ನಾವೇಕೆ ಬ್ಲಾಗ್ ಮಾಡುತ್ತೇವೆ!

ನನ್ನ ಸಂದರ್ಶನ

ನಿಮಗೆ ಬ್ಲಾಗ್ ಬರೆಯುವ ಐಡಿಯಾ ಬಂದದ್ದು ಹೇಗೆ?
ನನಗೆ ಬ್ಲಾಗ್ ಬರೆಯುವ ಐಡಿಯಾ ನನ್ನ ವಿದ್ಯಾರ್ಥಿಗಳಿಂದ ಬಂತು. ಅಂತರ್ಜಾಲದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಬರೆಯುವುದನ್ನ, ಮುಖ್ಯವಾಗಿ ನನ್ನದೇ ಪಾಠಗಳ ಬಗ್ಗೆ ಬೆರೆಯುವುದನ್ನ ಕಂಡಾಗ ನನಗೆ ಅದರ ಅದ್ಭುತ ಸಾಧ್ಯತೆ ಗೋಚರವಾಯಿತು. ಸಾಲದ್ದಕ್ಕೆ ನಾನು ಒಂದೆರಡು ವರ್ಷಗಳಿಂದ ಕನ್ನಡದಲ್ಲಿ ಬರವಣಿಗೆಯನ್ನು ನಿಲ್ಲಿಸಿಬಿಟ್ಟಿದ್ದೆ.ಇದಕ್ಕೆ ಕಾರಣ ನನ್ನ ಇಂಗ್ಲೀಷ್ ಬರಹವನ್ನು ಕಂಪ್ಯೂಟರ್ನಲ್ಲಿ ಬರೆಯುತ್ತಿದ್ದುದರಿಂದ ಕಾಗದದ ಮೇಲೆ ಕೈನಲ್ಲಿ ಬರೆಯುವ ಅಭ್ಯಾಸ ತಪ್ಪಿಹೋಗಿತ್ತು. ಕನ್ನಡದಲ್ಲಿ ನಾನು ಐ-ಲೀಪ್ ಉಪಯೋಗಿಸುತ್ತಿದ್ದೆ. 

ಮುಂದೆ....
10 comments:

ಕೃಷ್ಣ ಪ್ರಸಾದ್ said...

ಸರ್,
ಸುಧಾ ನಲ್ಲಿ ಬಂದ ಲೇಖನ ಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು. ಆದರೆ ಇದನ್ನು ಓದಲು ಆಗುತ್ತಿಲ್ಲ, ದಯವಿಟ್ಟು ಸ್ವಲ್ಪ ದೊಡ್ಡ ಚಿತ್ರವನ್ನ ಕೊಡಿ.

Sriram said...

ನಾನು ಪ್ರಯತ್ನಿಸಿದೆ.. ಆದರೆ ಇಷ್ಟಕ್ಕಿಂತ ದೊಡ್ಡದು ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಬರಹದ ಭಾಗವನ್ನ ನಾನು ಡೈರೆಕ್ಟಾಗಿ ಪೋಸ್ಟ್ ಮಾಡುತ್ತೇನೆ. ಆದರೆ ಪವನಜರ ಮಾತುಗಳೂ ಮುಖ್ಯವಾಗಿವೆ. ಅವರ ಟೆಕ್ಸ್ಟ್ ಸಿಕ್ಕರೆ ಅದನ್ನೂ ಹಾಕುವ ಇರಾದೆಯಿದೆ. ಅವರನ್ನು ಕೇಳುತ್ತೇನೆ.

ಶ್ರೀರಾಮ್

ಶ್ರೀವತ್ಸ ಜೋಶಿ said...

ಆತ್ಮೀಯ ಶ್ರೀರಾಮ್,

ಜೈ ರಾಮ್ ಜೀ ಕಿ!

