ಗುಟ್ಕಾ ನಿಷೇಧದ ವಿಚಾರಗಳು

ರಾತ್ರೆ ಒಂಬತ್ತೂವರೆ. ರಾಷ್ಟ್ರೀಯ ಎಕ್ಸಪ್ರೆಸ್ವೆ ನಂಬರ್ ಒಂದರಲ್ಲಿ ನಾನು ಆಣಂದದಿಂದ ಅಹಮದಾಬಾದಿಗೆ ಹೊರಡಬೇಕು. ಆ ರಸ್ತೆಯನ್ನು ಪ್ರವೇಶಿಸಿದರೆ ಮತ್ತೆ ಹೊರಬರಲು ಸಾಧ್ಯವಿಲ್ಲ, ವೇಗವಾಗಿಯೇ ಕಾರನ್ನು ಚಲಾಯಿಸಬೇಕು. ನನ್ನನ್ನು ಒಯ್ಯುತ್ತಿದ್ದ ಟ್ಯಾಕ್ಸಿಯ ಚಾಲಕ ಹೊರವಲಯದಲ್ಲಿ ಗಕ್ಕನೆ ನಿಲ್ಲಿಸಿದ. "ಏನಾಯಿತು?" ಎಂದೆ. "ಏನಿಲ್ಲ, ವಿಪರೀತ ನಿದ್ದೆ, ಸ್ವಲ್ಪ ಗುಟ್ಕಾ ತಿಂದರೆ ಸರಿಹೋಗುತ್ತದೆ" ಎಂದ. ಎರಡು ಪೊಟ್ಟಣ ಗುಟ್ಕಾ ಹಿಡಿದು ಬಂದ. ನನಗೆ ನಗುವಿಲ್ಲ, ಅಳುವಿಲ್ಲ. ಆತಂಕದಲ್ಲಿ(ಗುಟ್ಕಾ ಸೇವಿಸದೆಯೇ) ಕಣ್ಣೂ ಮಿಟುಕಿಸದಂತೆ ಜೀವವನ್ನು ಕೈಯಲ್ಲಿಹಿಡಿದು ಕೂತಿದ್ದೆ. ಯಾವ ತೊಂದರೆಯೂ ಇಲ್ಲದೆ, ಪೂರ್ಣ ಎಚ್ಚರದಿಂದ ನನ್ನನ್ನು ಬಿಡಬೇಕಾದ ಸ್ಥಳಕ್ಕೆ ಬಿಟ್ಟ. ಗುಟ್ಕಾದ ಗುಣಗಾನಕ್ಕೆ ಇದೂ ಒಂದು ಉದಾಹರಣೆ. ಕಷ್ಟಪಟ್ಟು ಕೆಲಸಮಾಡುವವರಿಗೆ ಗುಟ್ಕಾದಿಂದ ಉತ್ಪಾದಕತೆ ಹೆಚ್ಚಿ, ಆದಾಯವೂ ಹೆಚ್ಚುತ್ತದೆ. ಆದರೆ ಇದು ಸಮಂಜಸವಾದ ವಾದವೇ?

ಮುಂದೆ....