ಎರಡು ಜೀವನಚರಿತ್ರೆಗಳು

................ನಾನು ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೆ ಕಾರಣ ಇತ್ತೀಚೆಗೆ ಓದಿದ ಎರಡು ಪುಸ್ತಕಗಳು. ಮೊದಲನೆಯದು ಟಿ.ಜೆ.ಎಸ್. ಜಾರ್ಜ್ ಬರದ ಎಂ.ಎಸ್. ಸುಬ್ಬುಲಕ್ಷ್ಮಿಯವರ ಜೀವನ ಚರಿತ್ರೆ "MS: A Life in Music”. ಇನ್ನೊಂದು ಮಲ್ಲಿಕಾರ್ಜುನ ಮನ್ಸೂರರ ೧೯೮೪ರಲ್ಲಿ ಪ್ರಕಟಗೊಂಡಿದ್ದ "ನನ್ನ ಜೀವನ ರಸಯಾತ್ರೆ"ಯ ಇಂಗ್ಲಿಷ್ ಅನುವಾದ 2005ರಲ್ಲಿ ಪ್ರಕಟಗೊಂಡ "Rasa Yatra: My Journey in Music”. ಈ ಎರಡೂ ಪುಸ್ತಕಗಳನ್ನು ಓದಿದಾಗ ಜೀವನಚರಿತ್ರೆಯ ಮಿತಿಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಆದರೂ ಎರಡೂ ಪುಸ್ತಕಗಳು ತಮ್ಮದೇ ವಿಶಿಷ್ಟ ರೀತಿಯಲ್ಲಿ ಓದುಗನನ್ನು ಸೆಳೆಯುತ್ತವೆ. 

 ಮುಂದೆ...


11 comments:

Anonymous said...

ಒಳ್ಳೆಯ ಲೀಖನ ... ಜೀವನ ಚರಿತ್ರೆ ಬಿಡಿ ... ಇ೦ತ ದ್ದೊ೦ದು ವಿಮರ್ಶೆ ಓದುವುದೂ ಖುಶಿಅಯ ವಿಚಾರ.. ತು೦ಬ ಧನ್ಯವಾದಗಳು ... ಮೀರಾ

Anonymous said...

Great insight .. and comprehensive writing.

Regard
ashok

Unknown said...

“south asians are careless about keeping letters, records and historical memorabilia in general”

ಗುಹಾ ಹೇಳುವುದು ನಿಜವೆಂದೇ ತೋರುತ್ತದೆ.
ಮುಂಬರುವ ಚರಿತ್ರೆಯಲ್ಲಿ ಇಂದಿನ ಪಾತ್ರ ಮಹತ್ವದ್ದು, ನಿಜ.. ಆದರೆ ನಾವು ನಮ್ಮ ಜೀವನವು ಚರಿತ್ರೆಯಲ್ಲಿ ಅಳಿಸಿಹೋಗದೇ ಇರಬೇಕು ಎಂದು ಊಹಿಸಿಕೊಳ್ಳುವುದೇ ಅಹಂಕಾರವಲ್ಲವೇ? ಅಂದರೆ, ನಮ್ಮ ಮಹಾನ್ ವ್ಯಕ್ತಿತ್ವಗಳು ತಮ್ಮ ಸಾಧನೆಗಳನ್ನು ಸಾಮಾನ್ಯವೆಂದೇ ಪರಿಗಣಿಸಿ ಅವುಗಳ records ಇಡದೇ ಇರಬಹುದಲ್ಲವೇ..(ಒಂದುತರಹ hypermodesty?)

ಅದೇನೇ ಇರಲಿ, ನಿಮ್ಮ ವಿಮರ್ಶೆ ಬಹಳ ಚೆನ್ನಾಗಿದೆ!

Anonymous said...

