ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ

ಒಂದು ರೂಪಾಯಿಗೆ ಕಿಲೋ ಅಕ್ಕಿಯನ್ನು ಬಡವರಿಗೆ ಪಡಿತರ ವ್ಯವಸ್ಥೆಯ ಮೂಲಕ ಸರಬರಾಜು ಮಾಡುವುದಾಗಿ ಸರಕಾರ ಘೋಷಿಸಿದಾಗಿನಿಂದಲೂ ಆ ಬಗ್ಗೆ ಅನೇಕ ಚರ್ಚೆಗಳು ಬಂದಿವೆ. ಅದರಲ್ಲಿ ಮುಖ್ಯವಾದದ್ದು ಈ ಯೋಜನೆಯಿಂದ ಬಡವರು ಸೋಮಾರಿಗಳಾಗುತ್ತಾರೆ ಎನ್ನುವ ಮಾತು. ನಗರದ ಆಟೋರಿಕ್ಷಾ ಚಾಲಕರನ್ನೂ ನಾವು ಎಷ್ಟೋ ಬಾರಿ ಸೋಮಾರಿಗಳೆಂದು ಕರೆಯುತ್ತೇವೆ. ಕೆಲವು ಕಟ್ಟೆಗಳನ್ನು ಬಿಟ್ಟರೆ ನೀವು ಸೋಮಾರಿ ಆಟೋ ಚಾಲಕರನ್ನು ನೋಡಿದ್ದೀರಾ? ಅಕಸ್ಮಾತ್ ಆಟೋ ಚಾಲಕ ನಾವು ಕೇಳಿದ ಜಾಗಕ್ಕೆ ಬರದೇ ಇದ್ದರೆ ಆ ಸವಾರಿ ಆತನಿಗೆ ಗಿಟ್ಟುವುದಿಲ್ಲ ಎನ್ನುವುದೇ ಪ್ರಮುಖ ಕಾರಣವಾಗಬಹುದಾದರೂ ಸೋಮಾರಿತನ ಕಾರಣವಲ್ಲ. ಈ ಸವಾರಿಯನ್ನು ಬಿಟ್ಟುಕೊಡುವುದರಿಂದ ಆತನಿಗೆ ಇನ್ನೂ ದೂರ ಕ್ರಮಿಸುವ ಹೆಚ್ಚಿನ ಕೆಲಸದ ಸಾಧ್ಯತೆಯನ್ನಾತ ಪರಿಗಣಿಸಿರುತ್ತಾನೆ. ಹೀಗಾಗಿ ನಮ್ಮ ಸಮಾಧಾನಕ್ಕೆ ನಾವು ಅವರನ್ನು ಸೋಮಾರಿಗಳೆಂದು ಬೈದುಕೊಳ್ಳಬಹುದಾದರೂ, ಉದ್ಯಮಶೀಲತೆಯ ದೃಷ್ಟಿಯಿಂದ ನೋಡಿದರೆ ನಮಗೆ ಹೊಸ ಅರ್ಥದ ಹೊಳಹುಗಳೇ ಸಿಗುತ್ತವೆ. ಒಂದು ನಿಗದಿತ ಬೆಲೆಗೆ ಕೆಲಸ ಮಾಡದಿರುವುದಕ್ಕೂ ಸೋಮಾರಿತನಕ್ಕೂ ಮೂಲಭೂತವಾದ ವ್ಯತ್ಯಸವಿದೆ.



No comments: