ಸಹಕಾರ ಸಂಘವೊಂದರಲ್ಲಿ ಅಧ್ಯಕ್ಷರು ತಮ್ಮ ಸಂಘದ ಮುಂದೆ ವಾಚನಾಲಯವನ್ನು ಏರ್ಪಾಟು ಮಾಡಿದ್ದರು. "ಸಂಘದ ಮುಂದೆ ಹೀಗೆ ವಾಚನಾಲಯವನ್ನು ಏರ್ಪಾಟು ಮಾಡುವುದರಲ್ಲಿ ಏನಾದರೂ ಅಂತರಾರ್ಥವಿದೆಯೇ?" ಎಂದು ನಾನು ಕೇಳಿದ್ದಾಗ ಆತ ಎರಡು ಕಾರಣಗಳನ್ನು ನನ್ನ ಮುಂದಿಟ್ಟಿದ್ದರು. "ಒಂದು: ವಾಚನಾಲಯವಿದ್ದರೆ ಜನ ಇಲ್ಲಿಗೆ ಬರುತ್ತಾರೆ. ಹೆಚ್ಚೆಚ್ಚು ಜನರು ಬಂದರೆ ಮಾತ್ರ ಸಹಕಾರ ಸಂಘಕ್ಕೆ ಶೋಭೆ. ನಮ್ಮ ಚಟುವಟಿಕೆ ನಿರಂತರವಾಗಿ ನಡೆಯಲು ವಾಚನಾಲಯ ಜನರನ್ನು ಸೆಳೆವ ಸಾಧನ. ಎರಡು: ಹೆಚ್ಚು ಜನರಿದ್ದಷ್ಟಕ್ಕೂ ಓಡಾಟ ಹೆಚ್ಚಿದಷ್ಟಕ್ಕೂ ಭ್ರಷ್ಟಾಚಾರಕ್ಕೆ ಅವಕಾಶಗಳು ಕಡಿಮೆಯಾಗುತ್ತದೆ. ನಮ್ಮ ಗ್ರಾಮಸಮಾಜದಲ್ಲಿ ಜನರನ್ನು ಸಾಕ್ಷಿಯಾಗಿಟ್ಟೇ ಭ್ರಷ್ಟರಾಗುವ ಸ್ಥಿತಿಗೆ ನಾವಿನ್ನೂ ತಲುಪಿಲ್ಲವೆಂದೇ ನನ್ನ ನಂಬಿಕೆ. ಇದೂ ಒಂದು ರೀತಿಯ ಪಾರದರ್ಶಕತೆ."
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
-
ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ
ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು
ಗಮನಿಸುವುದು ...
6 years ago
No comments:
Post a Comment