ವ್ಯಾಪಾರಿ ಜಗತ್ತಿನಲ್ಲಿರುವ ಸಂಸ್ಥೆಗಳೆಲ್ಲಾ ಮಾರುಕಟ್ಟೆಯ ನಿಯಮಾನುಸಾರ ನಡೆದು ಮೂಲಧನವನ್ನು ಒದಗಿಸುವವರ ಶ್ರೀಮಂತಿಕೆಯನ್ನು ಬೆಳೆಯಿಸುತ್ತವೆ. ಈ ಸಂಸ್ಥೆಗಳು ಲಾಭವನ್ನು ಮೂಲಧನ ನೀಡಿದವರಿಗೆ ಲಾಭಾಂಶವನ್ನಾಗಿ ಹಂಚಿಡುತ್ತವೆ. ಕೆಲವು ಸಂಸ್ಥೆಗಳಿಗೆ ಲಾಭದ ಒಂದು ಭಾಗವನ್ನು ಸಾಮಾಜಿಕ ಜವಾಬ್ದಾರಿಯಾಗಿ ಅಭಿವೃದ್ಧಿಯ ಕೆಲಸಗಳಿಗೆ ಪ್ರತ್ಯೇಕವಾಗಿಡುವ ಪರಿಪಾಠವಿದೆ. ಇನ್ಫೋಸಿಸ್ ತನ್ನ ಲಾಭಾಂಶದ ಒಂದು ಪ್ರತಿಶತ ಭಾಗವನ್ನು ಸುಧಾ ಮೂರ್ತಿಯ ಅಧ್ಯಕ್ಷತೆಯ ಇನ್ಫೋಸಿಸ್ ಫೌಂಡೇಷನ್ನಿಗೆ ನೀಡುತ್ತದೆ. ಇದಲ್ಲದೇ ತಮ್ಮ ವೈಯಕ್ತಿಕ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ನೀಡುವ/ಉಪಯೋಗಿಸುವ ಉದಾಹರಣೆಗಳಾಗಿ ಬಿಲ್ ಗೇಟ್ಸ್, ವಾರನ್ ಬಫೆಟ್, ನಿಲೇಕಣಿ ದಂಪತಿಗಳು,ಪ್ರೇಂಜಿ ಹೀಗೆ ಅನೇಕರಿದ್ದಾರೆ. ಇವೆಲ್ಲಕ್ಕೂ ಅವರುಗಳ ವೈಯಕ್ತಿಕ ನಿರ್ಧಾರವೇ ಮೂಲಪ್ರೇರಣೆಯಾಗಿರುತ್ತದೆ. ಸ್ಟೀವ್ ಜಾಬ್ಸ್ ನಂತಹ ಯಶಸ್ವೀ ವ್ಯಾಪಾರಿ ತನ್ನ ಜೀವನದಲ್ಲಿ ಯಾವುದೇ ದೊಡ್ಡ ದೇಣಿಗೆಯನ್ನೂ ನೀಡದೇ ಇದ್ದುಬಿಟ್ಟ ಎನ್ನುವ ಟೀಕೆಗೆ ಒಳಗಾದರೂ, ಅದು ಆತನ ವೈಯಕ್ತಿಕ ನಿರ್ಧಾರವೆಂದು ಎಲ್ಲರೂ ತೆಪ್ಪಗಾದರು.
ಮುಂದೆ......
No comments:
Post a Comment