ತಮಿಳುನಾಡಿನ ದೇವಸ್ಥಾನಗಳು ಭವ್ಯ ಎನ್ನುವುದು ನಮಗೆಲ್ಲ ತಿಳಿದದ್ದೇ. ದೇವರನ್ನು ನಂಬದ ನನ್ನಂಥವರಿಗೆ ದೇವಸ್ಥಾನಗಳ ಜೊತೆ ಏನು ಕೆಲಸ? ಈ ಪ್ರಶ್ನೆಯನ್ನು ನಾನು ಅನೇಕ ಬಾರಿ ಕೇಳಿಕೊಂಡಿದ್ದರೂ ದೇವಸ್ಥಾನಗಳಿಗೆ ಹೋಗುವುದಿಲ್ಲ ಎನ್ನುವ ನಿಲುವನ್ನು ನಾನು ಎಂದೂ ತೆಗೆದುಕೊಂಡಿಲ್ಲ.
ನಾನು ಓದಿರುವ ಲೇಖಕರಲ್ಲಿ ಅತ್ಯಂತ ಪ್ರಭಾವಶಾಲಿಯಾದ ಅದ್ಭುತ ಲೇಖಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಉಂಬರ್ಟೋ ಇಕೊ. ಆತ ಪತ್ರಿಕೆಗಳಲ್ಲಿ ಬರೆಯುವ ಲೇಖನಗಳು ಸಮಕಾಲೀನ ಆಗುಹೋಗುಗಳಿಗೆ ಬುದ್ಧಿಜೀವಿಯೊಬ್ಬನ ಸರಳ ಹಾಸ್ಯಭರಿತ ಭಾಷೆಯ ಪ್ರತಿಕ್ರಿಯೆಯಾದರೆ, ಭಾಷಾಶಾಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ಗಹನ ಲೇಖನಗಳು ಆ ಕ್ಷೇತ್ರದಲ್ಲಿ ಎದ್ದು ನಿಲ್ಲುತ್ತವೆ. ಕೆಲವರ್ಷಗಳ ಹಿಂದೆ deconstruction [ನಿರಚನೆ]ಯ ಬಗ್ಗೆ ಬರೆದಿದ್ದ ಪಾಂಡಿತ್ಯ ಪೂರ್ಣ ಲೇಖನವನ್ನು ನಾನು ಓದಿದ್ದ ನೆನಪು. ಕಳೆದ ವರ್ಷ ಇಕೊ ಭಾರತದಲ್ಲಿ ಹಲವುದಿನಗಳು ಇದ್ದು ಹೋದರು. ಕಾದಂಬರಿಕಾರರಾಗಿ ಇಕೋ ತಮ್ಮ ಬರವಣಿಗೆಯಲ್ಲಿ ಇತರ ಅನೇಕರು ತರಲು ಸಾಧ್ಯವಾಗದ ಅನೇಕ ಆಯಾಮಗಳನ್ನು ತರಲು ಪ್ರಯತ್ನಿಸುತ್ತಾರೆ. ಹಾಗೆ ಇತರೆ ಆಯಾಮಗಳನ್ನು ತರುವಾಗ ಅದನ್ನು ಕೇವಲ ಉತ್ಪ್ರೇಕ್ಶೆ ಅಥವಾ ಅತಿರಂಜಕತೆಗಾಗಿ ತರದಿರುವ ಎಚ್ಚರವನ್ನು ಅವರು ವಹಿಸುತ್ತಲೇ ತಾವು ಬರೆದದ್ದನ್ನು ಆಸಕ್ತಿಕರವಾಗಿ ಇರುವಂತೆ ಮಾಡುತ್ತಾರೆ. ಅದಕ್ಕೇ ನೇಮ್ ಆಫ್ ದ ರೋಸ್ ಕಾದಂಬರಿಯಲ್ಲಿ [ಮತ್ತು ಅದನ್ನು ಬರೆದ ಪ್ರಕ್ರಿಯೆಯ ಬಗ್ಗೆ ಬರೆದ ರಿಫ್ಲೆಕ್ಷನ್ಸ್ ಆನ್ ದ ನೇಮ್ ಆಫ್ ದ ರೋಸ್] ಅವರ ಬರವಣಿಗೆ ಡಾವಿಂಚಿ ಕೋಡ್ನಂತಹ ಕಾದಂಬರಿಗಿಂತ ಎಷ್ಟು ಭಿನ್ನವಾಗಿದೆ ಎನ್ನುವುದನ್ನು ನಾವು ಕಾಣಬಹುದು. ಎರಡೂ ಕಾದಂಬರಿಗಳು ಚರಿತ್ರೆಯ ಕೆಲ ಘಟನೆಗಳ ಸಂಶೋಧನೆಯ ಆಧಾರದ ಮೇಲೆ ಬರೆದವುಗಳಾದದ್ದರಿಂದ ನಾವು ಈ ವ್ಯತ್ಯಾಸವನ್ನು ಸುಲಭವಾಗಿ ನೋಡಬಹುದು. ಇದಲ್ಲದೇ ಇಕೋ ಅವರ ಕಾದಂಬರಿಗಳನ್ನು ಸುಮ್ಮನೆ ತಿರುವಿಹಾಕುತ್ತಲೂ ಇರಬಹುದು. ಅವರ ಬರವಣೆಗೆಯ ಬಿಡಿಭಾಗಗಳೇ ಮನಸ್ಸಿಗೆ ಸಾಕಷ್ಟು ಗ್ರಾಸವನ್ನು ಒದಗಿಸುತ್ತವೆ.
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
-
ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ
ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು
ಗಮನಿಸುವುದು ...
ಸುರಂಗದಂಗಡಿಗಳು
-
ಚರ್ಚಗೇಟ್ ಬಳಿಯ
ಸುರಂಗದ ಕತ್ತಲಲ್ಲಿ ಎಷ್ಟೊಂದು ಜನ -
ಹುಡುಕಿ ಹೊರದಾರಿಗಳ ಒಳದಾರಿಗಳಿಂದ ಸಹಜ
ನಡೆಯುವವರು.
ಪುಸ್ತಕ ಪತ್ರಿಕೆ ಮಕ್ಕಳ ಆಟಿಕೆಗಳ ವ್ಯಾಪಾರಿಗಳು
ಸೂರ್ಯಾಸ್ತದವರೆಗೂ
ಸುರಂಗದಲ್ಲಿ...
Big Data Big Concerns
-
Weapons of Math Destruction: How Big Data Increases Inequality and
Threatens Democracy
Cathy O’Neil
Allen Lane, 2016
pp.259. Price £.12.99
These are the ...
ಶಾಂತಿ ಮತ್ತು ಯುದ್ಧ
-
ಮೂಲ: ಮೊಆಸಿರ್ ಸ್ಕ್ಲೇರ್ (ಬ್ರಜಿಲ್) ಇಂಗ್ಲೀಷಿಗೆ: ಟ್ರಿಸಿಯಾ ಫೀನಿ
ಕನ್ನಡಕ್ಕೆ: ಎಂ.ಎಸ್.ಶ್ರೀರಾಮ್
ಯುದ್ಧಕ್ಕೆ ತಡವಾಗಿಬಿಟ್ಟಿದ್ದರಿಂದ ನಾನು ಟ್ಯಾಕ್ಸಿ ಹಿಡಿಯಬೇಕಾಯಿತು. ಈಚೆಗೆ ಟ್ಯಾಕ್...
ಮೀನಿನ ಆಸೆಗಳು
-
ಟಾಕಿಕುಚಿ ಶುಷೋ ಕನ್ಯೆಯ ಅಲಂಕಾರ ಕವಚಿಟ್ಟ ಅಸಂಖ್ಯ ಮೇಣದ ಬತ್ತಿಗಳ ಬೂದಿ ಪಾರದರ್ಶಕ ಮರದ
ಹೂಕೊಂಬೆಗಳು ಅನಂತ ಕನ್ನಡಿಗಳ ಘರ್ಜನೆ ಮತ್ತು ಮನೆ ಕಿಟಕಿಗಳ ಭಾವಾತಿರೇಕದ ನಡುಕ ನನ್ನಿಡೀ
ದೇಹ ತನ್...
ಕೃಷಿ ಮಾರುಕಟ್ಟೆಯ ವಿಚಾರಗಳು.
-
ನಮ್ಮ ಸರಕಾರ ಕೆಲವು ದಿನಗಳ ಹಿಂದಷ್ಟೇ ನೂತನ ಕೃಷಿ ಮಾರಾಟ ನೀತಿಯನ್ನು ಪ್ರಕಟಮಾಡಿದೆ. ನೂತನ
ನೀತಿಯಲ್ಲಿ ರೈತಪರ ಮತ್ತು ಕ್ರಾಂತಿಕಾರಿ ವಿಚಾರಗಳಿರಬಹುದೆಂದು, ಆಶಿಸಿದವರಿಗೆ
ನಿರಾಶೆಯನ್ನುಂ...
ಅಂತರರಾಷ್ಟ್ರೀಯ ಬುಕರ್ ಗೆ ಅನಂತಮೂರ್ತಿಯವರ ಓಟ!
-
ಅನಂತಮೂರ್ತಿಯವರಿಗೆ ಅಂತರರಾಷ್ಟ್ರೀಯ ಮ್ಯಾನ್ ಬುಕರ್ ಬಹುಮಾನ ಬರುವುದೋ ಇಲ್ಲವೋ ಎನ್ನುವ
ಸಸ್ಪೆನ್ಸ್ ಈಗ ಮುಗಿದಿದೆ. ಮತ್ತೊಮ್ಮೆ ಅದು ಇಂಗ್ಲೀಷ್ ಮಹಾಮಾತೆಯ ಪಾಲಾಗಿದೆ. ಇದರ ಬಗ್ಗೆ
ಅಲ್ಲಲ...
ಬಂಡವಾಳಶಾಹಿ ತತ್ವದ ನಿರಂತರತೆ?
-
ಈಚೆಗೆ ನಡೆದ ಒಂದು ಸೆಮಿನಾರಿನಲ್ಲಿ ಬಂಡವಾಳಶಾಹಿ ಸೂತ್ರಗಳು ನಿರಂತರವೇ, ಅಥವಾ ಆ ತತ್ವದ
ಭವಿಷ್ಯ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನು ಚರ್ಚೆಗೊಳಪಡಿಸಿದ್ದರು. ಮ್ಯಾನೇಜ್ ಮಂಟ್
ಪಠಿಸುವ ಐ...
ಲೈಫ್ ಸೈಕಲ್
-
ಬೆಂಗಳೂರಿನ ಜಯನಗರ ಪ್ರಾಂತವನ್ನು ಸೈಕಲ್ ಸ್ನೇಹೀ ಪ್ರಾಂತವೆಂದು ಘೋಷಿಸಿ ರಸ್ತೆಯ
ಇಬ್ಬದಿಗಳಲ್ಲೂ ಸೈಕಲ್ ಗುರುತಿನ ಚಿತ್ರವನ್ನು ಹಾಕಿದ್ದಾರೆ. ಭಾಜಪದ ಶಾಸಕರ ಕ್ರಮದಿಂದ
ಯಡ್ಯೂರಪ್ಪನವರ ಕೆ...
ರೂಮಿ ಟೋಪಿ
-
[ಈ ಲೇಖನವನ್ನ ನಾನು ೧೯೯೦ರಲ್ಲಿ ಬರೆದೆ. ಮೊದಲು ಇದನ್ನ ಎಲ್ಲಿ ಪ್ರಕಟಮಾಡುವುದೋ
ತಿಳಿಯಲಿಲ್ಲ. ಆಗ ಬ್ಲಾಗ್ ಇದ್ದಿದ್ದರೆ ಆ ಸಮಸ್ಯೆಯೇ ನನಗೆ ಎದುರಾಗುತ್ತಿರಲಿಲ್ಲ! ಕಡೆಗೆ
ಸುಮಾರು ಯೋಚನೆಯ...
ಯಕ್ಷ ಪ್ರಶ್ನೆ
-
ಕಛ್ ಪ್ರಾಂತದ ಭುಜ್ ನಗರಕ್ಕೆ ಮತ್ತೊಮ್ಮೆ ಭೇಟಿ ನೀಡಿದೆ. ಸ್ಥಳೀಯ ಚುನಾವಣೆಯ ಪ್ರಚಾರ
ಭರದಿಂದ ನಡೆಯುತ್ತಿತ್ತು. ಕಛ್ ಪ್ರಾಂತದಲ್ಲಿ ಮೋದಿಯ ಮೂರು ಆಯಾಮದ ಚಿತ್ರದ ಮೂಲಕ ಪ್ರಚಾರವೂ
ನಡೆಯುತ...
ತೇಲ್ ಮಾಲಿಶ್
-
“ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು?” ಎಂದು
ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. “ಯಾಕೆ? ಬೇರೆಲ್ಲದರೂ ಹೋಗಬೇಕೂ
ಅಂತಾನಾ? ಹ...
ಅಪಘಾತ
-
ಶ್ರಾವಣಕುಮಾರ ತನ್ನ ಕೆಲಸದ ಬಗ್ಗೆ ಯೋಚಿಸುತ್ತಾ ಬೈಕಿನ ಆಕ್ಸಿಲರೇಟರ್ ಜೋರಾಗಿ ತಿರುಗಿಸಿದ.
ಘಂಟೆಗೆ ನಲವತ್ತರ ವೇಗ ತೋರಿಸುತ್ತಿದ್ದ ಮುಳ್ಳು ಕ್ರಮೇಣ ಅರವತ್ತು ಕೀಲೋಮೀಟರ್ ಕಡೆಗೆ
ಸಾಗಿತ್...
ಕಪಾಟಿನೊಳಗಿನ ನೆನಪುಗಳು
-
ಭಾಸ್ಕರರಾಯರು ತಮ್ಮ ಹಳೇ ಕಪಾಟನ್ನು ಕೆದರುತ್ತಾ ಕುಳಿತಿದ್ದರು. ಅವರು ನಿವೃತ್ತಿ
ಪಡೆದಾಗಿನಿಂದಲೂ ಹಾಗೇ. ಯಾವುದೋ ಲೋಕದಲ್ಲಿದ್ದಂತಿರುವುದು, ಏನನ್ನೋ
ನೆನಪುಮಾಡಿಕೊಳ್ಳುವುದು. ಇದ್ದಕ್ಕಿದ್ದ...
ಸೆಪ್ಟೆಂಬರ್ ೫ ರ ವಿಚಾರಗಳು
-
"When I was a boy of 14, my father
was so ignorant I could hardly stand to
have the old man around. But when
I got to be 21, I was astonished at how
much...