ಚಿಕ್ಕಸಾಲಿಗ - ಮಹಮ್ಮದ್ ಯೂನಸ್

ನಾನು ನೋಡುತ್ತಿದ್ದಂತೆ ಕೆಲ ಪುರಾತನ ನಿಯಮಗಳು ಛಿದ್ರವಾದವು. ಹಳೆಯ ಶಾಸ್ತ್ರಗಳೆಲ್ಲ ಮಣ್ಣುಮುಕ್ಕಿದವು. ಇದ್ದ ಸ್ಥಿತಿಗೆ ಪ್ರತಿರೋಧವನ್ನು ಒಳಗಿನಿಂದಲೇ ಅದು ಕುಸಿಯುವುದನ್ನು ನಾನು ಕಂಡೆ. ಕುಸಿದು ಬಿದ್ದ ವಿಚಾರಗಳು ಇಂತಿದ್ದವು:
  • ಬಡವರು ಬಡಪಾಯಿಗಳು ಅಸಹಾಯಕರೆಂಬ ನಂಬುಗೆ;
  • ಅದರಲ್ಲೊ ಹೆಂಗಸರು ಪಾಪದವರೆಂಬ ನಂಬುಗೆ;
  • ಭೂಹೀನರು, ಬಡವರು ಸಾಲಕ್ಕೆ ಅರ್ಹರಲ್ಲ, ಅವರಿಂದ ಹಣ ವಾಪಸ್ಸಗುವುದಿಲ್ಲ ಅನ್ನುವ ನಂಬುಗೆ
  • ಬಡವರಿಗೆ ಸಹಕರಿಸಲು ಗೊತ್ತಿಲ್ಲ, ಭವಿಷ್ಯದ ಬಗ್ಗೆ ಯೋಚಿಸಬೇಕೆಂದು ತೋಚುವುದಿಲ್ಲ, ತಮ್ಮ ಒಳಿತಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿಲ್ಲ, ಸಾಲ ಪಡೆದು ಅದನ್ನು ಮರುಪಾವತಿಸುವ ಶಿಸ್ತು ಅವರಲ್ಲಿಲ್ಲ ಅನ್ನುವ ನಂಬುಗೆ
  • ಆರ್ಥಿಕ ವಿಕಾಸವಾಗುವುದು ದೊಡ್ಡ ಮೊತ್ತದ ಸರಕಾರಿ ವಲಯದಿಂದ ಬರುವ ಕೇಂದ್ರೀಕೃತ ಯೋಜನೆಗಳಿಂದ ಮಾತ್ರ ಅನ್ನುವ ನಂಬುಗೆ
ಎಲ್ಲ ನಂಬುಗೆಗಳೂ ಮಣ್ಣಿನ ಮಡಿಕೆಯಿಂದ ಮಾಡಿದ್ದರೆ ಗ್ರಾಮೀಣ್ ಬ್ಯಾಂಕಿನ ನೆಲ ಈ ಛಿದ್ರ ಚೂರುಗಳಿಂದ ತುಂಬಿರುತ್ತಿತ್ತು.
ಪೀಟರ್ ಗೋಲ್ಡ್‌ಮಾರ್ಕ್
ಅಧ್ಯಕ್ಷ ರಾಕೆಫೆಲ್ಲರ್ ಫೌಂಡೇಷನ್



ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಬ್ಯಾಂಕಿಂಗ್ ನಿಯಮಗಳನ್ನು ಕೆಲದಶಕಗಳಿಂದ ಛಿದ್ರಗೊಳಿಸುವುದರಲ್ಲಿ ನಿರತರಾಗಿದ್ದ ಮಹಮ್ಮದ್ ಯೂನಸ್‌ಗೆ ಸಂದಿದೆ. ಬಡವರಿಗೆ ಕಿರುಸಾಲಗಳನ್ನು ಕೊಡುವುದು, ಅದಕ್ಕಿಂತ ಮುಖ್ಯವಾಗಿ ಅದನ್ನು ವಾಪಸ್ಸು ಪಡೆಯುವುದು ಹೇಗೆಂದು ಜಗತ್ತಿಗೆ ತೋರಿಸಿಕೊಟ್ಟ ಯೂನಸ್ ಎಲ್ಲರಂತಲ್ಲ. ಬ್ಯಾಂಕಿಂಗ್‌ನ ಮೂಲಭೂತ ನಿಯಮಗಳನ್ನು ಛಿದ್ರಗೊಳಿಸುತ್ತಲೇ ಆತ ತಮ್ಮದೇ ಹೊಸ ನಿಯಮಗಳನ್ನು ಸ್ಥಾಪಿಸಿಬಿಟ್ಟರು. 

ಮುಂದೆ.....



7 comments:

Saamaanya Jeevi said...

ಶ್ರೀರಾಮರೆ,

ತಮ್ಮ ಇಂಗ್ಲೀಷು ಬ್ಲಾಗಿನಲ್ಲಿ ನಾನು ಹಾಕಿರುವ ಪ್ರಶ್ನೆಯನ್ನೇ ಇಲ್ಲೂ ಹಾಕುತ್ತೇನೆ.

ಯೂನುಸ್-ರಿಗೆ ಅರ್ಥಶಾಸ್ತ್ರಕ್ಕೆ ನೊಬೆಲ್ ಬಂದಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು ಎಂದೆನ್ನಿಸುವುದಿಲ್ಲವೇ?

ಶಿವು

Shiv said...

ಶ್ರೀರಾಮ್,

ಯೂನಿಸ್‍ರ ಬಗ್ಗೆ, ಗ್ರಾಮೀಣ ಬ್ಯಾಂಕ್ ಬಗ್ಗೆ ಇಷ್ಟು ಆಳವಾಗಿ ಬರಿದಿದ್ದೀರಾ.ನಿಮ್ಮ ಲೇಖನ ಓದಿ, ಗ್ರಾಮೀಣ ಬ್ಯಾಂಕಿಂಗ್ ಬಗ್ಗೆ ಸ್ಪಲ್ಪ ತಿಳಿಯಿತು.

Author said...

ಶ್ರೀರಾಮ್,
ನಿಮ್ಮ ಲೇಖನವನ್ನು ವಿಜಯಕರ್ನಾಟಕದಲ್ಲಿ ಓದಿದ್ದೆ. ಯೂನಿಸ್‍ರವರ ಬಗ್ಗೆ ಮಾಹಿತಿಯನ್ನು ಸರಳವಾಗಿ ಒದಗಿಸಿದ್ದಕ್ಕೆ ಧನ್ಯವಾದಗಳು.
ಆದರೆ ಲೇಖನವನ್ನು ಓದಿದಾಗ ಇಂಗ್ಲೀಷಿನಿಂದ ಭಾಷಾಂತರಿಸಿರುವುದು ವ್ಯಕ್ತವಾಗಿತ್ತು. ಕನ್ನಡದಲ್ಲೇ ಯೋಚಿಸಿ ಕನ್ನಡದಲ್ಲಿ ಬರೆದಿದ್ದರೆ, ಹೆಚ್ಚು ಓದುಗರನ್ನು ಪರಿಣಾಮಕಾರಿಯಾಗಿ ತಲುಪುತ್ತಿತ್ತೇನೋ ಎನಿಸುತ್ತದೆ.
ಪೂರ್ಣ ಲೇಖನವನ್ನು ಇಲ್ಲಿ ಪ್ರಕಟಿಸಿದ್ದಕ್ಕೆ ಮತ್ತೊಮ್ಮೆ ವಂದನೆಗಳು.
~ ಶಾಸ್ತ್ರಿ

Unknown said...

Jai sri ram !
VK yalli odidde
illi matte odide
derga lekhanagalu nettalliodalu kasta

ಎಂ.ಎಸ್.ಶ್ರೀರಾಮ್ said...