ನಿಮ್ಮ ಬ್ಲಾಗು ಪ್ಲಾನೆಟ್ ಕನ್ನಡಕ್ಕೆ ಸೇರಿಸಲು ಅನುಮತಿ ಉಂಟೆ?

ಪ್ಲಾನೆಟ್ ಕನ್ನಡ ಬಗ್ಗೆ ತಿಳಿಯಲು http://planet.sampada.net/ ನೋಡಿ.

ಧನ್ಯವಾದಗಳು,

- ಹೆಚ್ ಪಿ

ಎಂ.ಎಸ್.ಶ್ರೀರಾಮ್ said...

ಖಂಡಿತ ಸೇರಿಸಿ, ನನ್ನ ಅಭ್ಯಂತರವೇನೂ ಇಲ್ಲ. ಸಂಪದ ನೋಡಿದ್ದೇನೆ. ಚೆನ್ನಾಗಿದೆ. ನೀವು ಮಾಡಿರುವ ಕೆಲಸ ಒಳ್ಳೆಯದು, ಅದಕ್ಕೆ ಸಮಯವನ್ನೂ ವೆಚ್ಚ ಮಾಡುತ್ತಿದ್ದೀರಿ, ತುಂಬಾ ಸಂತೋಷ. ನಾವುಗಳು ಕನ್ನಡವನ್ನು ಜಾಲದಲ್ಲಿ ಹೆಚ್ಚು ಹೆಚ್ಚು ಪಸರಿಸಲು ಕೆಲಸ ಮಾಡಬೇಕು.

Anonymous said...

ಧನ್ಯವಾದಗಳು :)

ಪ್ಲಾನೆಟ್ ಗೆ ನಿಮ್ಮ ಬ್ಲಾಗ್ ಸೇರಿಸಿರುವೆ.

ಬ್ಲಾಗಿನ ಸೈಡ್ ಬಾರ್ ನಲ್ಲೊಂದು RSS ಫೀಡ್ ಗೆ ಲಿಂಕ್ ಕೊಟ್ಟರೆ ಚೆನ್ನಾಗಿರುತ್ತೆ, ಅಲ್ವೆ?

ನಿಮ್ಮ ಬ್ಲಾಗಿನ RSS ನಲ್ಲಿ ಸಂಪೂರ್ಣ ಬರಹ ಬರುತ್ತಿದೆ. ಚುಟುಕು (excerpt) ಮಾತ್ರ ಬರುವಂತೆ ಮಾಡಿದರೆ ಚೆನ್ನಾಗಿರುತ್ತದೆ (ಬ್ಲಾಗರ್ ಸೆಟ್ಟಿಂಗ್ಸ್ ನೋಡಿ).

ನೀವು ಚಿತ್ರಗಳನ್ನು ಸೇರಿಸಲು ಏನನ್ನು ಬಳಸುತ್ತಿದ್ದೀರ? ಯಾಕೋ RSS parse ಆಗುವಾಗ ತೊಂದರೆ ಕೊಡುತ್ತಿದೆ.
ಇಲ್ಲಿ ನೋಡಿ:
http://planet.sampada.net/planet-kannada/

ಎಂ.ಎಸ್.ಶ್ರೀರಾಮ್ said...

ನಾಡಿಗ್, ನೀವು ಹೇಳಿದಂತೆ ಸೆಟ್ಟಿಂಗ್ ಬದಲಾಯಿಸಿದ್ದೇನೆ. ಮಿಕ್ಕಂತೆ ನಾನು ಟೆಕ್ನಲಾಜಿಕಲಿ ಚಾಲೆಂಜ್ಡ್. ಫೋಟೊ ಅಪ್ಲೋಡ್ ಮಾಡಲು ಬ್ಲಾಗರ್ ಕಂಪೋಸ್ ಉಪಯೋಗಿಸುತ್ತೇನೆ.ಈ ಬಾರಿ ಸ್ವಲ್ಪ ಸಮಯ ಸಿಕ್ಕಾಗ ಈ ಎಲ್ಲದರ ಬಗ್ಗೆ ಕಲಿಯಬೇಕು. ಉದಾಹರಣೆಗೆ ಅರ್.ಎಸ್.ಎಸ್. ಫೀಡ್ ಅಂದರೆ ಏನು, ಅದೇನು ಮಾಡುತ್ತೆ ಅನ್ನೋದು ನನಗೆ ತಿಳಿಯದು!!