'ತೂಕ'ದ ಬ್ಲಾಗ್ ಎಂದು ಸಮರ್ಥವಾಗಿ ಅನಿಸಿಕೊಂಡಿರುವ ನಿಮ್ಮ ಬ್ಲಾಗ್‍‍ನಲ್ಲಿಂದು ಸ್ವಲ್ಪ ಹೊತ್ತು ಕಳೆದೆ. "ಓದುಗನ ಜೀರ್ಣ" (Reader's Digest)ಕ್ಕೆ ಬೇಕಷ್ಟು ಸರಕಿದೆ ನಿಮ ಬ್ಲಾಗ್‍ನಲ್ಲಿ. ಸಾವಕಾಶವಾಗಿ ಓದುತ್ತೇನೆ; ಜೀರ್ಣಿಸಿಕೊಳ್ಳುತ್ತೇನೆ. ಅಕಸ್ಮಾತ್ ಸಿಕ್ಕ ಕಲ್ಲೊಂದನ್ನು (ಮೊಸರಲ್ಲಿ? ಅನ್ನದಲ್ಲಿ?) ಇಲ್ಲಿ ಇಡುತ್ತಿದ್ದೇನೆ.

"ಕಥೆ, ಕಾದಂಬರಿ, ಕವಿತೆ, ಪ್ರಬಂಧಗಳ ಪ್ರಾಕಾರಗಳ ಮಿತಿಗಳನ್ನು ಮೀರಲು ಬ್ಲಾಗ್ ನನಗೆ ಸಹಾಯ ಮಾಡಿದೆ." ಎಂದಿದ್ದೀರಿ. ಅದು 'ಪ್ರಕಾರ'ವಾಗಬೇಕಲ್ಲವೆ? 'ಪ್ರಾಕಾರ'ವೆಂದರೆ ಗೋಡೆ, ಆವರಣ ಎಂಬ ಅರ್ಥ; 'ಪ್ರಕಾರ'ವೆಂದರೆ ವಿಧ, ನಮೂನೆ ಎಂಬ ಅರ್ಥ. ಕನ್ನಡಕಸ್ತೂರಿ.ಕಾಂ ನಲ್ಲೂ 'ಪ್ರಕಾರ'ಕ್ಕೆ ವಿಧ, ನಮೂನೆ (ಮುಖ್ಯವಾಗಿ ಸಾಗಿತ್ಯ ಮೊದಲಾದುವುಗಳ) ಎಂದು ಅರ್ಥ ಕೊಟ್ಟಿದ್ದಾರೆ.

ನೀವೇನಂತೀರಿ?

Sriram said...

ಶ್ರೀವತ್ಸ:
ತಪ್ಪು ನನ್ನದೇ. ಎಷ್ಟೋ ಸಂದರ್ಭಗಳಲ್ಲಿ ಇದನ್ನು ಯುನಿಕೋಡ್ ಮತ್ತು ಬಿಲ್ ಗೇಟ್ಸ್ ಮೇಲೆ ಹಾಕುವ ಅವಕಾಶಗಳು ಸಿಗಬಹುದಾದರೂ, ಈ ಸಂದರ್ಭದಲ್ಲಿ ಇದು ನನ್ನದೇ ಖಾಸಗೀ ತಪ್ಪು ಎಂದು ಒಪ್ಪುತ್ತೇನೆ. ತಿದ್ದಿದ್ದಕ್ಕೆ ಕೃತಜ್ಞತೆಗಳು. ನನ್ನ ವಾಕ್ಯ ಹೀಗೆ ತಿದ್ದಿದರೆ ಸರಿಹೋಗಬಹುದೋ... "ಕಥೆ, ಕಾದಂಬರಿ, ಕವಿತೆ, ಪ್ರಬಂಧಗಳ ಪ್ರಕಾರಗಳ ಪ್ರಾಕಾರಗಳ ಮಿತಿಯನ್ನು ಮೀರಲು....."

ಥ್ಯಾಂಕ್ಸ್. ಇಂಗ್ಲೀಷ್ ಓದಿದ "ಎಲೀಟ್" ಕನ್ನಡಿಗನ ಸಮಸ್ಯೆಯನ್ನ ಗುರುತಿಸಿದ್ದೀರಿ. ಇಂಥ ತಪ್ಪುಗಳು ಮತ್ತೆ ಕಂಡರೆ ತೋರಿಸಲು ಹಿಂಜರಿಯಬೇಡಿ. ಜರಿಯಬೇಡಿ.

ಶ್ರೀರಾಮ್.

Anonymous said...

ನಮಸ್ಕಾರ ಶ್ರೀರಾಮ್,

ನಿಮ್ಮ ಬ್ಲಾಗ್ ನಲ್ಲಿ ಇದುವರೆಗೂ ೧೩ ಸಲಾ 'ಅಸ್ಮಿತತೆ' ಎಂಬ ಪದ ಉಪಯೋಗಿಸಿದ್ದೀರಿ. ಹಾಗೆಂದರೆ ಏನು?

-ಅನಾಮಧೇಯ

Sriram said...

ಅನಾಮಧೇಯ:
ನಿಮ್ಮ ಟಿಪ್ಪಣಿ ನನ್ನ ಕನ್ನಡ ರಾಷ್ಟ್ರೀಯತೆಯ ಲೇಖನದಡಿ ಬರಬೇಕಿತ್ತು. ಆದರೆ ನೀವು ಪ್ರಶ್ನೆ ಇಲ್ಲ ಕೇಳಿರುವುದರಿಂದ ಇಲ್ಲಿಯೇ ಉತ್ತರಿಸುತ್ತೇನೆ. ಅಸ್ಮಿತತೆ ಎಂಬ ಪದವನ್ನು ನಾನು ಉಪಯೋಗಿಸಿದ್ದು ನನಗೆ ದೇಶಕಾಲದಿಂದ ಬಂದ ಪ್ರಶ್ನಾವಳಿಗೆ ಉತ್ತರವಾಗಿ. ನನಗರ್ಥವಾದ ಮಟ್ಟಿಗೆ ಅದು "identity" ಪದದ ಭಾರತೀಯ ಅವತರಣಿಕೆ. ಹಿಂದಿ ಮರಾಠಿಗಳಲ್ಲಿ "ಅಸ್ಮಿತಾ" ಪದ ಉಪಯೋಗಿಸುವುದನ್ನು ನಾನು ಕಂಡಿದ್ದೇನೆ. ಕನ್ನಡಲ್ಲಿ ಈ ಪದಪ್ರಯೋಗ ವಿರಳ. ಆದರೂ ಇದು ಸರಿಯಿರಬಹುದೆಂದು ನನ್ನ ನಂಬಿಕೆ. ಈ ಬಗ್ಗೆ ಕನ್ನಡವನ್ನ ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿದವರು ಯಾರಾದರೂ ಸ್ಪಷ್ಟೀಕರಿಸಬಹುದು.

ಶ್ರೀರಾಮ್

V. Kamat said...

Namaskara!

I enjoyed your Kannada blog. Please write often.

sincerely,
-Vikas Kamat

Anonymous said...

Namasthe Sriram,

"AsmiTe" is the correct wrod and not "AsmiTaTe". I have seen this being used. Ex : "Raashtreeya AsmiTe"(National Identity).

-radhakrishnaholla@gmail.com

Anonymous said...

Hi Sriram,
atleast write heading in english so that it will be indexed by google.

Alemari said...

ಶ್ರೀ ರಾಮ್‌ರವರಿಗೆ
ಕನ್ನಡ ಸಾಹಿತ್ಯಕ್ಕೆ ನಿಮ್ಮ ಬ್ಲಾಗ್‌ ನೀಡುತ್ತಿರುವ ಕೊಡುಗೆ ಅಮೂಲ್ಯವಾದದ್ದು. ಬ್ಲಾಗ್‌ ಜಗತ್ತಿಗೆ ಹೊಸದಾಗಿ ಬಂದವ ನನ್ನ ಬ್ಲಾಗಿನಲ್ಲಿ ನಿಮ್ಮ ಬ್ಲಾಗಿಗೆ ಲಿಂಕ್‌ ಕೊಡಲಿಚ್ಛಿಸಿದ್ದೇನೆ. ಅಭ್ಯಂತರ ಇಲ್ಲವಷ್ಟೆ.