Showing posts with label ಪುಸ್ತಕ ಪರಿಚಯ. Show all posts
Showing posts with label ಪುಸ್ತಕ ಪರಿಚಯ. Show all posts

ಶಕುಂತಳಾ ತಂದ ಹೊಸ ಹುರುಪು

ಈಚೆಗೆ ಬಿಡುಗಡೆಯಾದ ಶಕುಂತಳಾ ಪುಸ್ತಕಬಿಡುಗಡೆಯ ಸಂದರ್ಭದಲ್ಲಿ ಮಾತಾಡುತ್ತಾ "ಅಶೋಕ ಹೆಗಡೆ, ವಿವೇಕ, ನಾಗರಾಜ್ ವಸ್ತಾರೆ, ಶ್ರೀರಾಮ್ ಮತ್ತು ನಾನು - ಎಲ್ಲರೂ ಸಾಹಿತ್ಯೇತರ ವಲಯದಲ್ಲಿ ಕೆಲಸ ಮಾಡುತ್ತಾ, ಕನ್ನಡದಲ್ಲಿ ಕಥೆಗಳನ್ನು ಬರೆಯುತ್ತಿರುವುದು ಅದ್ಭುತವಲ್ಲವೇ?" ಎಂದು ವಸುಧೇಂದ್ರ ಹೇಳಿದರು. "ಇರಬಹುದು, ಸೋ ವಾಟ್?" ಅಂತ ನಾಗರಾಜ ವಸ್ತಾರೆ ಅವರನ್ನು ಪ್ರಶ್ನಿಸಿದರಂತೆ. ಆದರೆ ಆಲೋಚಿಸಿ ನೋಡಿದರೆ ಎರಡೂ ಮುಖ್ಯ ಮಾತುಗಳು ಅನ್ನಿಸುತ್ತದೆ. ಭಿನ್ನ ವೃತ್ತಿಯಲ್ಲಿದ್ದವರು ಭಿನ್ನ ರೀತಿಯ ಅನುಭವವನ್ನು ಕನ್ನಡದ ಬರವಣಿಗೆಗೆ ಅಳವಡಿಸುತ್ತಾರೆ ಅನ್ನುವುದು ಒಂದು ವಾದ. ಆದರೆ ಆ ಭಿನ್ನತೆ ಹೇಗೆ ಸಾಹಿತ್ಯವನ್ನು ಪೋಷಿಸುತ್ತದೆ, ಬೆಳೆಸುತ್ತದೆ ಅನ್ನುವುದನ್ನು ನಾವು ನೋಡಬೇಕಾಗಿದೆ. ಭಿನ್ನವಾದ್ದೆಲ್ಲವೂ ಉತ್ತಮವಾಗಿರಬೇಕಿಲ್ಲ ಅನ್ನುವ ದೃಷ್ಟಿಯಿಂದ ವಸ್ತಾರೆಯವರ "ಸೋ ವಾಟ್?" ಪ್ರಶ್ನೆಯನ್ನು ನಾವು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಹೊಸ ಬರವಣಿಗೆಯನ್ನು ನಾವು ಅದರ ಭಿನ್ನತೆಯ ಕಾರಣಕ್ಕಾಗಿಯೇ ಅದು ಮುಖ್ಯ ಅಂತ ಪರಿಗಣಿಸಬೇಕಾಗಿಲ್ಲ ಅನ್ನುವ ಮಾತನ್ನು ಒಪ್ಪಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಗುರುಪ್ರಸಾದ್ ಕಾಗಿನೆಲೆಯವರ ಕಥಾಸಂಕಲನ ಶಕುಂತಳಾ ಬಗ್ಗೆ ಕೆಲವು ಮಾತುಗಳನ್ನು ಬರೆಯಹೊರಟಿದ್ದೇನೆ.


ಮುಂದೆ...