Anonymous said...

ನಿಮ್ಮ ಮೇಯ್ಲ್ ಐಡಿ ಎಂಥ, ಮಾರಾಯ್ರೇ? ನನಗೊಂದು ಮೇಯ್ಲ್ ಕಳಿಸ್ಲಿಕ್ ಆಗತ್ತಾ - hpnadig AT gmail DOT com.

Sree said...

ತುಂಬಾ ತಡವಾಗಿ ಬರೀತಿದ್ದೀನಿ, ನಿಮ್ಮ ಬ್ಲಾಗ್‌ ನಮ್ಮಗಳ್ಗೆ ಟೆಕ್ಸ್ಟ್‌ಬುಕ್‌ ಇದ್ದಹಾಗೆ ಇದೆ, ಸಖತ್ useful n interesting at the same time! ಇತ್ತೀಚೆಗಷ್ಟೆ ನೋಡಿದ್ದರಿಂದ ದಿನಕ್ಕೊಂದು ಕಥೆಯಂತೆ ಓದಿಕೊಳ್ತಿದೀನಿ, ತುಂಬಾ ಚೆನ್ನಾಗಿದೆ, ಥ್ಯಾಂಕ್ಸ್!
ಹಳೆಯ ಪೋಸ್ಟ್‌ನಲ್ಲಿ ಈ ಮಾತುಗಳು ಹೇಳೊ ಅನಿವಾರ್ಯವೇನ್ ಇರಲಿಲ್ಲ, ಆದ್ರೆ ಈ ಪೋಸ್ಟ್ ಬಗ್ಗೆನೇ ಎರಡ್ ಮಾತು ಹೇಳಬೇಕನ್ನಿಸಿದ್ದ್ರಿಂದ ಇದನ್ನೂ ಇಲ್ಲೇ ಹೇಳಿಬಿಟ್ಟೆ.

ಈಗ ಪೋಸ್ಟ್ ಬಗ್ಗೆ - ನಾನು ಈ ಪುಸ್ತಕ ಇತ್ತೀಚೆಗೆ ಓದಿದೆ, ಅದೇ ಮೂಡ್‌ನಲ್ಲಿ ಒಂದು ಚಿಕ್ಕ ಬ್ಲಾಗ್ ಪೋಸ್ಟನ್ನೂ ಕುಟ್ಟಿಹಾಕಿದೆ. ನೆನಪಲ್ಲಿ ಇನ್ನೂ ಹಸಿರಾಗಿರೋದ್ರಿಂದ ನೀವು "ಸುಬ್ಬುಲಕ್ಷ್ಮಿ ತಮ್ಮ ಸಹನಟ ಹಾಗೂ ಸಂಗೀತಗಾರ ಜಿ.ಎನ್.ಬಿ ಗೆ ಬರೆದರೆನ್ನಲಾದ ಕೆಲ ಪ್ರೇಮ ಪತ್ರಗಳ ಮೂಲಕ ಆಕೆಯ ಆಗಿನ ಮನಸ್ಥಿತಿಯನ್ನು ಅರಿಯಬಹುದು. ಆದರೆ ಜಿ.ಎನ್.ಬಿ ಬಹುಶಃ ಈ ಪತ್ರಗಳಿಗೆ ಉತ್ತರ ಬರೆಯಲಿಲ್ಲ ಮತ್ತು ಇದನ್ನು ಪ್ರೋತ್ಸಾಹಿಸಲಿಲ್ಲ." ಅಂದದ್ದು ನೋಡಿ ಸ್ವಲ್ಪ ಗೊಂದಲ ಆಯ್ತು. ಜಾರ್ಜ್ ಪ್ರಕಾರ ಜಿ ಎನ್ ಬಿ ಅಷ್ಟು ತಟಸ್ಥರಾಗಿರಲಿಲ್ಲ. infact ಎಂ ಎಸ್ ಅನ್ನು ಮದ್ವೆ ಮಾಡ್ಕೊಳ್ಳೋದಿಕ್ಕೂ ಸಿದ್ಧರಾಗಿದ್ರು ಅನ್ನೋ ಮಾತನ್ನ ಅವರ ಕುಟುಂಬದವರೇ ಯಾರೋ ಹೇಳಿದ್ದನ್ನ ಜಾರ್ಜ್ ಬರೀತಾರೆ... ಹೀಗಿರೋವಾಗ ನಿಮ್ಮ ಮಾತಿಗೆ ಬೇರೆ ಯಾವ್ದಾದ್ರೂ source ಇದೆಯಾ? ಎಂ ಎಸ್ ಜೀವನದ ಈ ಘಟನೆಯ ಬಗ್ಗೆ ನನ್ನ ಆಸಕ್ತಿ ಯಾವ್ದೇ ಚೀಪ್ sensationalismನದ್ದಾಗದೇ ಅವರ human sideನ ಬಗೆಗಿನ ಕುತೂಹಲವಷ್ಟೆ. ಅದಕ್ಕೇ ಈ ಪ್ರಶ್ನೆ...

