬರೆದದ್ದು ನೆನಪಾಯಿತು. ಡೆಕ್ಕನ್ ಹೆರಾಲ್ಡ್ ಗೆ ಅವರು ಬರೆದಿದ್ದ ಆ ಲೇಖನದಲ್ಲಿ ಬೆಂಗಳೂರಿನ ಹುಡುಗಿಯರನ್ನು ಮದುವೆಯಾದರೆ ಒಂದು ಕಷ್ಟವಿದೆ. ಜಗತ್ತಿನ ಯಾವ ನಗರವೂ ಅವರಿಗೆ ಬೆಂಗಳೂರಿನಷ್ಟು ಚೆನ್ನಾಗಿರುವುದಿಲ್ಲ. ಪರಿಣಾಮವಾಗಿ ಅವರು ತಮ್ಮ ಗಂಡನ ಜತೆಗೆ ಬೆಂಗಳೂರಿಗೇ ಬಂದು ಬಿಡುತ್ತಾರೆ ಎಂದು ಬರೆದಿದ್ದಾರೆ.