ಶಿವು
ನಿಮ್ಮ ಪ್ರಶ್ನೆಗೆ ತಡವಾಗಿ ಉತ್ತರಿಸುತ್ತಿದ್ದೇನೆ. ಕ್ಷಮಿಸಿ. ಯೂನಸ್‌ಗೆ ಅರ್ಥಶಾಸ್ತ್ರಕ್ಕೆ ಪುರಸ್ಕಾರ ಬರುವುದು ಸಾಧ್ಯವಿದ್ದಿಲ್ಲ. ನೀವು ಅರ್ಥಶಾಸ್ತ್ರಕ್ಕೆ ಬಂದಿರುವ ಪುರಸ್ಕಾರಗಳನ್ನು ಗಮನಿಸಿದರೆ - ಅವೆಲ್ಲಾ ಅರ್ಥಶಾಸ್ತ್ರದ ಜ್ಞಾನವೃದ್ಧಿಗೆ ಸಿಕ್ಕವುಗಳಾಗಿವೆ. ಯೂನಸ್ ಕೆಲಸದಿಂದ ಅರ್ಥಶಾಸ್ತ್ರದ ಸೂತ್ರಗಳೇನೂ ಬದಲಾಗಲಿಲ್ಲ - ಅಥವಾ ನಾವು ಈವರೆಗೆ ಅರ್ಥೈಸಿದ ಸೂತ್ರಗಳನ್ನು ಹಿಗ್ಗಿಸಿದಂತೆಯೂ ಆಗಲಿಲ್ಲ. ಸಾಲ ಕೊಡುವುದು, ಪಡೆಯುವುದೂ, ಅದಕ್ಕೆ ಬಡ್ಡಿ ಕಟ್ಟುವುದೂ ಅರ್ಥಶಾಸ್ತ್ರದ ಸಾಮಾನ್ಯ ಸೂತ್ರಗಳೇ. ಅದೇ ಸೂತ್ರಗಳನ್ನು ಯೂನಸ್ ಬಳಸಿದರು. ಆದರೆ ಅವರ ಕೊಡುಗೆ ಆ ಸೂತ್ರಗಳಡಿಯಲ್ಲಿ ಹೇಗೆ ಉತ್ತಮವಾಗಿ ಕೆಲಸ ಮಾಡಬಹುದು ಅನ್ನುವುದನ್ನು ನಿರೂಪಿಸುವುದು ಮಾತ್ರವಾಗಿತ್ತು. ಅರ್ಥಶಾಸ್ತ್ರದ ನೊಬೆಲ್ ನ ಚರಿತ್ರೆ ತೆಗೆದುಕೊಂಡರೆ ಸೂತ್ರಗಳನ್ನು ಪ್ರಸ್ತಾಪಿಸುವುದಕ್ಕೆ ಮತ್ತು ಅದನ್ನು ನಿರೂಪಿಸಿರುವುದಕ್ಕೆ ಆ ಬಹುಮಾನಗಳು ಸೀಮಿತವಾಗಿವೆಯೇ ಹೊರತು, ಅದನ್ನು ಅಳವಡಿಸಿ ಕಾರ್ಯರೂಪಕ್ಕೆ ತಂದದ್ದಕ್ಕೆ ಅಲ್ಲ. ಉದಾಹರಣೆಗೆ ಅತ್ಯುತ್ತಮ ಶಸ್ತ್ರಚಿಕಿತ್ಸೆ ಮಾಡಿದ ಡಾಕ್ಟರುಗಳಿಗೂ ಈ ಬಹುಮಾನ ದಕ್ಕಿಲ್ಲವೆಂದೇ ನನ್ನ ಅನುಮಾನ. ಆದರೆ ಶಸ್ತ್ರಚಿಕಿತ್ಸಾಜ್ಞಾನವೃದ್ಧಿಗೆ ಕಾರಣರಾದವರಿಗೆ ಇದು ಬಂದಿದೆ.

ಇನ್ನು ಬರುವ ಪ್ರಶ್ನೆ ಅಂದರೆ ಶಾಂತಿಪುರಸ್ಕಾರ ಯಾಕೆ ಬಂತು ಅನ್ನುವುದರ ಬಗ್ಗೆಯೂ ಸ್ವಲ್ಪ ಯೋಚಿಸಬಹುದು. ನನಗನ್ನಿಸಿದ ಮಟ್ಟಿಗೆ ಅತೀ ಬಡತನ ಇರುವ ಜಾಗದಲ್ಲಿ ಈ ಆರ್ಥಿಕ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದರಿಂದ - ಬಡತನದಿಂದ ಉಂಟಾಗಬಹುದಾದ ಚಡಪಡಿಕೆಯ ಹಿಂಸಾಚಾರವನ್ನು ಅವರು ಪರೋಕ್ಷವಾಗಿ ತಡೆದಿರಬಹುದು ಅನ್ನುವುದು ಇದಕ್ಕೆ ಒದಗಿಸಬಹುದಾದ ಒಂದು ಪೂರಕ-ವಾದ.

ಕುರಿಯನ್ ಕೆಲಸವೂ ಒಂದು ಥರದಲ್ಲಿ ಯೂನಸ್ ಕೆಲಸದಷ್ಟೇ ಮಹತ್ವದ್ದಾಗಿತ್ತು. ಆದರೆ ಅವರಿಗೆ ಏಕೆ ಬರಲಿಲ್ಲ/ಬರುವ ಸಾಧ್ಯತೆ ಇರಲಿಲ್ಲ ಅಂದರೆ ಅವರ ಕೆಲಸ ಭಾರತದ ಭೌಗೋಳಿಕ ಮಟ್ಟಕ್ಕೆ ಸೀಮಿತವಾಗಿತ್ತು. ಗ್ರಾಮೀಣ್ ಪದ್ಧತಿಯನ್ನು ಅನೇಕ ಬಡ ದೇಶಗಳು ತಮ್ಮದಾಗಿಸಿಕೊಂಡವಾದ್ದರಿಂದ - ವಿಶ್ವದ ಮಟ್ಟದಲ್ಲಿ ಯೂನಸ್‌ರ ಪ್ರಭಾವ ಇನ್ನೂ ಮಹತ್ವದ್ದಾಗಿತ್ತು. ಆದರೆ ಈ ವಾದ ಮದರ್ ತೆರೆಸಾಗೆ ಯಾಕೆ ಅನ್ವಯವಾಗುವುದಿಲ್ಲ ಅನ್ನುವುದು ನನಗೆ ತಿಳಿಯದು. ಅದು ತಿಳಿದಿದ್ದರೆ ಪ್ರತಿವರ್ಷ ನೋಬೆಲ್ ಯಾರಿಗೆ ಬರಬಹುದೆಂಬ ಬಗ್ಗೆ ನಮಗಿರುವ ಕುತೂಹಲ ಅಳಿದುಹೋಗುತ್ತಿತ್ತೋ ಏನೋ.

ಮತ್ತೊಬ್ಬ ಗೆಳೆಯರು ಯೂನಸ್‌ಗೂ ಪೂಜಾರಿಗೂ ಏನು ವ್ಯತ್ಯಾಸ ಅಂತ ಕೇಳಿದ್ದಾರೆ. ಅದಕ್ಕೆ ನನ್ನ ಉತ್ತರ ಇಷ್ಟೇ. ಪೂಜಾರಿಯವರು ಅರ್ಧ ಯೂನಸ್ ಮಾತ್ರ! ಅವರು ಬಡವರಿಗೆ ಸಾಲ ಕೊಡಬೇಕು ಅನ್ನುವುದನ್ನು ತಮ್ಮ ಲೋನ್ ಮೇಳಾ ಮೂಲಕ ಪ್ರತಿಪಾದಿಸಿದರು. ಆದರೆ ಯೂನಸ್, ಕೊಡಬೇಕು ಹೌದು, ಆದರೆ ಅದನ್ನು ಬಡ್ಡಿ ಸಮೇತ ವಾಪಸ್ಸೂ ಪಡೆಯಬೇಕೆಂದು ಪ್ರತಿಪಾದಿಸಿದರು. ಅದೇ ಯೂನಸ್‌ರ ಉತ್ತಮಾರ್ಧ.

ಶ್ರೀರಾಮ್

debashish said...

Hi,
I wanted to invite the author of http://kannada-kathe.blogspot.com/ to the Jury of Indibloggies 2006 but could not get his email ID, can you please send me your email ID at indibloggies@gmail.com?

Anonymous said...

ಪ್ರೀತಿಯ ಶ್ರೀರಾಮ್,
ಯೂನಿಕೋಡ್ ನಲ್ಲಿ ಇದು ನನ್ನ ಅರಂಗೇಟ್ರಂ. ಸಹಜವಾಗಿಯೇ ನಿಮಗೆ ಬರೆಯುತ್ತಿದ್ದೇನೆ. ಯೂನಸ್ ಬಗೆಗಿನ ಈ ಲೇಖನ ಬಹಳ ಉಪಯುಕ್ತವಾಗಿದೆ. ನೀವು ಇದನ್ನು ಚಿಕ್ಕ ಪುಸ್ತಕವಾಗಿ ಪ್ರಕಟಿಸಿದರೆ ಅನೇಕರು ಓದಬಹುದು. ಯೂನಸ್ ಅವರ ಪ್ರಯೋಗದ ಬಗ್ಗೆ ಬಂದ ಟೀಕೆಗಳು ಮತ್ತು ಅವರನ್ನು ಅನುಕರಿಸಿ ನಡೆದಿರುವ ಪಾಸಿಟಿವ್ ಆದ ಕೆಲಸಗಳನ್ನು ವಿವರಿಸಬಹುದಿತ್ತು. ವಿಷಯದ ಬಗ್ಗೆ ನಿಮಗಿರುವ ತಿಳಿವಳಿಕೆ ಮತ್ತು ಅದನ್ನು ಕನ್ನಡದಲ್ಲಿ ಹೇಳಬೇಕೆಂಬ ಅಪೇಕ್ಷೆ ಇವೆರಡಕ್ಕೂ ಅಭಿನಂದನೆಗಳು.
ಎಚ್.ಎಸ್.ಆರ್.