ಮತ್ತೆ ಪಾಶ್ಚಾತ್ಯ ಲೋಕದವರು ಆತ್ಮಚರಿತ್ರೆ ಬರೆಯುವುದಕ್ಕೂ ವೃತ್ತಿಗತ ಲೇಖಕರ ಸಹಾಯ ಪಡೆಯುತ್ತಾರೆ ಅಂತ ಹೇಳ್ತಾ ಬಹುಶಃ ಕನ್ನಡದ ಸಂದರ್ಭದಲ್ಲಿ ಈ ಪ್ರಯೋಗವಾಗಿಲ್ಲವೇನೋ ಎಂದಿದ್ದೀರಿ. ಈ ಬಗ್ಗೆ ನನಗೆ ತುಂಬಾ ನಿಖರವಾಗಿ ನೆನಪಿಲ್ಲದಿದ್ರೂ ವೀಣೆ ದೊರೆಸ್ವಾಮಿ ಅಯ್ಯಂಗಾರರ ಆತ್ಮಚರಿತ್ರೆ, ’ವೀಣೆಯ ನೆರಳಿನಲ್ಲಿ’ ಲೇಖಕಿ ಭಾರತಿ ಕಾಸರಗೋಡ್‌ರ ಸಹಕಾರದಿಂದ ಬೆಳಕು ಕಂಡಿತ್ತು ಅಂತ ನೆನಪು. ಇದು ನಾನು ಸ್ಕೂಲ್‌ನಲ್ಲಿದ್ದಾಗ, 90’ಸ್ ನಲ್ಲಿ ಬಂದಿದ್ದು, ಆಗಲೇ ನಾ ಓದಿದ್ದು... ಹಾಗಾಗಿ ಅದನ್ನ ಜೀವನ ಚರಿತ್ರೆ ಅಂತ ಪ್ರಕಟಿಸಿದ್ರೋ, ಆತ್ಮ ಚರಿತ್ರೆ ಅಂತ ಪ್ರಕಟಿಸಿದ್ರೋ ಸರಿಯಾಗಿ ನೆನಪಾಗ್ತಿಲ್ಲ, ಪುಸ್ತಕ ಹುಡುಕಿ ಹೇಳಬಲ್ಲೆ...ಆದ್ರೆ ಅಯ್ಯಂಗಾರರ ಧ್ವನಿಯಲ್ಲೇ ಪುಸ್ತಕದ ನಿರೂಪಣೆ ಇದ್ದಹಾಗೆ ನೆನಪು...

ಎಂ.ಎಸ್.ಶ್ರೀರಾಮ್ said...

ಶ್ರೀ:
ನಿಮ್ಮ ಪ್ರತಿಕ್ರಿಯೆಗ ಧನ್ಯವಾದಗಳು. ಜಿಎನ್‍ಬಿ ಎಂ.ಎಸ್ ಗೆ ಉತ್ತರ ಬರೆಯಲಿಲ್ಲ ಅನ್ನುವುದು ನಿಜ. ಆದರೆ ನೀವು ಹೇಳಿದ ಭಾಗ ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿಯಲಿಲ್ಲವೇನೋ. ಹೀಗಾಗಿ ನಾನು "ತಟಸ್ಥ" ಅಂತ ಬರೆದದ್ದು ತಪ್ಪಿರಬಹುದು. ಪುಸ್ತಕ ಓದಿ ಬಹಳ ದಿನಗಳಾದವು, ಹೀಗಾಗಿ ಈ ಭಾಗ ನನಗೆ ನೆನಪಿಗೆ ಬರುತ್ತಿಲ್ಲ. ಆದರೆ ಈ ವಾಕ್ಯಗಳನ್ನು ಬರೆಯಲು ನನಗೆ ಬೇರೆ ಯಾವ ಆಧಾರಗಳೂ ಇರಲಿಲ್ಲವಾದ್ದರಿಂದ, ತಪ್ಪು ನನ್ನದೇ..

ನಾನು ಆತ್ಮಚರಿತ್ರೆಗಳ ಬಗ್ಗೆ ಆಡಿರುವ ಮಾತು ಒಂದು ಸಾಧಾರಣ ಪ್ರಕ್ರಿಯೆಯದ್ದು. ಅದಕ್ಕೆ ಅಪವಾದಗಳು ಇದ್ದೇ ಇರುತ್ತವೆ. ಕಾರಂತರಿಗೆ ವೈದೇಹಿಯಂಥಹ ಮಹಾನ್ ಲೇಖಕಿ ನಿರೂಪಣಾ ಸಹಾಯವನ್ನು ನೀಡಿದ್ದರು. ಆದರೆ ಕನ್ನಡದಲ್ಲಿ ನಮ್ಮ ನಮ್ಮ ಅಹಂ ಮೀರಿ ಲೇಖನ ಸಾಮರ್ಥ್ಯವನ್ನು ವೃತ್ತಿಪರವಾಗಿ ಒದಗಿಸಿಕೊಡುವವರು ಬಹಳ ಕಡಿಮೆ.

ಉದಾಹರಣೆಗೆ ನಾನು ಕಾಲೇಜು ದಿನಗಳಲ್ಲಿದ್ದಾಗ ವಿಜಯಚಿತ್ರ ಅನ್ನುವ ಪತ್ರಿಕೆಯಲ್ಲಿ ರಾಜ್‌ಕುಮಾರ್ ಅವರ ಆತ್ಮಕಥೆ "ಕಥಾನಾಯಕನ ಕಥೆ" ಬರುತ್ತಿತ್ತು. ಅದನ್ನು ರಾಜ್‌ಕುಮಾರ್ ಸ್ವತಃ ಬರೆಯುತ್ತಿರಲಿಲ್ಲ ಅನ್ನಿಸುತ್ತದೆ. ಅದು ಮುಕ್ತಾಯವಾಗದೇ ಇದ್ದಕ್ಕಿದ್ದ ಹಾಗೆ ನಿಂತದ್ದು, ನಂತರ ಪುಸ್ತಕವಾಗಿ ಪ್ರಕಟಗೊಳ್ಳದ್ದು ನೋಡಿದರೆ ನಿಮಗೆ ಆಶ್ಚರ್ಯವಾಗುವುದಿಲ್ಲವೇ? ರಾಜ್‌ಕುಮಾರ್ ಅಂತಹ ವರನಟ ತಾವಾಗಿಯೇ ತಮ್ಮಾತ್ಮಚರಿತ್ರೆ ಬರೆಯದಿದ್ದರೂ ಪಾಶ್ಚಾತ್ಯ ಲೋಕದಲ್ಲಿ ಆ ಕೆಲಸ ಪ್ರಕಾಶಕರು ಮಾಡಿಸುತ್ತಿದ್ದರು! ನನ್ನ ಟಿಪ್ಪಣಿ ಈ ಹಿನ್ನೆಲೆಯಲ್ಲಿ ಓದಬೇಕೆಂದು ಮನವಿ.

ಶ್ರೀರಾಮ್

Sree said...

ನನ್ನ ಪ್ರಶ್ನೆಗಳಿಗೆ ಸಮಯಕೊಟ್ಟಿದ್ದಕ್ಕೆ ಧನ್ಯವಾದಗಳು:)
ಜಿ ಎನ್ ಬಿ ಬರೀಲಿಲ್ಲ ಅನ್ನೋದು ನಿಜವಾ? ಜಾರ್ಜ್ ಸುಮ್ಮನೆ ಸ್ಪೆಕ್ಯುಲೇಟ್ ಮಾಡಿದ್ದಾರಾ ಹಾಗಾದ್ರೆ? ಸದಾಶಿವಂ ಭದ್ರಕೋಟೆಯಲ್ಲಿ ಜಿ ಎನ್ ಬಿ ಪತ್ರಗಳು ಉಳೀದಿರಲಿಕ್ಕಿಲ್ಲ ಅಂದಿದಾರೆ ಅವರು...

ದೊರೆಸ್ವಾಮಿ ಅಯ್ಯಂಗಾರರ ಆತ್ಮಚರಿತ್ರೆಯ ಬಗ್ಗೆ ಸುಮ್ಮನೆ ಒಂದು ಮಾಹಿತಿ ಅಂತ ಸೇರಿಸಿದೆ, ಇಂತಹದ್ದೂ ಒಂದು ಪ್ರಯತ್ನ ನನಗೆ ತಿಳಿದಂತೆ ಆಗಿದೆ ಅಂತ - ಸ್ವಲ್ಪ ನನ್ನ ಉದ್ಧಟತನ ಇರಬಹುದು!:) (ಆ ಕಾಮೆಂಟ್ ಹಾಕುವಾಗ ನಾನಿನ್ನೂ ವೈದೇಹಿಯವರ ಪ್ರಯತ್ನದ ಬಗ್ಗೆ ನಿಮ್ಮ ಬ್ಲಾಗ್‌ನಲ್ಲಿ ಬರೆದದ್ದು ಓದಿರಲಿಲ್ಲ. ಆ ಪ್ರಯತ್ನದ ಬಗ್ಗೆ ನಂಗೆ ಗೊತ್ತಿರಲೂ ಇಲ್ಲ! ಓದಬೇಕು)
ಆದರೆ ಆತ್ಮಚರಿತ್ರೆಯ ಬರಹದ ಸಾಧಾರಣ ಪ್ರಕ್ರಿಯೆಯ ಬಗ್ಗೆ ನೀವು ಹೇಳಿದ್ದನ್ನ refute ಮಾಡೋದಕ್ಕಂತ ಆ ನಿದರ್ಶನ ಹೇಳಲಿಲ್ಲ. ಆ ಬಗ್ಗೆ ನೀವು ಹೇಳಿದ್ದು ನನಗೂ ಹೌದೆನ್ನಿಸಿತ್ತು.

ಮತ್ತೆ ನನ್ನ ಬ್ಲಾಗ್‌ಗೆ ಬಂದು ಕಾಮೆಂಟಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು!