ದೊಡ್ಡ ದೊಡ್ಡ ಘನ ವಿಚಾರಗಳ ಬಗ್ಗೆ ಪುಟ್ಟ ಪುಟ್ಟ ಹನಿಗವಿತೆಗಳನ್ನು ಬರೆದು ನಮ್ಮೆಲ್ಲರನ್ನು ಹಗುರಾಗಿಸುತ್ತಿದ್ದ ಡುಂಡಿ ಈಗಿತ್ತಲಿಂದಾಗಿ ಸಣ್ಣ ಸಣ್ಣ ವಿಷಯಗಳ ಬಗ್ಗೆ ದೊಡ್ದ ದೊಡ್ದ ಪ್ರಬಂಧಗಳನ್ನು ಯಾವುದೇ ಬಂಧವಿಲ್ಲದೆ ಮಾತನಾಡುವಷ್ಟೇ ಸಹಜವಾಗಿ ಬರೆಯುತ್ತಿರುವುದನ್ನು ನಾವೆಲ್ಲ ಗಮನಿಸಿದ್ದೇವೆ. ಡುಂಡಿರಾಜನದ್ದು ನಿಜಕ್ಕೂ ರೌಂಡೆಡ್ ಗ್ರೌಂಡೆಡ್ ವ್ಯಕ್ತಿತ್ವ. ರೌಂಡೆಡ್ ಅಂದರೆ ಅವನು ತನ್ನ ಹೆಸರಿಗೆ ತಕ್ಕಂತೆ ಗಣಪತಿಯ ಹಾಗಿದ್ದಾನೆಂದೇನೂ ಅಲ್ಲ. ಆದರೆ ಅವನ ಕುತೂಹಲ, ಕಾಯಕ, ಓದು, ಬರಹದಲ್ಲಿ ಅವನಿಗಿರುವ ಆಸಕ್ತಿಯೇ ಅವನನ್ನು ರೌಂಡೆಡ್ ಮಾಡಿಸುತ್ತದೆ. ಹಾಗೆಯೇ ಗ್ರೌಂಡೆಡ್ ಅಂದರೆ ನಮ್ಮ ಅಲಾಯನ್ಸ್ ಏರ್‍ನ ವಿಮಾನಗಳಂತೆ ಚಲಿಸದೇ ನಿಂತ ಇಮಾರತುಗಳಲ್ಲ.
Noise and Clutter
-
Dialogue of the Deaf
The Government and the RBI
TCA Srinivasa Raghavan
Tranquebar Press, 2017
pp.308. Price: Rs.599.
The title of the book says it all. I...
6 years ago
3 comments:
ಶ್ರೀರಾಮ್,
ಡುಂಡಿರಾಜರ ಬರಹದ ಕುರಿತು ಉತ್ತಮ ಲೇಖನ ಬರೆದಿದ್ದಕ್ಕೆ ಧನ್ಯವಾದಗಳು.
"ಅಂಕಣಕಾರನನ್ನು ಪಡೆಯುವ ಹುಮ್ಮಸ್ಸಿನಲ್ಲಿ ಕವಿಯನ್ನು ಕಳೆದುಕೊಳ್ಳುವ ಅಪಾಯಕ್ಕೆ ನಾವು ಒಳಗಾಗಬಾರದು ಅನ್ನುವುದು ನನ್ನ ಕಳಕಳಿಯ ಕೋರಿಕೆ."
ಇದರ ಅರ್ಥ ಅಂಕಣಕಾರನಿಗಿಂತ ಕವಿ ಉತ್ತಮನೆಂಬುದೇ?
ವಂದನೆಗಳು.
ಡುಂಡಿರಾಜ್ ಮಟ್ಟಿಗೆ ಇದು ನಿಜ. ಅವ ಉತ್ತಮ ಹನಿಗವಿ, ಆದರೆ ಅಷ್ಟೇ ಉತ್ತಮ ಅಂಕಣಕಾರ ಅನ್ನುವುದರ ಬಗ್ಗೆ ನನಗೆ ಅನುಮಾನಗಳಿವೆ. ಅಂಕಣಕಾರನಿಗಿರಬೇಕಾದ ಓದಿನ ವಿಸ್ತಾರ,ವಿಷಯ ವೈವಿಧ್ಯದ ಬಗೆಗಿನ ಆಸಕ್ತಿ, ಅನುಭವದ ಆಳ ಡುಂಡಿಗೆ ಇಲ್ಲ ಅನ್ನಿಸುತ್ತದೆ. ರಾಪ್ ಸಂಗೀತ ಹಾಡುವವರು ರಾಗಾಲಾಪನೆ ಮಾಡಿದಂತೆ - ಒಮ್ಮೊಮ್ಮೆ ಚೆನ್ನಾಗಿ ಮೂಡಿ ಬಂದರೂ, ಮೂಲತಃ ಅವನಿಗೆ ಈ ಮೀಡಿಯಂ ಒಗ್ಗಿದ್ದಲ್ಲ ಅಂತ ನನ್ನ ಅಭಿಪ್ರಾಯ. ಆದರೆ ಅವನು ಜನಪ್ರಿಯನಾಗಿದ್ದಾನೆ. ಆದ್ದರಿಂದ ನನ್ನ ಅಭಿಪ್ರಾಯ ಸರಿಯಾದ್ದಲ್ಲದಿರಲೂ ಬಹುದು...
Aravinda Adigara "White Tiger odiddeera?
Post a Comment