ಯುದ್ಧಕಾಲೇ ಅರ್ಥಾಭ್ಯಾಸ


2001ರಲ್ಲಿ ಅಮೇರಿಕದ ಜಂಟಿ ಗೋಪುರಗಳ ಮೇಲೆ ಧಾಳಿ ನಡೆಸಿ ನೆಲಸಮ ಮಾಡಿದ ಅಲ್ ಕಾಯ್ದಾ ಉರುಳಿಸಿದ್ದು ಬರೇ ಗೋಪುರಗಳನ್ನಷ್ಟೇ ಅಲ್ಲ. ಬದಲಿಗೆ, ಯಾವುದೇ ದೊಡ್ಡ ಆರ್ಥಿಕ ಸಮಸ್ಯೆಯಿಲ್ಲದೆಯೇ, ಬಜೆಟ್ಟಿನಲ್ಲಿ ಖೋತಾ ಇಲ್ಲದೆಯೇ – ಬಿಲ್ ಕ್ಲಿಂಟನ್ನರ ಅಧ್ಯಕ್ಷೀಯಕಾಲದ ಬಂಗಾರಯುಗದ ಮತ್ತಿನಲ್ಲಿದ್ದ ಅಮೆರಿಕದ ಅರ್ಥವ್ಯವಸ್ಥೆಗೆ ಬಲವಾದ ಧಕ್ಕೆ ನೀಡಿತ್ತು. ಜಗತ್ತಿನಿತಿಹಾಸದಲ್ಲಿ ಸೆಪ್ಟೆಂಬರ್ 11 ಈಗೊಂದು ಮಹತ್ವದ ತಾರೀಖಾಗಿದೆ. ಅಂದಿನಿಂದ ವಿಮಾನಯಾನದ ನಿಯಮಗಳು ಬದಲಾಗಿವೆ, ಗುರುತಿನ ಚೀಟಿಗಳ ಅವಶ್ಯಕತೆ ಹೆಚ್ಚಾಗಿದೆ, ಭಯಭೀತಿ ಹೆಚ್ಚಾಗಿದೆ, ಭದ್ರತೆಯ ಹೆಸರಿನಲ್ಲಿನ ತಂತ್ರಜ್ಞಾನವೂ ತತ್ಫಲಿತ ಯಂತ್ರಗಳೂ, ಹೆಚ್ಚಾಗಿದೆ. ಜಗತ್ತಿನ ಅತ್ಯಂತ ಬಲಿಷ್ಠ ದೇಶವಾದ ಅಮೆರಿಕದ ದಿನನಿತ್ಯದ ಭಯಭೀತಿ ನಮಗೆ ಎಲ್ಲೆಲ್ಲೂ ಕಾಣಿಸುತ್ತದೆ.



No comments: