ಕಛ್ ಭಾರತದ ಅತೀ ದೊಡ್ಡ ಜಿಲ್ಲೆ. 2011ರ ಜನಗಣತಿಯಂತೆ ಅಲ್ಲಿ ವಾಸ್ತವ್ಯವಿರುವುದು 2 ದಶಲಕ್ಷ ಜನ. ಅಲ್ಲಿಯ ಜನಸಂಖ್ಯಾ ಸಾಂದ್ರತೆ ಪ್ರತಿ ಚದರ ಕಿಲೋಮೀಟರ್ ಗೆ ಕೇವಲ 46. ಭಾರತದ ಸರಾಸರಿ ಜನಸಾಂದ್ರತೆ ಕಿಲೋಮೀಟರಿಗೆ 382, ಗುಜರಾತ್ ರಾಜ್ಯದ್ದು 308, ಪಶ್ಚಿಮ ಬಂಗಾಲದ್ದು 1030 ಮತ್ತು ಬಿಹಾರದ್ದು 1102. ಈ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ ಹದಿನೈದು ದಿನಕಾಲ 375 ಮಿಲಿಲೀಟರು ಮಳೆ ಬೀಳುತ್ತದೆ. ಕೃಷಿ ಅಷ್ಟಕ್ಕಷ್ಟೇ. ಕಡಲಿರುವುದರಿಂದ ಮೀನುಗಾರಿಕೆ ಇದೆ. ಈಚೆಗೆ ಕಡಲನ್ನು ಆಕ್ರಮಿಸಿಕೊಂಡಿರುವ ಅದಾನಿ ಸಂಸ್ಥೆಯಿಂದಾಗಿ ಆ ಕೆಲಸವನ್ನೂ ಜನ ಕಳೆದುಕೊಳ್ಳುತ್ತಿದ್ದಾರೆ. ದೇಶಕ್ಕೇ ಉಪ್ಪನ್ನು ಸರಬರಾಜು ಮಾಡುವಷ್ಟು ಉಪ್ಪು ಉತ್ಪಾದನೆಯಿದೆಯಾದರೂ ಅಲ್ಲಿ ಕೆಲಸ ಮಾಡುವ ಅಗಾರಿಯಾಗಳ ಕಡು ಬಡತನ ಮತ್ತು ಅಮಾನವೀಯ ಪರಿಸರ ಹೃದಯವಿದ್ರಾವಕವಾಗಿರುತ್ತದೆ. ಈ ಎಲ್ಲದರ ನಡುವೆಯೂ ಇಲ್ಲಿ ಇರುವ ಕಲಾವಂತಿಕೆಯನ್ನು ನೋಡಿಯೇ ನಂಬಬೇಕು.
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
-
ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ
ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು
ಗಮನಿಸುವುದು ...
6 years ago
No comments:
Post a Comment