ಭ್ರಮೆ. ಆಗತಾನೇ ಕ್ಯಾಂಪಸ್ಸಿನಿಂದ ಚೀಲ ಬೆನ್ನಿಗೆ ಹಾಕಿ ಹೊರಟ ಯುವಕನಿಗೆ ಲೋಕ ಬದಲಿಸುವ ಭ್ರಮೆ. ಗಾಂಧಿ ಕಂಡ ರಾಮರಾಜ್ಯದ ಕನಸನ್ನು ನಿಜವಾಗಿಸುವ ಭ್ರಮೆ. ಹಳ್ಳಿಗಳನ್ನು ಸ್ವಯಂಪೂರ್ಣ ಮಾಡುವ ಭ್ರಮೆ. ಷೂಮಾಕರನ `Small is Beautiful' ಎಂಬ ವಿದೇಶೀ ಪುಸ್ತಕದಿಂದ ದೇಸೀ ಮಹಾತ್ಮಾ ಗಾಂಧಿಯನ್ನು ಗಾಂಧೀವಾದದ ಮಹತ್ವವನ್ನು ಕಂಡುಕೊಂಡ ಯುವಕನ ಓದು ಅವನ ಮನಸ್ಥಿತಿಗೆ ಪೂರಕ. ಜತೆಗಾರರಿಗಿಂತ ಒಂದೈದಾರುನೂರು ಸಂಬಳ ಕಡಿಮೆಯಾದರೂ `ಸೇವೆ'ಯ ತೃಪ್ತಿ ಹೊಂದುವ ಭ್ರಮೆ. ಚಿಕ್ಕ ಸಂಸ್ಥೆಯೊಂದರ ಸಂಸಾರಕ್ಕೆ ದತ್ತು ಪುತ್ರನಾಗಿ ಅವನ ಪ್ರವೇಶ. ಕನಸು ಕಟ್ಟುವ ಕಾಲ ಅದು. ಕನಸಿಗರ ವಯಸ್ಸು ಅವನಿಗೆ. ಕಟ್ಟಲೇಬೇಕು. ಕಟ್ಟಿದ.
ಮುಂದೆ ಓದಿ
ಮುಂದೆ ಓದಿ
4 comments:
ಶ್ರೀರಾಮರೆ,
ನಿಮ್ಮೀ ಲೇಖನ ಹಲವು ಕಾರಣಗಳಿಗೆ ವಿಶಿಷ್ಟವಾಗಿದೆ ಎನ್ನುವ ಕಾರಣಕ್ಕೆ ಅಭಿನಂದಿಸುತ್ತೇನೆ.
ಇಲ್ಲಿ ಬೆರಗು, ವ್ಯಂಗ್ಯ, ವಿಷಾದ, ಆಶಾವಾದ ಎಲ್ಲವೂ ತುಂಬಾ ಆರೋಗ್ಯಪೂರ್ಣವಾಗಿ ಬೆರೆತು ಆಳವಾದ ಓದಿನ ಅನುಭವ ಕೊಡುವುದರಲ್ಲಿ ಯಶಸ್ವಿಯಾಗಿದೆ. ಲೇಖನ ಸ್ವಪ್ರಶಂಸೆ, ಪರನಿಂದೆ ಅಥವಾ ಅಳುಬುರುಕುತನ ಈ ತೆರನಾದ ಅತಿಗಳಲ್ಲಿ ಪರ್ಯವಸಾನವಾಗದೇ ಇರುವ ಹಾಗೆ ರೂಪಿಸಿದ್ದೀರಿ.
ನಿಮ್ಮ ಅನುಭವ ಮತ್ತು ಅದರ ನ್ಯಾಯಯುತವಾದ ನಿರೂಪಣೆಗೆ ಬೇಕಾದ ಫಾರ್ಮ್ ಬಗ್ಗೆ ನೀವು ವಹಿಸಿರುವ ಎಚ್ಚರ ಗಮನಾರ್ಹವಾದುದು.
ಈ ಅನುಭವವನ್ನು ಒಂದು ಕಥೆಯಾಗಿಸಿ ಇದೇ ಬಗೆಯ ನ್ಯಾಯ ಒದಗಿಸುವುದು ಸಾಧ್ಯವಾದರೆ ಅದು ಮಹತ್ವಪೂರ್ಣವಾದ್ದಾಗುತ್ತದೆ ಎಂದು ಹೇಳಬಯಸುತ್ತೇನೆ.
