ವಿಕಾಸ ವಿತ್ತೀಯ ಸಂಸ್ಥೆಗಳೂ, ವ್ಯಾಪಾರಿ ಬ್ಯಾಂಕುಗಳೂ...

ಅಹಮದಾಬಾದಿನ ಮಹಿಳಾ ಸೇವಾ ಬ್ಯಾಂಕಿನಲ್ಲಿ ನೌಕರರು, ಗ್ರಾಹಕರು, ಶೇರುದಾರರು, ಪಾಲಕವರ್ಗದವರು ಎಲ್ಲರೂ ಮಹಿಳೆಯರೇ. ಸೇವಾ ಬ್ಯಾಂಕಿರುವುದು ಆಧುನಿಕ ಕಟ್ಟಡದಲ್ಲಿ. ಪಕ್ಕದಲ್ಲಿ ಬ್ಯಾಂಕ್ ನ್ಯಾಷನಲ್ ದ ಪಾರಿಬಾ ಎಂಬ ವಿದೇಶೀ ಬ್ಯಾಂಕಿನ ಚಮಕ್ ದಾರ್ ಕಾರ್ಯಾಲಯವಿದೆ. ಸೇವಾ ಬ್ಯಾಂಕಿನ ಗ್ರಾಹಕರು ತಳ್ಳುಗಾಡಿಯಲ್ಲಿ, ರಸ್ತೆಬದಿಯಲ್ಲಿ ತರಕಾರಿ ಮಾರುವವರು, ಚಿಂದಿ ವ್ಯಾಪಾರದವರು, ಹರಕಲು ಬಟ್ಟೆ ಧರಿಸಿರುವವರು. ಇವರಿಗೆ ಈ ಕಟ್ಟಡಕ್ಕೆ ಬರಲು ಮುಜುಗರವಾಗುತ್ತದೆ. ಬ್ಯಾಂಕ್ ಪಾರಿಬಾದ ಸೆಂಟೇರಿಸಿ ಪ್ಯಾಂಟೇರಿಸಿ ಕಂಠಕ್ಕೆ ಟೈ ಕಟ್ಟಿದ ಗ್ರಾಹಕರ ನೋಟವನ್ನು ತಪ್ಪಿಸಲು, ಮೊದಲ ಮಹಡಿಯ ಹಿಂಬದಿಯಿಂದ ಒಂದು ಪ್ರತ್ಯೇಕ ದ್ವಾರವನ್ನು ಮಾಡಿಸಿಕೊಂಡು ತಮಗೆ ಆಪ್ಯಾಯಮಾನವಾಗುವ ರೀತಿಯಲ್ಲಿ ಕಾರ್ಯಾಲಯವನ್ನು ರೂಪಿಸಿಕೊಂಡಿದ್ದಾರೆ. ಬ್ಯಾಂಕನ್ನು ಹೊಕ್ಕರೆ ಗಿಜಿಗಿಜಿ ಜನ, ಮಕ್ಕಳು, ಕುರುಕಲು ತಿಂಡಿಯ ವ್ಯಾಪಾರ. ಸಂತೆಯ ಅನುಭವವನ್ನು ಈ ಮಹಿಳೆಯರು ಕೇಳಿ ಮಾಡಿಸಿಕೊಂಡಿದ್ದಾರೆ.
No comments: