ರಾಜಾಸ್ಥಾನದ ಡುಂಗರ್ ಪುರದಲ್ಲಿ ಒಂದು ಸರ್ವೆ ನಡೆಸುತ್ತಿದ್ದ ಕಾಲಕ್ಕೆ ನನ್ನ ಜೊತೆಯಿದ್ದ ರಾಮಾಕಾಂತ ಸಹೂ ಆಹಾರಕ್ಕೆ ತುಂಬಾ ಕಷ್ಟವಾಗುತ್ತಿದೆ ಎಂದು ಅಪಸ್ವರವನ್ನೆತ್ತಿದ. "ಊಟದಲ್ಲಿ ಟೊಮೇಟೋನೇ ಇಲ್ಲ. ಊಟಕ್ಕೆ ರುಚಿಯೇ ಇಲ್ಲ" ಎಂದದ್ದಕ್ಕೆ ಮಾತು ಹಾರಿಸುತ್ತ ಹೇಳಿದ್ದೆ: "ನಮ್ಮ ಅಧ್ಯಯನ ಬಿಟ್ಟು ಡುಂಗರ್ ಪುರದ ತರಕಾರಿ ಮಾರುಕಟ್ಟೆಯ ಆರ್ಥಿಕತೆಯನ್ನ ಪರಿಶೀಲಿಸೋಣ. ಟೊಮೇಟೋ ಎಲ್ಲಿಂದ ಬರುತ್ತೆ, ಸಾರಿಗೆ ಖರ್ಚು ಪರಿಶೀಲಿಸಿ ಆ ಬೆಲೆಗೆ ಇಲ್ಲಿಯ ಬಡವರು ಅದನ್ನು ಕೊಳ್ಳಲು ಸಾಧ್ಯವೇ ನೋಡೋಣ" ಎಂದಿದ್ದೆ. ರಮಾಕಾಂತ ತನ್ನ ಟೊಮೇಟೋ ಬೇಡಿಕೆಯನ್ನು ಬಿಟ್ಟುಕೊಟ್ಟದ್ದರಿಂದ ನಮ್ಮ ಮೂಲ ಸರ್ವೆಯನ್ನು ಮುಂದುವರೆಸಿದ್ದೆವು. ಅಂದೇ ಮಧ್ಯಾಹ್ನ ವಾಪಸ್ಸಾಗುತ್ತಿರುವಾಗ ಡುಂಗರ್ ಪುರದಿಂದ ಅಷ್ಟೇನೂ ದೂರವಲ್ಲದ ಬಿಚ್ಚಿವಾಡದ ಢಾಬಾದಲ್ಲಿ ಭರಪೂರ ಟೊಮೇಟೋ ಸಿಕ್ಕಿತ್ತು. ಹೊರಗಿನ ಜನರಷ್ಟೇ ಉಣ್ಣುವ ಹೆದ್ದರಿಯ ಮೇಲಿದ್ದ ಬಿಚ್ಚಿವಾಡಾದ ಢಾಬಾದಲ್ಲಿ ಸ್ಥಳೀಯರಿರಲೇ ಇಲ್ಲ!
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
-
ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ
ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು
ಗಮನಿಸುವುದು ...
6 years ago
No comments:
Post a Comment