ಇಂತಿ
ಶಿವು
ಶ್ರೀರಾಮರೇ,
ನೀವಿದನ್ನೂ ಈಗ ಬ್ಲಾಗಿಸಲು ನಿರ್ಧರಿಸಿದ್ದು ನನ್ನ ವೈಯುಕ್ತಿಕ ಕಾರಣಗಳಿಂದ ಸೋಜಿಗವಾಗಿದೆೆ.
ಅದೇನೇ ಇರಲಿ, ಇಂದಿನ ಪೀಳಿಗೆಯ ಯುವಕರಿಗೆ ಇದರಲ್ಲಿ ಎಂತಹ ಸಂದೇಶವಿದೆ ಎಂದು ಅರಿಯುವ ಕುತೂಹಲವಿದೆ. ಎಲ್ಲರೂ ನೀರಿನಲ್ಲಿಳಿದೇ ಈಜುವುದನ್ನು ಕಲಿಯಬೇಕೆನ್ನುವುದು ಸತ್ಯವೇ.ಆದರೆ ಈ ಲೇಖನ ನೀರಿನ ಆಳ, ತಾಪಮಾನವನ್ನು ಸ್ವಲ್ಪ ಮಟ್ಟಿಗೆ ಅನಾವರಣಗೊಳಿಸಿದೆ ಹಾಗು ಇದು ನಿಮ್ಮ ಆಶಯವೂ ಕೂಡ ಎಂದು ನಂಬುತ್ತೇನೆ.
ಹುಟ್ಟಿನಿಂದಲೇ ಭ್ರಮನಿರಸಗೊಂಡ ಪೀಳಿಗೆ ನನ್ನದು. ಯಾವ ರಾಜಕೀಯ ಪಕ್ಷಕ್ಕೂ ಸೇರದ ಆದರ್ಶ ನಮ್ಮದು. ಬಂಡವಾಳಶಾಹಿಗಳ ಹಿಂದೆಹೋದವರು ಬುದ್ಧಿವಂತರು ಎಂಬುದು ಇಂದಿನ ಸತ್ಯ.
ಸಾಮಾಜಿಕಪರಿವರ್ತನೆಯ ಆಶಯವೂ ಇಲ್ಲದಿರುವ ನಾವು, ಪರಿವರ್ತನೆಯಾಗದಿದ್ದಾಗ ಅಷ್ಟಾಗಿ ಭಾವುಕರೂ ಆಗದಿರಬಹುದು. ಹಾಗೆಯೇ ಪ್ರಜಾಸತ್ತೆಯ ರಕ್ಷಣೆ ಕೂಡ ನಮ್ಮ ಕೇಂದ್ರಗುರಿಯಾಗಿ ಉಳಿದಿಲ್ಲ. (ಒಟ್ಟಿನಲ್ಲಿ ಕಲ್ಮಷ ಮನಸ್ಸು ನಮ್ಮದು :) )
ಆದರೂ ಕನಸುಕಾಣುವುದನ್ನು ತಪ್ಪಿಸಲಾಗುವುದಿಲ್ಲ.
ನಿಮ್ಮ ಲೇಖನ ಅಂತಹ ಕನಸುಗಾರರಿಗೆ ಸ್ಥಿತಪ್ರಜ್ಞೆ ಕೊಡಬಹುದೆಂದು ತಿಳಿದಿದ್ದೇನೆ.
ಧನ್ಯವಾದಗಳು.
ಶ್ರೀರಾಮ್ ಅವರಿಗೆ, ನಿಮ್ಮ ಬ್ಲಾಗನ್ನು ಗಮನಿಸುವ ಓದುಗರೊಲ್ಲೊಬ್ಬ ನಾನು. ಈ ಲೇಖನವನ್ನು ಓದಿದಾಗ ನನ್ನ ಜೀವನ ಪಥದ ಕವಲೊಂದನ್ನು ಸಂದರ್ಶಿಸಿದಂತೆ ಅನಿಸಿತು. ಸಹಕಾರಿ ತತ್ವಗಳಿಂದ ಪ್ರೇರಿತನಾಗಿ, ಗುಜರಾತಿನ ಅದೇ ವಿದ್ಯಾ ಸಂಸ್ಥೆಯಲ್ಲಿ ಪದವಿ ಪಡೆಯಲು ಹೊರಟು, ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಅಲ್ಲಿನ ಉಪನ್ಯಾಸಕರ ತಿಣುಕಿನ ಪ್ರಶ್ನೆಗಳಿಗೆ ಸಮಾಜ ಸೇವಕನ ಮಾದರಿಯಲ್ಲಿ ಉತ್ತರಿಸಲು ಅಸಮರ್ಥನಾಗಿದ್ದೆ. ಅಲ್ಲಿಗೆ ಒಡೆದ ಕನಸು ಪುನ: ಕೂಡುವ ಮುನ್ನ ಬಂಡವಾಳಶಾಹಿಯಾಗಿ ಅಮೇರಿಕೆ ಸೇರಿದೆ. ಬದಲಾದ ಕಾಲಘಟ್ಟದಲ್ಲಿ ಕುಳಿತು ಗಮನಿಸಿದಾಗ ಕಳೆದ ಕವಲೊಂದನ್ನು ಈ ಲೇಖನ ದರ್ಶಿಸಿತು. ಧನ್ಯವಾದಗಳು.
- ಕನ್ನಡಿಗ
kannadablogs.blogspot.com
ಶಿವು, ಶಾಮ್, ಕನ್ನಡಿಗ:
ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಶಿವು, ಇದನ್ನ ಕಥೆಯಾಗಿಸುವುದು ಸಮರ್ಪಕ ಅಂತ ನನಗನ್ನಿಸಲಿಲ್ಲ. ಕಡೆಗೂ ವಿಚಾರಗಳನ್ನ ಒಡ್ಡುವುದಕ್ಕೆ ಬರವಣಿಗೆ ಒಂದು ಮಾಧ್ಯಮ - ಅದರಲ್ಲಿ ಪ್ರಬಂಧ/ಕಥೆ ಒಂದು ಪ್ರಾಕಾರ.. ಅಲ್ಲವೇ?
ಶಾಮ್, ಎಲ್ಲ ಪೀಳಿಗೆಗಳಲ್ಲೂ ನಮಗೆ ವಿಭಿನ್ನ ಒಲವಿನ ಜನ ಸಿಗುವುದಿಲ್ಲವೇ? ನಾವು ಮಾಡಬಲ್ಲದ್ದು ಇಷ್ಟು, ಆದರೆ ಯೋಚಿಸಬಲ್ಲದ್ದು ಅಮಿತ. ಮೇಧಾರ ಬಗೆಗಿನ ನನ್ನ ಬರವಣಿಗೆಯಲ್ಲಿ ನಡೆದ ಚರ್ಚೆ ಗಮನಿಸಿದರೆ ಯೋಚನೆಗಳಿಗೆ ಬರವಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಯಾವ ವಿಚಾರಧಾರೆಯೊ ಪರ್ಫೆಕ್ಟ್ ಅಲ್ಲ, ಎಲ್ಲಕ್ಕೂ ಮಿತಿಗಳಿವೆ ಎಂಬುದನ್ನ ನಾವು ಗಮನಿಸಬೇಕು ಅಷ್ಟೇ.. ಆದರೆ ನಾವು ಕೈಗೊಂಡ ಜೀವನಯಾತ್ರೆಯ ದಿಕ್ಕಿನ ಬಗ್ಗೆ ನಮಗೆ ಅನುಮಾನಗಳು ಇಲ್ಲದಿದ್ದರೆ ಸುಗಮ. ಅನುಮಾನ ಬಂದು ಪಾಪಪ್ರಜ್ನೆ ಕಾಡಿದರೆ ಇಲ್ಲಿಯೂ ಸಲ್ಲದೆ ಅಲ್ಲಿಯೊ ಸಲ್ಲದೆ ಅಗುತ್ತೇವೆ ಅಲ್ಲವೇ?
ಕನ್ನಡಿಗ: ನಾನೂ ಆ ಸಂಸ್ಥೆಯಲ್ಲಿ ಕೆಲ ದಿನ ಉಪನ್ಯಾಸಕನಾಗಿದ್ದೆ. ನಿಮ್ಮನ್ನು ಕೇಳಿದ ತಿಣುಕಿನ ಪ್ರಶ್ನೆಗಳಿಗೆ ನಾನೇನಾದರೂ ಕಾರಣನಾಗಿದ್ದೆನೋ ಅಂತ ಅನುಮಾನ ಬರುತ್ತಿದೆ!!
ಶ್ರೀರಾಮ್
Post a Comment