ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಳೀಯತೆಯ ರಕ್ಷಾಕವಚ


ಹಲವು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಮುಂಜಾನೆಯೂ ಕಾಫಿ, ಮಧ್ಯಾಹ್ನವೂ ಕಾಫಿ, ಸಂಜೆಯೂ ಕಾಫಿ. ಚಹಾ ಅನ್ನುವುದು ಉತ್ತರಭಾರತದ ಅತಿಥಿಗಳು ಬಂದಾಗ ಮಾತ್ರ ತಯಾರಾಗುತ್ತಿತ್ತು. ಅಥವಾ ಯಾರಾದರೂ ಬೇಕೆಂದರೆ – ಅಥವಾ ಯಾವಾಗಲಾದರೊಮ್ಮೆ ಬೇಜಾರಾಯಿತೆಂದರೆ ಚಹಾದ ಸೇವನೆ ನಡೆಯುತ್ತಿತ್ತು. ಆದರೆ 1994ರಲ್ಲಿ ನಮ್ಮ ಮನೆಯ ಕಾಫಿ ಸೇವನೆಯ ಅಭ್ಯಾಸದಲ್ಲಿ ಮೂಲಭೂತ ಬದಲಾವಣೆಯಾಯಿತು. ಆಗಿನಿಂದ, ಮುಂಜಾನೆಯ ಮೊದಲ ಪೇಯ ಕಾಫಿ. ಅಲ್ಲಿಂದ ಮುಂದಕ್ಕೆ ದಿನದಲ್ಲಿ ಹಲವು ಕಪ್ಪುಗಳ ಚಹಾ ಸೇವನೆ. ಪ್ರಮುಖ ಎನ್ನಿಸುವ ಅತಿಥಿಗಳು ಬಂದರೆ ಕಾಫಿ. ಕ್ರಮಕ್ರಮೇಣ ದಿನದಲ್ಲಿ ಕಾಫಿಯೂ ಆಗಬಹುದು, ಚಹಾವೂ ಆಗಬಹುದು ಎನ್ನುವ ಪರಿಸ್ಥಿತಿಗೆ ತಲುಪಿಬಿಟ್ಟೆವು. ಇದು ನಮ್ಮ ಮನೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅನೆಕರ ಮನೆಯಲ್ಲಿ ಈ ಮೂಲಭೂತ ಬದಲಾವಣೆಯಾಯಿತು. ಇದಕ್ಕೆ ಕಾರಣ ಮಾತ್ರ ಕುತೂಹಲದ್ದು.No comments: